ಮಹೇಂದ್ರ ಸಿಂಗ್ ಧೋನಿ ಐಪಿಎಲ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದು, 2027ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಅವರ ನಿವೃತ್ತಿಗೆ ಕರ್ನಾಟಕದ ಮಾಜಿ ಕ್ರಿಕೆಟಿಗರು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು: ಎಂ.ಎಸ್. ಧೋನಿ ಅವರು ಐಪಿಎಲ್ನಿಂದ ನಿವೃತ್ತಿ ಘೋಷಿಸಿದ್ದಾರೆ. 2027ರ ಆವೃತ್ತಿಯಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ 'ಟೀಮ್ ಮೆಂಟರ್' ಆಗಿ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಐಪಿಎಲ್ 2027ರ ಆಟಗಾರರ Retention ಕೊನೆಯ ದಿನವಾದ ಇಂದು ಫ್ರಾಂಚೈಸಿ ಅಧಿಕೃತ ಪ್ರಕಟಣೆ ಹೊರಡಿಸಿದೆ.
2008ರಲ್ಲಿ ಆರಂಭವಾದ ಐಪಿಎಲ್ನ ಮೊದಲ ಆವೃತ್ತಿಯಿಂದ ಆಡುತ್ತಿದ್ದ 45 ವರ್ಷದ ಧೋನಿ ಇದೀಗ ಸಕ್ರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಅವರು 2026ರ ಇಡೀ ಐಪಿಎಲ್ ಆವೃತ್ತಿಯಲ್ಲಿ ಒಂದೇ ಒಂದು ಪಂದ್ಯವನ್ನೂ ಆಡಿರಲಿಲ್ಲ. ಧೋನಿ ಐಪಿಎಲ್ ನಿವೃತ್ತಿ ಬೆನ್ನಲ್ಲೇ ಕರ್ನಾಟಕದ ಮಾಜಿ ದಿಗ್ಗಜರು ಧೋನಿ ಬಗ್ಗೆ ಭಾವುಕರಾಗಿ ಮಾತನ್ನಾಡಿದ್ದಾರೆ.
ಧೋನಿ ನಿವೃತ್ತಿ ಬಗ್ಗೆ ವಿಜಯ್ ಭಾರದ್ವಾಜ್ ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನ್ನಾಡಿ.. ಧೋನಿ ಮತ್ತೆ CSK ಬಿಡಿಸಲಾಗದಂತ ಸಂಬಂಧ. ದತ್ತು ಪುತ್ರ ಆಗೋದ್ರು ಜಾರ್ಖಂಡ್ ಇಂದ ಬಂದಂತ ಧೋನಿ ಚೆನ್ನೈನಲ್ಲಿ settle ಆಗ್ತಾರೆ, ಪ್ರೀತಿ ಸಿಗುತ್ತೆ, ಗೌರವ ಸಿಗುತ್ತೆ ಅಂತ ಯಾರು ಊಹೆ ಮಾಡಿರ್ಲಿಲ್ಲ. ಆದರೆ ಎಂಥ ನಂಟು! ಎಂಥ ದಂತಕಥೆ ಇದ್ದಾಗೆ ಎಂದು ಭಾವುಕರಾಗಿದ್ದಾರೆ.
ಸುನಿಲ್ ಜೋಶಿ ಧೋನಿ ನಿವೃತ್ತಿ ಬಗ್ಗೆ ಮಾತನ್ನಾಡಿ.. 2008ರಲ್ಲಿ ಐಪಿಎಲ್ ಶುರುವಾದಾಗ ಸಿಎಸ್ಕೆ ಐಕಾನಿಕ್ ಪ್ಲೇಯರ್ ಎಂದು ಹೇಳಿತ್ತು. ಆರ್ಸಿಬಿ ರಾಹುಲ್ ದ್ರಾವಿಡ್ , ಯುವರಾಜ್ ಸಿಂಗ್ ಪಂಜಾಬ್., ಸೆಹ್ವಾಗ್ ಡೆಲ್ಲಿ, ಲಕ್ಷ್ಮಣ್ ಹೈದರಾಬಾದ್. ಈ ತರದ್ದು ಬಂದಾಗ ಕೊನೆಗೆ CSK ಯವರು ನೋಡ್ತಾ ಇದ್ರು ಯಾರನ್ನ ಇಟ್ಕೋಬೇಕಪ್ಪಾ ಎಂದು. ಕೊನೆಗೆ ಅವರು MS Dhoni ಅವರನ್ನ ಇಟ್ಟುಕೊಂಡರು. ಆದರೆ ಬೆಳೆದಿದ್ದು MS Dhoni ಅವರು ಯಾರನ್ನು ಎಲ್ಲರನ್ನೂ ಹಿಂದೆ ಬಿಟ್ಟು ಮುಂದೆ ಹೋಗಿ ಕೂತಿದ್ದಾರೆ. ಅವರು ಇಂದಿಗೂ ಟಾಪ್ ಅಲ್ಲಿದ್ದಾರೆ. ಧೋನಿಗೆ ತಲಾ ಅಂತ ಯಾಕೆ ಹೇಳ್ತಾರೆ ಅಂದ್ರೆ ಮೊದಲ್ನೇ ದಿನದಿಂದ ಇವತ್ತಿನ ತನಕ CSKಗೆ ಆಡಿದವರು. ದೊಡ್ಡ ಮಗ ಮನೆಯಲ್ಲಿ ಕುಟುಂಬದಲ್ಲಿ ಹೇಗಿರ್ತಾರೆ ಆತರ ದೊಡ್ಡಮಗ CSKಗೆ ಎಂಎಸ್ ಧೋನಿ. ಮಗ ಇಲ್ಲ ಅಂದಾಗ ಕುಟುಂಬ ಹೇಗೆ ಯೋಚನೆ ಮಾಡುತ್ತೆ, ಏನು ಅರ್ಥ ಮಾಡ್ಕೋತೆ, ಯಾವ ಕಷ್ಟದಲ್ಲಿ ಬೀಳ್ತಾರೆ ಅಂತೇಳಿ ನೋಡ್ಬೇಕು ಎಂದಿದ್ದಾರೆ.
ಅನಿಲ್ ಕುಂಬ್ಳೆ ಮಾತನ್ನಾಡಿ.. ತಮಿಳುನಾಡಿನ ಇತಿಹಾಸದಲ್ಲಿ ಮೊದಲಿನಿಂದಲೂ ಹೀರೋ ಆರಾಧನೆ (ನಾಯಕರನ್ನು ಪೂಜಿಸುವ ಸಂಸ್ಕೃತಿ) ಇದ್ದೇ ಇದೆ. ಹಾಗಾಗಿ ಜನರು ತಮ್ಮನ್ನು ಆರಾಧಿಸುವ ಆ ಸ್ಥಾನವನ್ನು ಎಂಎಸ್ (ಧೋನಿ) ಪಡೆದುಕೊಳ್ಳುವುದು ಕೇವಲ ಸಮಯದ ಪ್ರಶ್ನೆಯಷ್ಟೇ ಆಗಿತ್ತು ಎಂದಿದ್ದಾರೆ.
ಐಪಿಎಲ್ನಲ್ಲಿ ಧೋನಿ ಸಾಧನೆ
ಮಹೇಂದ್ರ ಸಿಂಗ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದ ಅತ್ಯಂತ ಯಶಸ್ವಿ ನಾಯಕ ಮತ್ತು ದಿಗ್ಗಜ ಆಟಗಾರ. ನವೆಂಬರ್ 17, 2026 ರಂದು ಐಪಿಎಲ್ಗೆ ನಿವೃತ್ತಿ ಘೋಷಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 5 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ ದಾಖಲೆ ಇವರ ಹೆಸರಲ್ಲಿದೆ. 2027ರ ಆವೃತ್ತಿಯಿಂದ ಅವರು CSK ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
ನಾಯಕರಾಗಿ ಧೋನಿ
- 5 ಐಪಿಎಲ್ ಟ್ರೋಫಿಗಳು. ಧೋನಿ ನಾಯಕತ್ವದಲ್ಲಿ CSK 2010, 2011, 2018, 2021 ಮತ್ತು 2023 ರಲ್ಲಿ ಪ್ರಶಸ್ತಿ ಗೆದ್ದಿದೆ
- ಸತತ ಪ್ರಶಸ್ತಿ ಗೆದ್ದ ಮೊದಲ ನಾಯಕ. 2010 ಮತ್ತು 2011 ರಲ್ಲಿ ಸತತ ಎರಡು ಬಾರಿ ಐಪಿಎಲ್ ಟ್ರೋಫಿ ಗೆದ್ದ ಮೊದಲ ನಾಯಕ
- ಅತಿ ಹೆಚ್ಚು ಫೈನಲ್ ಮತ್ತು ಪ್ಲೇಆಫ್ ಪ್ರವೇಶ. ನಾಯಕನಾಗಿ CSK ತಂಡವನ್ನು 10 ಬಾರಿ ಫೈನಲ್ಗೆ ಮತ್ತು 12 ಬಾರಿ ಪ್ಲೇಆಫ್ ಹಂತಕ್ಕೆ ಕೊಂಡೊಯ್ದಿದ್ದಾರೆ.
- ಚಾಂಪಿಯನ್ಸ್ ಲೀಗ್ ಟಿ20 ಪ್ರಶಸ್ತಿಗಳು. ಐಪಿಎಲ್ ಜೊತೆಗೆ 2010 ಮತ್ತು 2014 ರಲ್ಲಿ CSK ತಂಡಕ್ಕೆ ಎರಡು ಚಾಂಪಿಯನ್ಸ್ ಲೀಗ್ ಟಿ20 ಪ್ರಶಸ್ತಿಗಳನ್ನು ಗೆದ್ದುಕೊಟ್ಟಿದ್ದಾರೆ.
| ವಿಭಾಗ | ಅಂಕಿ-ಅಂಶ |
| ಒಟ್ಟು ಪಂದ್ಯಗಳು | 278 (CSK ಪರ 248 ಪಂದ್ಯಗಳು) |
| ಒಟ್ಟು ರನ್ಗಳು | 5,439 |
| ಗರಿಷ್ಠ ಸ್ಕೋರ್ | 84 |
| ಬ್ಯಾಟಿಂಗ್ ಸರಾಸರಿ | 38.30 |
| ಸ್ಟ್ರೈಕ್ ರೇಟ್ | 137.46 |
| ಅರ್ಧಶತಕಗಳು (50s) | 24 |
| ಬೌಂಡರಿಗಳು (4s) | 375 |
| ಸಿಕ್ಸರ್ಗಳು (6s) | 264 |
| ವಿಕೆಟ್ ಕೀಪಿಂಗ್ ಬಲಿಗಳು | 205 (158 ಕ್ಯಾಚ್ಗಳು, 47 ಸ್ಟಂಪಿಂಗ್ಗಳು) |










