* ಧಾರ್ಮಿಕ ಮುಖಂಡ ಅಖುಂಜಾದಾಗೆ ನಂ.1 ಸ್ಥಾನ* ಆಫ್ಘನ್‌ನಲ್ಲಿ ಇರಾನ್‌ ಮಾದರಿ ಸರ್ಕಾರ?

ಕಾಬೂಲ್‌(ಸೆ.01): ಅಮೆರಿಕ ಸೇನೆ ತೆರವಾದ ಬೆನ್ನಲ್ಲೇ ಅಷ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ರಚನೆ ಪ್ರಕ್ರಿಯೆ ಚುರುಕುಗೊಂಡಿದ್ದು, ಇರಾನ್‌ ಮಾದರಿ ಸರ್ಕಾರ ರಚನೆಯ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅಂದರೆ ಇಲ್ಲಿ ಅಧ್ಯಕ್ಷರಿಗಿಂತಲೂ ಧಾರ್ಮಿಕ ನಾಯಕರೇ ಅತ್ಯುನ್ನತ ಸ್ಥಾನ ಹೊಂದಿರಲಿದ್ದಾರೆ.

ಹೀಗಾಗಿ ತಾಲಿಬಾನ್‌ ಸಂಘಟನೆಯ ಪ್ರಮುಖ ಧಾರ್ಮಿಕ ನಾಯಕ ಎಂದೇ ಗುರುತಿಸಿಕೊಂಡಿರುವ ಹೈಬತುಲ್ಲಾಹ್‌ ಅಖುಂಜಾದಾ ದೇಶದ ಹೊಸ ಸರ್ವೋಚ್ಛ ನಾಯಕರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಆತ ಕಾಬೂಲ್‌ ಬದಲು ಕಂದಹಾರ್‌ನಿಂದಲೇ ಆಡಳಿತ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಅಖುಂಜಾದಾನ ಸಹಾಯಕ ಮುಲ್ಲಾ ಅಬ್ದುಲ್‌ ಘನಿ ಬರಾದರ್‌ ಅಥವಾ ಧಾರ್ಮಿಕ ವ್ಯವಹಾರ ಮತ್ತು ಸಿದ್ಧಾಂತಗಳ ನಿರ್ವಹಣೆ ಮಾಡುವ ಮುಲ್ಲಾ ಒಮರ್‌ ಪುತ್ರ ಮುಲ್ಲಾ ಯಾಕೂಬ್‌ ಅವರ ಪೈಕಿ ಒಬ್ಬರು ಪ್ರಧಾನಿಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ. ಇನ್ನು ಅಬ್ದುಲ್‌ ಹಕೀಮ್‌ ಹಖ್ಖಾನಿ ಮುಖ್ಯ ನ್ಯಾಯಮೂರ್ತಿಯಾಗುವ ಸಾಧ್ಯತೆ ಇದೆ.