ಕೇರಳ ರಣಜಿ ತಂಡವನ್ನು ಪ್ರತಿನಿಧಿಸಿದ್ದ ಕೆ. ಜಯಮೋಹನ್ ಥಂಪಿ ಅನುಮಾನಾಸ್ಪಾದವಾಗಿ ಕೊನೆಯುಸಿರೆಳೆದಿದ್ದಾರೆ. ಈ ಕುರಿತಂತೆ ಪೊಲೀಸರು ಪುತ್ರ ಅಶ್ವಿನ್ ಥಂಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ತಿರುವನಂತಪುರಂ(ಜೂ.10): ಕೇರಳ ರಣಜಿ ಟ್ರೋಫಿಯ ಮಾಜಿ ಕ್ರಿಕೆಟಿಗ ಕೆ. ಜಯಮೋಹನ್ ಥಂಪಿ(64) ಇಲ್ಲಿನ ಮನಕ್ಕಾಡುವಿನಲ್ಲಿರುವ ತಮ್ಮ ನಿವಾಸದಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ತಂದೆಯನ್ನು ಹತ್ಯೆ ಮಾಡಿದ ಶಂಕೆಯಡಿ ಮಗ ಅಶ್ವಿನ್ ಥಂಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Add Asianetnews Kannada as a Preferred SourcegooglePreferred

ಕೆ. ಜಯಮೋಹನ್ 1982ರಿಂದ 84ರ ಅವಧಿಯಲ್ಲಿ ಕೇರಳ ಪರ 6 ರಣಜಿ ಪಂದ್ಯಗಳನ್ನು ಆಡಿದ್ದು, 114 ರನ್ ಬಾರಿಸಿದ್ದರು. ಕೇರಳ ತಂಡದಲ್ಲಿ ಜಯಮೋಹನ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದರು. ಇದಾದ ಬಳಿಕ ಸ್ಟೇಟ್ ಬ್ಯಾಂಕ್ ಆಫ್ ತ್ರಾವಂಕೂರುವಿನಲ್ಲಿ ಡೆಪ್ಯೂಟಿ ಜನರಲ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸಿದ್ದರು, ಜೊತೆಗೆ 15 ವರ್ಷಗಳ ಕಾಲ ಈ ಸಂಸ್ಥೆಯ ಪರ ಕ್ರಿಕೆಟ್ ಆಡಿದ್ದರು.

ಮಾಗಡಿ: ನೀರಿನ ತೊಟ್ಟಿಗೆ ಬಿದ್ದು ಎರಡು ವರ್ಷದ ಮಗು ದುರ್ಮರಣ

ಜಯಮೋಹನ್ ಮೃತದೇಹ ಅವರ ನಿವಾಸದಲ್ಲಿ ಪತ್ತೆಯಾಗಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಮೃತದೇಹವನ್ನು ಸ್ಥಳೀಯ ಮೆಡಿಕಲ್ ಕಾಲೇಜ್‌ಗೆ ಪೋಸ್ಟ್ ಮಾರ್ಟಮ್ ಮಾಡಲು ರವಾನಿಸಿದ್ದಾರೆ.

ಮಾಜಿ ಕ್ರಿಕೆಟಿಗ ಜಯಮೋಹನ್ ಪತ್ನಿ ಅನಿತಾ ಕಳೆದೆರಡು ವರ್ಷಗಳ ಹಿಂದಷ್ಟೇ ಮೃತಪಟ್ಟಿದ್ದರು. ಬಳಿಕ ಮಗ ಅಶ್ವಿನ್ ಜತೆ ಮನೆಯಲ್ಲಿ ವಾಸವಾಗಿದ್ದರು. ಈಗ ಪೊಲೀಸರು ಮಗ ಅಶ್ವಿನ್ ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.