ಒಂದೇ ತಿಂಗಳಿಗೆ ಕೀನ್ಯಾ ಕ್ರಿಕೆಟ್ ಕೋಚ್ ಹುದ್ದೆ ಕಳೆದುಕೊಂಡ ದೊಡ್ಡ ಗಣೇಶ್?
ಕೀನ್ಯಾ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ನೇಮಕವಾಗಿದ್ದ ದೊಡ್ಡ ಗಣೇಶ್ ಕೇವಲ ಒಂದು ತಿಂಗಳಿನಲ್ಲಿ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ ಎಂದು ವರದಿಯಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ
ನವದೆಹಲಿ: ಕಳೆದ ತಿಂಗಳಷ್ಟೇ ಕೀನ್ಯಾ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಆಗಿ ನೇಮಕಗೊಂಡಿದ್ದ ಭಾರತದ ಮಾಜಿ ವೇಗಿ, ಕರ್ನಾಟಕದ ದೊಡ್ಡ ಗಣೇಶ್ ಆ ಹುದ್ದೆ ಕಳೆದುಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕೋಚ್ ನೇಮಕದಲ್ಲಿ ನಿಯಮಗಳನ್ನು ಸರಿಯಾಗಿ ಪಾಲಿಸಿಲ್ಲ ಎಂದು ಕಾರಣ ನೀಡಿರುವ ಕೀನ್ಯಾ ಕ್ರಿಕೆಟ್ ಮಂಡಳಿಯ ಕಾರ್ಯಕಾರಿ ಸಮಿತಿ, ಗಣೇಶ್‌ರ ನೇಮಕವನ್ನು ರದ್ದುಗೊಳಿಸಿದೆ. ಯಾವ ನಿಯಮ ಉಲ್ಲಂಘನೆಯಾಗಿದೆ, ಯಾರು ನಿಯಮ ಉಲ್ಲಂಘಿಸಿದವರು ಎನ್ನುವ ವಿಚಾರಗಳನ್ನು ಸ್ಪಷ್ಟಪಡಿಸಿಲ್ಲ.
51 ವರ್ಷದ ಗಣೇಶ್ ಭಾರತ ಪರ 4 ಟೆಸ್ಟ್ ಹಾಗೂ 1 ಏಕದಿನ ಪಂದ್ಯವನ್ನಾಡಿದ್ದಾರೆ. ಆದರೆ, ಕರ್ನಾಟಕ ಪರ ಹಲವು ವರ್ಷಗಳ ಕಾಲ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮಿಂಚಿದ್ದ ಗಣೇಶ್, 365 ವಿಕೆಟ್ ಕಬಳಿಸಿದ್ದಾರೆ.
ಡೈಮಂಡ್ ಲೀಗ್ ಫೈನಲ್ಸ್: ಕೇವಲ 1 ಸೆಂಟಿಮೀಟರ್ ಅಂತರದಲ್ಲಿ ನೀರಜ್ ಜೋಪ್ರಾ ಕೈ ತಪ್ಪಿದ ಚಾಂಪಿಯನ್ ಪಟ್ಟ
ದುಲೀಪ್ ಟ್ರೋಫಿ: ಜಯದ ನಿರೀಕ್ಷೆಯಲ್ಲಿ ಭಾರತ ‘ಎ’
ಅನಂತಪುರ: ದುಲೀಪ್ ಟ್ರೋಫಿಯಲ್ಲಿ ಭಾರತ ‘ಡಿ’ ವಿರುದ್ಧ ಭಾರತ ‘ಎ’ ಗೆಲುವಿನ ನಿರೀಕ್ಷೆಯಲ್ಲಿದೆ. ಭಾರತ ‘ಡಿ’ಗೆ ಗೆಲ್ಲಲು ಭಾರತ ‘ಎ’ 488 ರನ್‌ಗಳ ಬೃಹತ್ ಗುರಿ ನೀಡಿದೆ. ಮೊದಲ ಇನ್ನಿಂಗ್ಸಲ್ಲಿ 290 ರನ್ ಗಳಿಸಿದ್ದ ಭಾರತ ‘ಎ’, ಭಾರತ ‘ಡಿ’ ತಂಡವನ್ನು 183ಕ್ಕೆ ಆಲೌಟ್ ಮಾಡಿತ್ತು. ಬಳಿಕ 2ನೇ ಇನ್ನಿಂಗ್ಸಲ್ಲಿ ಪ್ರಥಮ್ ಸಿಂಗ್ (122) ಹಾಗೂ ತಿಲಕ್ ವರ್ಮಾ (111*)ರ ಶತಕಗಳ ನೆರವಿನಿಂದ 3 ವಿಕೆಟ್‌ಗೆ 380 ರನ್ ಕಲೆಹಾಕಿದ ಭಾರತ ‘ಎ’, ದೊಡ್ಡ ಗುರಿ ನೀಡಿತು. 2ನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ ‘ಡಿ’, 3ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 62 ರನ್ ಗಳಿಸಿದ್ದು, ಗೆಲ್ಲಲು ಇನ್ನೂ 426 ರನ್ ಬೇಕಿದೆ.
ಭಾರತ ‘ಸಿ’ಗೆ ಇನ್ನಿಂಗ್ಸ್ ಮುನ್ನಡೆ ನಿರೀಕ್ಷೆ
ಭಾರತ ‘ಬಿ’ ವಿರುದ್ಧ ಭಾರತ ‘ಸಿ’ ತಂಡ ಇನ್ನಿಂಗ್ಸ್ ಮುನ್ನಡೆ ನಿರೀಕ್ಷೆಯಲ್ಲಿದೆ. ಭಾರತ ‘ಬಿ’ ಗಳಿಸಿದ್ದ 525 ರನ್‌ಗಳಿಗೆ ಉತ್ತರವಾಗಿ 3ನೇ ದಿನದಂತ್ಯಕ್ಕೆ ಭಾರತ ‘ಬಿ’ 7 ವಿಕೆಟ್‌ಗೆ 309 ಗಳಿಸಿದ್ದು, ಇನ್ನೂ 216 ರನ್ ಹಿನ್ನಡೆಯಲ್ಲಿದೆ. ಭಾರತ ‘ಬಿ’ ಪರ ನಾಯಕ ಅಭಿಮನ್ಯು ಈಶ್ವರನ್, ಏಕಾಂಗಿ ಹೋರಾಟ ನಡೆಸುತ್ತಿದ್ದು ಔಟಾಗದೆ 143 ರನ್ ಗಳಿಸಿದ್ದಾರೆ.
ತನ್ನ ಫೇವರೇಟ್ ಕ್ಯಾಪ್ಟನ್ ಆರಿಸಿದ ಯುವರಾಜ್ ಸಿಂಗ್! ಆದ್ರೆ ಕೊಹ್ಲಿ, ಧೋನಿ, ರೋಹಿತ್ ಇವರ್ಯಾರು ಅಲ್ಲ!
2ನೇ ಟಿ20: ಆಸೀಸ್ ವಿರುದ್ದ ಇಂಗ್ಲೆಂಡ್ 3 ವಿಕೆಟ್‌ಗಳ ಗೆಲುವು
ಕಾರ್ಡಿಫ್: ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ 3 ವಿಕೆಟ್‌ಗಳ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಶುಕ್ರವಾರ ನಡೆದ ಪಂದ್ಯ ದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ, 6 ವಿಕೆಟ್‌ಗೆ 193 ರನ್ ಕಲೆಹಾಕಿತು.
ಜೇಕ್ ಪ್ರೇಸರ್ 50, ಜೋಶ್ ಇಂಗ್ಲಿಸ್ 42 ರನ್ ಗಳಿಸಿದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಇಂಗ್ಲೆಂಡ್‌ಗೆ ಲಿಯಾಮ್ ಲಿವಿಂಗ್‌ಸ್ಟೋನ್ (87) ಹಾಗೂ ಜೇಕಬ್ ಬೆಥ್‌ಹೆಲ್ (47) ಆಸರೆಯಾದರು. ಇವರಿಬ್ಬರು ಕೇವಲ 47 ಎಸೆತದಲ್ಲಿ 90 ರನ್ ಜೊತೆಯಾಟವಾಡಿ, ತಂಡಕ್ಕೆ ಇನ್ನೂ 7 ಎಸೆತ ಬಾಕಿ ಇರುವಂತೆ ಗೆಲುವು ತಂದುಕೊಟ್ಟರು.