* ಆಫ್ಘಾನಿಸ್ತಾನದ ತಾಲಿಬಾನಿಗಳನ್ನು ಬೆಂಬಲಿಸಿದ ಅಫ್ರಿದಿ* ಅವರು ಬದಲಾಗಿದ್ದಾರೆ ಎಂದ ಪಾಕಿಸ್ತಾನ ಮಾಜಿ ಕ್ರಿಕೆಟ್ ನಾಯಕ*ಅಫ್ರಿದಿ ಹೇಳಿಕೆಗೆ ವ್ಯಕ್ತವಾಯ್ತು ವ್ಯಾಪಕ ಟೀಕೆ

ಇಸ್ಲಾಮಾಬಾದ್(ಸೆ.01)‌: ತಾಲಿಬಾನಿಗಳು ಬದಲಾಗಿದ್ದಾರೆ. ಸಕಾರಾತ್ಮಕವಾಗಿ ಅಧಿಕಾರ ನಡೆಸಲಿದ್ದಾರೆ. ಇದು ಅಫ್ಘಾನಿಸ್ತಾನ ಕ್ರಿಕೆಟ್‌ ತಂಡಕ್ಕೆ ಆಶಾದಾಯಕ ಬೆಳವಣಿಗೆಯಾಗಲಿದೆ ಎಂದು ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಶಾಹಿದ್‌ ಅಫ್ರಿದಿ, ಉಗ್ರರನ್ನು ಹೊಗಳಿದ್ದಾರೆ. ಅಫ್ರಿದಿಯ ಈ ನಡೆ ವ್ಯಾಪಕ ಟೀಕೆಗೆ ಗುರಿಯಾಗಿದೆ.

ತಾಲಿಬಾನಿಗಳು ಬದಲಾವಣೆಯೊಂದಿಗೆ ಬಂದಿದ್ದಾರೆ. ಸ್ತ್ರೀಯರು ಉದ್ಯೋಗಕ್ಕೆ ಹೋಗಲು ಅವರು ಅವಕಾಶ ನೀಡಲಿದ್ದಾರೆ. ತಾಲಿಬಾನ್‌ಗೆ ಕ್ರಿಕೆಟ್‌ ತುಂಬಾ ಇಷ್ಟ. ಹಾಗಾಗಿ ಅಫ್ಘಾನಿಸ್ತಾನ ಪುರುಷ ಕ್ರಿಕೆಟ್‌ ತಂಡಕ್ಕೆ ಹೆಚ್ಚಿನ ಅನುಕೂಲ ದೊರೆಯಲಿದೆ. ಪಾಕಿಸ್ತಾನದ ವಿರುದ್ಧ ಕ್ರಿಕೆಟ್‌ ಸರಣಿ ನಡೆಸಲು ತಾಲಿಬಾನಿಗಳು ಅವಕಾಶ ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಆಫ್ಘನ್‌ನಲ್ಲಿ ಇರಾನ್‌ ಮಾದರಿ ಸರ್ಕಾರ?

Scroll to load tweet…

ಶಾಹಿದ್ ಅಫ್ರಿದಿಯವರ ಈ ಹೇಳಿಕೆ ಜಾಗತಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಅಫ್ರಿದಿ ತಾಲಿಬಾನ್‌ ಪ್ರೀಮಿಯರ್ ಲೀಗ್‌ ಆಯೋಜಿಸಲಿದ್ದಾರೆ ಎಂದರೆ, ಮತ್ತೊಬ್ಬರು ತಾಲಿಬಾನ್ ಬೆಂಬಲಿಸಿದ ನಿಮಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದ್ದಾರೆ.

Scroll to load tweet…
Scroll to load tweet…
Scroll to load tweet…
Scroll to load tweet…