ಕೊಲಂಬೊ(ಡಿ.06): ಏಕ​ದಿನ ವಿಶ್ವ​ಕಪ್‌ನಲ್ಲಿ ಕಳಪೆ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ತನ್ನ ಕೋಚಿಂಗ್‌ ಸಿಬ್ಬಂದಿ​ಯನ್ನು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಬದ​ಲಿಸಿದೆ. ದಕ್ಷಿಣ ಆಫ್ರಿ​ಕಾದ ಮಿಕಿ ಆರ್ಥರ್‌ರನ್ನು ನೂತ​ನ ಪ್ರಧಾನ ಕೋಚ್‌ ಆಗಿ ಗುರು​ವಾರ ಘೋಷಿ​ಸ​ಲಾ​ಯಿತು. 

ವಿಶ್ವಕಪ್‌ ಸೋಲು: ಪಾಕ್ ಕೋಚ್‌ಗೆ ಗೇಟ್‌ಪಾಸ್

ಆರ್ಥರ್‌ 2 ವರ್ಷಗಳ ಅವ​ಧಿಯ ಗುತ್ತಿ​ಗೆಗೆ ಸಹಿ ಹಾಕಿ​ದ್ದಾರೆ ಎಂದು ತಿಳಿ​ದು ಬಂದಿದೆ. ಅವರು ಈ ಮೊದಲು ಆಸ್ಪ್ರೇ​ಲಿಯಾ, ದಕ್ಷಿಣ ಆಫ್ರಿಕಾ ಹಾಗೂ ಪಾಕಿ​ಸ್ತಾನ ತಂಡ​ಗಳ ಕೋಚ್‌ ಆಗಿ ಕಾರ್ಯ​ನಿ​ರ್ವ​ಹಿ​ಸಿ​ದ್ದರು. ಪಾಕಿ​ಸ್ತಾನ ತಂಡ ವಿಶ್ವ​ಕಪ್‌ನಲ್ಲಿ ಕಳಪೆ ಪ್ರದ​ರ್ಶನ ತೋರಿ​ದ ಕಾರಣ, ವಿಶ್ವ​ಕಪ್‌ ಬಳಿಕ ಆರ್ಥರ್‌ರನ್ನು ಕೋಚ್‌ ಸ್ಥಾನ​ದಿಂದ ವಜಾ​ಗೊ​ಳಿ​ಸ​ಲಾ​ಗಿತ್ತು. 

ಮಾಲಿಂಗ U ಟರ್ನ್‌: ಇನ್ನೆ​ರಡು ವರ್ಷ ನಿವೃತ್ತಿಯಿ​ಲ್ಲ!

ಇನ್ನು ಜಿಂಬಾಬ್ವೆಯ ಮಾಜಿ ಆಟ​ಗಾ​ರ ಗ್ರಾಂಟ್‌ ಫ್ಲವರ್‌ ನೂತನ ಬ್ಯಾಟಿಂಗ್‌ ಕೋಚ್‌ ಆಗಿ ನೇಮ​ಕ​ಗೊಂಡರೆ, ಆಸ್ಪ್ರೇ​ಲಿ​ಯಾದ ಡೇವಿಡ್‌ ಸಾಕೆರ್‌ ಬೌಲಿಂಗ್‌ ಕೋಚ್‌ ಹುದ್ದೆ ಅಲಂಕ​ರಿ​ಸಿ​ದ್ದಾರೆ. 2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಲಂಕಾ ಪಡೆ ಸೆಮಿಫೈನಲ್ ಪ್ರವೇಶಿಸಲು ವಿಫಲವಾಗಿತ್ತು. 6ನೇ ಸ್ಥಾನದೊಂದಿಗೆ ವಿಶ್ವಕಪ್ ಅಭಿಯಾನ ಅಂತ್ಯಗೊಳಿಸಿತ್ತು.