ನವ​ದೆ​ಹ​ಲಿ(ಜೂ.29): ಕೊರೋನಾ ಸೋಂಕಿ​ನಿಂದಾಗಿ ಕ್ರಿಕೆಟ್‌ ಚಟು​ವ​ಟಿಕೆಗಳು ಸ್ಥಗಿತಗೊಂಡಿದ್ದು, ಬಿಸಿ​​ಸಿಐ ಖಜಾನೆಗೆ ಹಣದ ಹರಿವು ನಿಂತಿದೆ. ಇದೀಗ ಮತ್ತೊಂದು ಆರ್ಥಿಕ ಹೊಡೆತ ಬೀಳು​ವ ಸಾಧ್ಯತೆ ಇದೆ. 

ಕಳೆದ 14 ವರ್ಷಗಳಿಂದ ಭಾರತ ತಂಡದ ಕಿಟ್‌ ಪ್ರಾಯೋ​ಜ​ಕ​ರಾ​ಗಿ​ರುವ ನೈಕಿ ಕ್ರೀಡಾ ಉತ್ಪನ್ನಗಳ ಸಂಸ್ಥೆ ಸದ್ಯ ಕೊರೋನಾ ಸೋಂಕಿ​ನಿಂದಾಗಿ ಆರ್ಥಿಕ ಸಂಕ​ಷ್ಟ​ದ​ಲ್ಲಿದೆ. ಸೆಪ್ಟೆಂಬರ್‌ನಲ್ಲಿ ಬಿಸಿ​ಸಿಐ ಜತೆ​ಗಿನ 4 ವರ್ಷಗಳ ಒಪ್ಪಂದ ಮುಕ್ತಾ​ಯ​ಗೊ​ಳ್ಳ​ಲಿದೆ. ಸದ್ಯ ಚಾಲ್ತಿ​ಯ​ಲ್ಲಿ​ರುವ ಒಪ್ಪಂದದ ಪ್ರಕಾರ ನೈಕಿ ಸಂಸ್ಥೆ, 4 ವರ್ಷಕ್ಕೆ 370 ಕೋಟಿ ರು. ಪಾವ​ತಿ​ಸ​ಲಿದೆ. ಸಂಕ​ಷ್ಟ​ದ​ಲ್ಲಿ​ರುವ ಸಂಸ್ಥೆ, ಒಪ್ಪಂದ ವಿಸ್ತರಣೆ ಮಾಡಲು ಬಿಸಿ​ಸಿಐಗೆ ಅಷ್ಟೊಂದು ಹಣ ಪಾವ​ತಿ​ಸುವ ಸ್ಥಿತಿ​ಯ​ಲ್ಲಿಲ್ಲ. ಹೀಗಾಗಿ ಒಪ್ಪಂದ​ದಿಂದ ಹಿಂದೆ ಸರಿ​ಯ​ಲಿದೆ ಎಂದು ಮಾಧ್ಯ​ಮ​ವೊಂದು ವರದಿ ಮಾಡಿದೆ.

ತಂಡ ಕಿಂಗ್ಸ್ XI ಪಂಜಾಬ್ ತಂಡದಲ್ಲಿ ಕನ್ನಡಿಗರ ಕಲರವ!

ಗಲ್ವಾನ್ ಕಣಿವೆಯಲ್ಲಿ ನಡೆದ ಭಾರತ-ಚೀನಿ ಸೈನಿಕರ ನಡುವಿನ ಘರ್ಷಣೆ ಬಳಿಕ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಹಾಗೂ ಅವುಗಳನ್ನು ಪ್ರಚಾರ ಮಾಡಬಾರದು ಎನ್ನುವ ಕೂಗು ಜೋರಾಗಿದೆ. ಬಿಸಿಸಿಐ ಈಗಾಗಲೇ ವಿವೋ ಜತೆ 5 ವರ್ಷಗಳ ಒಪ್ಪಂದ ಮಾಡಿಕೊಂಡಿದೆ. ಐಪಿಎಲ್ ಟೈಟಲ್ ಸ್ಪಾನ್ಸರ್‌ಶಿಪ್ ಪಡೆದುಕೊಂಡಿರುವ ವಿವೋ ಬಿಸಿಸಿಐಗೆ ವಾರ್ಷಿಕ ಸುಮಾರು 440 ಕೋಟಿ ರುಪಾಯಿ ನೀಡುತ್ತಿದೆ. ಒಂದು ವೇಳೆ ವಿವೋ ಜತೆಗಿನ ಒಪ್ಪಂದ  ಕಡಿದುಕೊಂಡರೆ ಬಿಸಿಸಿಐ ನೂರಾರು ಕೋಟಿ ರುಪಾಯಿಗಳನ್ನು ಕಳೆದುಕೊಳ್ಳಲಿದೆ.