ಲಂಡನ್‌(ಡಿ.26): ಇಂಗ್ಲೆಂಡ್‌ನ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಜಾನ್‌ ಎಡ್ರಿಚ್‌ (83) ಅನಾರೋಗ್ಯದಿಂದ ಬುಧವಾರ ನಿಧನರಾಗಿರುವ ವಿಷಯವನ್ನು ನಾರ್ತ್ ಸ್ಕಾಟ್ಲೆಂಡ್‌ನಲ್ಲಿರುವ ಅವರ ಕುಟುಂಬ ಮೂಲಗಳು ಶುಕ್ರವಾರ ಖಚಿತಪಡಿಸಿವೆ ಎಂದು ಸರ್ರೆ ಕ್ರಿಕೆಟ್‌ ಕ್ಲಬ್‌ ಹೇಳಿದೆ. 

ಕಳೆದ 8 ವರ್ಷಗಳಿಂದ ಎಡ್ರಿಚ್‌, ಮಾರಕ ಕ್ಯಾನ್ಸರ್‌ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಟೆಸ್ಟ್‌ ಪಂದ್ಯವೊಂದರಲ್ಲಿ ಎಡ್ರಿಚ್‌, ಇಂಗ್ಲೆಂಡ್‌ ತಂಡವನ್ನು ಮುನ್ನಡೆಸಿದ್ದರು. 77 ಟೆಸ್ಟ್‌ ಪಂದ್ಯವನ್ನಾಡಿರುವ ಎಡ್ರಿಚ್‌, 43.54 ರ ಸರಾಸರಿಯಲ್ಲಿ ಬ್ಯಾಟ್‌ ಬೀಸಿದ್ದಾರೆ. ಇನ್ನಿಂಗ್ಸ್‌ವೊಂದರಲ್ಲಿ ದಾಖಲೆಯ 52 ಬೌಂಡರಿ ಯೊಂದಿಗೆ 310 ರನ್‌ಗಳಿಸಿದ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಎಡ್ರಿಚ್‌ ಪಾತ್ರರಾಗಿದ್ದರು. 

DDCA ವಿರುದ್ಧ ಮತ್ತೆ ಗುಡುಗಿದ ಬೇಡಿ; 15 ಕೋಟಿ ರುಪಾಯಿ ದುರ್ಬಳಕೆ ಶಂಕೆ..!

ಪುರುಷರ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನ ಮೊದಲ ಬೌಂಡರಿ ಮತ್ತು ಮೊದಲ ಅರ್ಧಶತಕ ಬಾರಿಸಿದ ಬ್ಯಾಟ್ಸ್‌ಮನ್‌ ಎನಿಸಿದ್ದರು. ಎಡ್ರಿಚ್‌ 500ಕ್ಕೂ ಹೆಚ್ಚು ಫಸ್ಟ್‌ ಕ್ಲಾಸ್‌ ಪಂದ್ಯವನ್ನಾಡಿದ್ದು, 103 ಶತಕ ಸಿಡಿಸಿದ್ದಾರೆ. ಇಂಗ್ಲೆಂಡ್‌ ಪುರುಷರ ತಂಡದ ಬ್ಯಾಟಿಂಗ್‌ ಕೋಚ್‌ ಹಾಗೂ ಆಯ್ಕೆ ಸಮಿತಿಯಲ್ಲಿ ಕಾರ‍್ಯನಿರ್ವಹಿಸಿದ್ದರು.