ಮಾಗಡಿ(ಜೂ.10): ಆಟವಾಡುತ್ತಿದ್ದ ಮಗು ನೀರಿನ ತೊಟ್ಟಿ(ಸಂಪ್‌)ಗೆ ಬಿದ್ದು ಮರಣ ಹೊಂದಿರುವ ದುರ್ಘಟನೆ ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದ ಹೊರ ವಲ​ಯದ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಹೊಸಹಳ್ಳಿ ಗ್ರಾಮದಲ್ಲಿ ನರಸಿಂಹಮೂರ್ತಿ ಮತ್ತು ಕವಿತಾ ದಂಪತಿ ಪುತ್ರ ಹೃತ್ವಿಕ್‌ ಗೌಡ (02)ಮೃತ​ಪಟ್ಟ ಮಗು.

ಈ ದಂಪತಿ ಹೊಸಹಳ್ಳಿಯಲ್ಲಿ ಹೊಸ ಮನೆಯನ್ನು ಕಟ್ಟಿಸುತ್ತಿದ್ದಾರೆ ಮಂಗಳವಾರ ಬೆಳಿಗ್ಗೆ 10.30 ರಲ್ಲಿ ಸವಿತಾ ಅವರು ಕೆಲಸಗಾರರಿಗೆ ನೀರು ತರಲೆಂದು ಮನೆಯ ಹಿಂಭಾಗಕ್ಕೆ ತೆರಳಿದ್ದ ಸಮಯದಲ್ಲಿ ಅಲ್ಲಿಯೇ ಆಡವಾಡಿಕೊಂಡಿದ್ದ ಮಗು ಹೃತ್ವಿಕ್‌ ಗೌಡ ಸಂಪಿಗೆ ಬಿದ್ದಿದ್ದಾನೆ.

BSY ಕೆಳಗಿಳಿಸಲು ಮುಂದಾಗಿದ್ದ ಕಾಣದ ಕೈಗಳು ಯಾವುವು ಗೊತ್ತಾ?

ಮನೆಯ ಒಳ ಭಾಗದಲ್ಲಿ ಮರದ ಕೆಲಸ ನಡೆಯುತ್ತಿದ್ದು, ಮಗು ಸಂಪಿಗೆ ಬಿದ್ದ ಶಬ್ಧ ಯಾರಿಗೂ ಕೇಳಿಸಿಲ್ಲ. ಮಗು ಇಲ್ಲೆ ಎಲ್ಲಿಯೊ ಆಟವಾಡಿಕೊಂಡಿದೆ ಎಂದು ತಾಯಿ ಅಷ್ಟಾಗಿ ಗಮನಿಸಿಲ್ಲ. 15 ನಿಮಿ​ಷ​ಗಳ ನಂತರ ಮಗು ಎಲ್ಲಿ ಎಂದು ಹುಡುಕಾಟ ನಡೆಸಿದ ಸಮಯದಲ್ಲಿ ಸಂಪಿಗೆ ಬಿದ್ದಿರುವುದು ಕಂಡು ಬಂದಿದ್ದು, ಕೂಡಲೇ ಪಟ್ಟಣದ ಸರಕಾರಿ ಆಸ್ಪತ್ರೆಗೆ ಕರೆದು ತಂದಿದ್ದಾರೆ. ಅಷ್ಟರಲ್ಲಿಯೇ ಮಗು ಮೃತಪಟ್ಟಿದೆ ಎಂದು ವೈದ್ಯರು ದೃ​ಢ​ಪ​ಡಿ​ಸಿ​ದ್ದಾರೆ.