ಕೊಲಂಬೊ(ನ.21): ಶ್ರೀಲಂಕಾ ನಾಯಕ ಹಾಗೂ ಹಿರಿಯ ವೇಗಿ ಲಸಿತ್‌ ಮಾಲಿಂಗ ತಮ್ಮ ನಿವೃತ್ತಿ ನಿರ್ಧಾರವನ್ನು ಬದ​ಲಿ​ಸಿ​ದ್ದಾರೆ. 2020ರ ಟಿ20 ವಿಶ್ವ​ಕಪ್‌ ಬಳಿಕ ನಿವೃ​ತ್ತಿ ಪಡೆ​ಯು​ವು​ದಾಗಿ ಇದೇ​ ವರ್ಷ ಮಾರ್ಚ್’ನಲ್ಲಿ ಘೋಷಿ​ಸಿದ್ದ ಮಾಲಿಂಗ, ಇದೀಗ ಇನ್ನು 2 ವರ್ಷ ಮುಂದು​ವ​ರಿ​ಯು​ವು​ದಾಗಿ ತಿಳಿ​ಸಿ​ದ್ದಾರೆ. 

ಪಾಕಿಸ್ತಾನದಲ್ಲಿ ಕ್ರಿಕೆಟ್ ಸರಣಿ ಡೌಟ್; ನರಕ ಪ್ರವಾಸಕ್ಕೆ 10 ಲಂಕಾ ಕ್ರಿಕೆಟಿಗರ ನಕಾರ!

‘ಟಿ20ಯಲ್ಲಿ 4 ಓವರ್‌ ಬೌಲ್‌ ಮಾಡ​ಬೇ​ಕಷ್ಟೆ. ನನ್ನ ಕೌಶ​ಲ್ಯದ ನೆರ​ವಿ​ನಿಂದ ಅದನ್ನು ನಿಭಾ​ಯಿ​ಸಲು ಸಾಧ್ಯ ಎಂದು ನನ​ಗ​ನಿ​ಸು​ತ್ತಿದೆ. ವಿಶ್ವ​ದಾ​ದ್ಯಂತ ನಾನು ಟಿ20 ಟೂರ್ನಿ​ಗ​ಳನ್ನು ಆಡಿ​ದ್ದೇನೆ. ಹೀಗಾಗಿ ಇನ್ನೂ 2 ವರ್ಷ ಮುಂದು​ವ​ರಿ​ಯ​ಬ​ಹುದು ಎನ್ನುವ ವಿಶ್ವಾಸ ನನ​ಗಿದೆ’ ಎಂದು ಮಾಲಿಂಗ ಹೇಳಿ​ದ್ದಾರೆ. ಟಿ20 ವಿಶ್ವ​ಕಪ್‌ನಲ್ಲಿ ತಮಗೆ ತಂಡ ಮುನ್ನ​ಡೆ​ಸುವ ಅವ​ಕಾಶ ಸಿಗ​ಲಿದೆಯೇ ಎನ್ನು​ವು​ದನ್ನು ಲಂಕಾ ಕ್ರಿಕೆಟ್‌ ಮಂಡ​ಳಿ​ಯಿಂದ ತಿಳಿ​ಯ​ಲು ಕಾತ​ರ​ರಾ​ಗಿ​ರು​ವು​ದಾಗಿ ಮಾಲಿಂಗ ಹೇಳಿ​ದ್ದಾರೆ.

36ರ ಹರೆಯದಲ್ಲಿ ಮಾಲಿಂಗ ಹ್ಯಾಟ್ರಿಕ್; ಸಾಧನೆ ಕೊಂಡಾಡಿದ ಫ್ಯಾನ್ಸ್!

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ ನೂರು ವಿಕೆಟ್ ಕಬಳಿಸಿರುವ ಏಕೈಕ ಬೌಲರ್ ಎನಿಸಿರುವ ಮಾಲಿಂಗ, ಲಂಕಾ ತಂಡವು ಕೌಶಲ್ಯಯುಕ್ತ ಬೌಲರ್’ಗಳ ಕೊರತೆಯನ್ನು ಎದುರಿಸುತ್ತಿದೆ. ಈ ಕೊರತೆಯನ್ನು ಒಂದು-ಒಂದೂವರೆ ವರ್ಷದಲ್ಲಿ ಸರಿಪಡಿಸಲು ಸಾಧ್ಯವಿಲ್ಲ. ಮುಖ್ಯವಾಗಿ ತಾಳ್ಮೆ ಬೇಕಾಗುತ್ತದೆ ಎಂದು ಹೇಳಿದ್ದಾರೆ.