ರಣಜಿಯಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ವೇಗಿ ವಿನಯ್ ಕುಮಾರ್
’ದಾವಣಗೆರೆ ಎಕ್ಸ್‌ಪ್ರೆಸ್’ ಖ್ಯಾತಿಯ ಕರ್ನಾಟಕದ ಮಾಜಿ ವೇಗದ ಬೌಲರ್ ವಿನಯ್ ಕುಮಾರ್ ರಣಜಿ ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್ ಎನ್ನುವ ದಾಖಲೆ ಬರೆದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
"
ಕೋಲ್ಕತಾ[ಡಿ.29]: ರಣಜಿ ಟ್ರೋಫಿ ಇತಿಹಾಸದಲ್ಲೇ ಅತಿಹೆಚ್ಚು ವಿಕೆಟ್ ಕಬಳಿಸಿದ ವೇಗದ ಬೌಲರ್ ಎನ್ನುವ ದಾಖಲೆಯನ್ನು ಕರ್ನಾಟಕದ ಮಾಜಿ ನಾಯಕ ವಿನಯ್ ಕುಮಾರ್ ಬರೆದಿದ್ದಾರೆ.
ಈ ಋುತುವಿನಲ್ಲಿ ಪುದುಚೇರಿ ಪರ ಆಡುತ್ತಿರುವ ವಿನಯ್, ಶನಿವಾರ ಇಲ್ಲಿ ಮಿಜೋರಾಮ್ ವಿರುದ್ಧದ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಪಡೆದರು. ರಾಜಸ್ಥಾನದ ಪಂಕಜ್ ಸಿಂಗ್‌ರ 409 ವಿಕೆಟ್ ದಾಖಲೆಯನ್ನು ವಿನಯ್ ಮುರಿದರು. ವಿನಯ್ ಸದ್ಯ ರಣಜಿ ಟ್ರೋಫಿಯಲ್ಲಿ 412 ವಿಕೆಟ್‌ಗಳನ್ನು ಪಡೆದಿದ್ದಾರೆ. 2004ರಲ್ಲಿ ಕರ್ನಾಟಕ ತಂಡಕ್ಕೆ ಕಾಲಿಟ್ಟಿದ್ದ ಅವರು 15 ವರ್ಷಗಳ ಕಾಲ ತಂಡವನ್ನು ಪ್ರತಿನಿಧಿಸಿ 397 ವಿಕೆಟ್ ಕಬಳಿಸಿದ್ದರು. ಈ ಋುತುವಿನಲ್ಲಿ ಪುದುಚೇರಿ ಪರ 3 ಪಂದ್ಯಗಳಿಂದ 15 ವಿಕೆಟ್ ಪಡೆದಿದ್ದಾರೆ.
ರಣಜಿ ಟ್ರೋಫಿ: ಹಿಮಾಚಲ ವಿರುದ್ಧ ಕರ್ನಾಟಕದ ಪಂದ್ಯ ಡ್ರಾನಲ್ಲಿ ಅಂತ್ಯ
ಹರ್ಯಾಣದ ಮಾಜಿ ಎಡಗೈ ಸ್ಪಿನ್ನರ್ ರಾಜೀಂದರ್ ಗೋಯಲ್ 637 ವಿಕೆಟ್‌ಗಳೊಂದಿಗೆ ರಣಜಿ ಟ್ರೋಫಿಯಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಒಟ್ಟಾರೆ ಅತಿಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ವಿನಯ್ 7ನೇ ಸ್ಥಾನದಲ್ಲಿದ್ದಾರೆ.