ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಇಂಗ್ಲೆಂಡ್ ಕ್ರಿಕೆಟಿಗ ರಾಬಿನ್‌ ಜಾಕ್‌ಮನ್‌ ಕೊನೆಯುಸಿರೆಳೆದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಲಂಡನ್(ಡಿ.27)‌: ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ರಾಬಿನ್‌ ಜಾಕ್‌ಮನ್‌ (75) ಶುಕ್ರವಾರ ನಿಧನರಾಗಿದ್ದಾರೆ ಎಂದು ಐಸಿಸಿ ತಿಳಿಸಿದೆ. 

ಜಾಕ್‌ಮನ್‌ ಇಂಗ್ಲೆಂಡ್‌ ತಂಡದ ಪರ 15 ಏಕದಿನ, 4 ಟೆಸ್ಟ್‌ ಪಂದ್ಯಗಳಲ್ಲಿ ಆಡಿದ್ದಾರೆ. 1966ರಿಂದ 1982 ರವರೆಗೆ ಜಾಕ್‌ಮನ್‌ 399 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು 1402 ವಿಕೆಟ್‌ ಪಡೆದಿದ್ದಾರೆ. 5681 ರನ್‌ ಗಳಿಸಿದ್ದು ಇದರಲ್ಲಿ 17 ಅರ್ಧಶತಕಗಳು ದಾಖಲಾಗಿವೆ. 

ಗಂಟಲು ಕ್ಯಾನ್ಸರ್‌ಗೆ ತುತ್ತಾಗಿದ್ದ ಜಾಕ್‌ಮನ್ 2012ರಲ್ಲಿ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಸರ್ರೆ ತಂಡದ ದೀರ್ಘಕಾಲಿಕ ಸಹಪಾಠಿ ಜಾನ್ ಎಡ್ರಿಚ್‌ ಕೊನೆಯುಸಿರೆಳೆದ ಒಂದು ದಿನದ ಬಳಿಕ ರಾಬಿನ್‌ ಜಾಕ್‌ಮನ್ ಕೂಡಾ ಇಹಲೋಕ ತ್ಯಜಿಸಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಬೌಂಡರಿ ಬಾರಿಸಿದ್ದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಎಡ್ರಿಚ್ ಇನ್ನಿಲ್ಲ

Scroll to load tweet…

ಕ್ರಿಕೆಟ್‌ಗೆ ನಿವೃತ್ತಿ ಹೇಳಿದ ನಂತರ ಕಾಮೆಂಟರ್‌ ಆಗಿ ಜಾಕ್‌ಮನ್‌ ಕಾರ‍್ಯನಿರ್ವಹಿಸಿದ್ದಾರೆ. ಜಾಕ್‌ಮನ್‌ 1945ರ ಆಗಸ್ಟ್‌ 13ರಂದು ಭಾರತದ ಶಿಮ್ಲಾದಲ್ಲಿ ಜನಿಸಿದ್ದರು.