‘6 ತಿಂಗಳ ಹಿಂದೆಯೇ ನನಗೆ ಕೊರೋನಾ ಲಕ್ಷಣಗಳು ಕಾಣಿ​ಸಿ​ಕೊಂಡಿತ್ತು. ಆದರೆ ನಾನು ಸಾಮಾನ್ಯ ಜ್ವರ ಎಂದು ಸುಮ್ಮ​ನಾ​ಗಿದ್ದೆ. ಆಗ ಕೊರೋನಾ ಬಗ್ಗೆ ಯಾರಿಗೂ ತಿಳಿ​ದಿ​ರ​ಲಿಲ್ಲ’ ಎಂದು ಇಂಗ್ಲೆಂಡ್ ಮಾಜಿ ಸ್ಟಾರ್ ಆಲ್ರೌಂಡರ್ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಲಂಡನ್(ಜೂ.30)‌: ಇಂಗ್ಲೆಂಡ್‌ ತಂಡದ ಮಾಜಿ ಆಲ್ರೌಂಡರ್‌ ಇಯಾನ್‌ ಬಾಥಮ್‌ ತಮಗೆ ಈ ವರ್ಷ ಜನ​ವ​ರಿ​ಯಲ್ಲೇ ಕೊರೋನಾ ಸೋಂಕು ತಗು​ಲಿತ್ತು ಎಂದಿ​ದ್ದಾರೆ. ಬಾಥಮ್‌ ಹೇಳಿಕೆ ಭಾರೀ ಅಚ್ಚರಿ ಮೂಡಿ​ಸಿ​ದೆ. 

‘6 ತಿಂಗಳ ಹಿಂದೆಯೇ ನನಗೆ ಕೊರೋನಾ ಲಕ್ಷಣಗಳು ಕಾಣಿ​ಸಿ​ಕೊಂಡಿತ್ತು. ಆದರೆ ನಾನು ಸಾಮಾನ್ಯ ಜ್ವರ ಎಂದು ಸುಮ್ಮ​ನಾ​ಗಿದ್ದೆ. ಆಗ ಕೊರೋನಾ ಬಗ್ಗೆ ಯಾರಿಗೂ ತಿಳಿ​ದಿ​ರ​ಲಿಲ್ಲ’ ಎಂದು ಬಾಥಮ್‌ ಖಾಸಗಿ ಸುದ್ದಿ ವಾಹಿ​ನಿಗೆ ನೀಡಿ​ರುವ ಸಂದ​ರ್ಶ​ನ​ದಲ್ಲಿ ಹೇಳಿ​ಕೊಂಡಿ​ದ್ದಾರೆ.

ಕೊರೋನಾ ಕುರಿತಂತೆ ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಸ್ವಲ್ಪಕಾಲ ತಾಳ್ಮೆಯಿಂದ ಇರಿ. ಎಲ್ಲವೂ ಸರಿದಾರಿಗೆ ಬರಲಿದೆ ಎಂದು ಬಾಥಮ್ ಆತ್ಮವಿಶ್ವಾಸದ ಮಾತುಗಳನ್ನು ಆಡಿದ್ದಾರೆ. ಜನರು ಕೊರೋನಾ ಕುರಿತಂತೆ ಉತ್ತಮವಾಗಿಯೇ ಸ್ಪಂದಿಸುತ್ತಿದ್ದಾರೆ. ಇದೇ ರೀತಿ ಮುಂದಿನ ಕೆಲವು ವಾರಗಳ ಮಟ್ಟಿಗೆ ಜಾಗೃತೆಯ ಜತೆಗೆ ತಾಳ್ಮೆಯಿಂದ ವರ್ತಿಸಿದರೆ ಎಲ್ಲರೂ ಈ ಸಂಕಷ್ಟದಿಂದ ಪಾರಾಗಬಹುದು ಎಂದು ಹೇಳಿದ್ದಾರೆ.

ಬಿಸಿ​ಸಿಐಗೆ ಮತ್ತೊಂದು ಆರ್ಥಿಕ ಹೊಡೆತ..!

ಇದೇ ವೇಳೆ ಬಾಥಮ್ ಸದ್ಯದಲ್ಲೇ ಕ್ರಿಕೆಟ್ ಚಟುವಟಿಕೆಗಳು ಆರಂಭವಾಗುವ ಆಶಾಭಾವವನ್ನು ವ್ಯಕ್ತಪಡಿಸಿದ್ದಾರೆ. ಜಗತ್ತಿನಾದ್ಯಂತ ಆದಷ್ಟು ಶೀಘ್ರದಲ್ಲೇ ಕ್ರಿಕೆಟ್ ಚಟುವಟಿಕೆಗಳು ಆರಂಭವಾಗುವ ವಿಶ್ವಾಸವಿದೆ. ಕ್ರಿಕೆಟ್‌ನಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಸುಲಭ ಎಂದು 64 ವರ್ಷದ ಇಂಗ್ಲೆಂಡ್ ಮಾಜಿ ಆಟಗಾರ ಹೇಳಿದ್ದಾರೆ.

ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಆಲ್ರೌಂಡರ್‌ಗಳಲ್ಲಿ ಅಗ್ರಗಣ್ಯರೆನಿಸಿದ್ದ ಇಯಾನ್ ಬಾಥಮ್ ಇಂಗ್ಲೆಂಡ್ ಪರ 102 ಟೆಸ್ಟ್ ಹಾಗೂ 116 ಏಕದಿನ ಪಂದ್ಯಗಳನ್ನಾಡಿ ಕ್ರಮವಾಗಿ 5,200 ಹಾಗೂ 2,113 ರನ್ ಬಾರಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಕ್ರಮವಾಗಿ 318 ಹಾಗೂ 145 ವಿಕೆಟ್ ಕಬಳಿಸಿದ್ದಾರೆ.