ವಿಶೇಷ ಲೆಜೆಂಡ್ಸ್‌ ಲೀಗ್‌ ಕ್ರಿಕೆಟ್ ಟೂರ್ನಿಗೆ ಕ್ಷಣಗಣನೆಸೆಪ್ಟೆಂಬರ್ 16ರಂದು ನಡೆಯಲಿರುವ ವಿಶೇಷ ಪಂದ್ಯದಲ್ಲಿ ಸೌರವ್ ಗಂಗೂಲಿ ಕಣಕ್ಕೆವರ್ಲ್ಡ್‌ ಜೈಂಟ್ಸ್ ಎದುರು ಇಂಡಿಯಾ ಮಹರಾಜಾಸ್‌ ತಂಡ ಮುನ್ನಡೆಸಲಿರುವ ದಾದಾ

ನವದೆಹಲಿ(ಆ.12): ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇದೀಗ ಮತ್ತೊಮ್ಮೆ ನಾಯಕನಾಗಿ ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ. ಭಾರತದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮುಂಬರುವ ಸೆಪ್ಟೆಂಬರ್ 16ರಂದು ನಡೆಯಲಿರುವ ವಿಶೇಷ ಲೆಜೆಂಡ್ಸ್‌ ಲೀಗ್ ಕ್ರಿಕೆಟ್‌ ಪಂದ್ಯದಲ್ಲಿ ಸೌರವ್ ಗಂಗೂಲು ಇಂಡಿಯಾ ಮಹರಾಜಾಸ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ಕೋಲ್ಕತಾದ ಈಡನ್‌ಗಾರ್ಡನ್ಸ್‌ ಮೈದಾನಲ್ಲಿಇಂಡಿಯಾ ಮಹರಾಜಾಸ್ ಹಾಗೂ ವರ್ಲ್ಡ್‌ ಜೈಂಟ್ಸ್‌ ತಂಡಗಳು ಸೆಣಸಾಡಲಿವೆ.

ಈ ವಿಶೇಷ ಲೆಜೆಂಡ್ಸ್‌ ಲೀಗ್ ಕ್ರಿಕೆಟ್‌ ಪಂದ್ಯದಲ್ಲಿ ಇಂಡಿಯಾ ಮಹರಾಜಾಸ್ ತಂಡವನ್ನು ದಾದಾ ಮುನ್ನಡೆಸಿದರೇ, ಇನ್ನು ಇಂಗ್ಲೆಂಡ್‌ಗೆ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಇಯಾನ್ ಮಾರ್ಗನ್‌, ವರ್ಲ್ಡ್‌ ಜೈಂಟ್ಸ್ ತಂಡವನ್ನು ಮುನ್ನಡೆಸಲಿದ್ದಾರೆ

ನಾವೆಲ್ಲರೂ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಇದು ನಮ್ಮೆಲ್ಲರಿಗೂ ಒಂದು ರೀತಿಯ ಹೆಮ್ಮೆಯ ಕ್ಷಣ. ಓರ್ವ ಭಾರತೀಯನಾಗಿ ಈ ವರ್ಷದ ಲೆಜೆಂಡ್ಸ್‌ ಲೀಗ್ ಕ್ರಿಕೆಟ್ ಟೂರ್ನಿಯನ್ನು 75ನೇ ಸ್ವಾತಂತ್ರ್ಯೋತ್ಸವಕ್ಕೆ ಅರ್ಪಿಸುತ್ತಿರುವುದು ನನ್ನಲ್ಲಿ ಒಂದು ರೀತಿಯ ಅತೀವ ತೃಪ್ತಿಯನ್ನು ಮೂಡಿಸುತ್ತಿದೆ ಎಂದು ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಕಮಿಷನರ್ ರವಿಶಾಸ್ತ್ರಿ ಹೇಳಿದ್ದಾರೆ.

BCCI ನಿದ್ಡೆಗೆಡಿಸಿದ ಐಪಿಎಲ್ ಫ್ರಾಂಚೈಸಿಗಳು..!

ಎರಡನೇ ಆವೃತ್ತಿಯ ಲೆಜೆಂಡ್ಸ್‌ ಲೀಗ್ ಕ್ರಿಕೆಟ್ ಟೂರ್ನಿಯು, ಈ ವಿಶೇಷ ಪಂದ್ಯದ ಮರುದಿನ ಅಂದರೆ ಸೆಪ್ಟೆಂಬರ್ 17ರಿಂದ ಆರಂಭವಾಗಲಿದೆ. ಎರಡನೇ ಆವೃತ್ತಿಯ ಲೆಜೆಂಡ್ಸ್‌ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು 4 ತಂಡಗಳು ಪಾಲ್ಗೊಳ್ಳಲಿದ್ದು, 22 ದಿನಗಳ ಅಂತರದಲ್ಲಿ ಒಟ್ಟು 15 ಪಂದ್ಯಗಳನ್ನು ಆಡಲಿವೆ.

Scroll to load tweet…

ವಿಶೇಷ ಲೆಜೆಂಡ್ಸ್‌ ಲೀಗ್ ಕ್ರಿಕೆಟ್‌ ಪಂದ್ಯಕ್ಕೆ ತಂಡಗಳು ಹೀಗಿವೆ ನೋಡಿ

ಇಂಡಿಯಾ ಮಹರಾಜಾಸ್‌

ಸೌರವ್ ಗಂಗೂಲಿ(ನಾಯಕ), ವಿರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಯೂಸುಪ್ ಪಠಾಣ್, ಎಸ್ ಬದ್ರಿನಾಥ್, ಇರ್ಫಾನ್ ಪಠಾಣ್, ಪಾರ್ಥಿವ್ ಪಟೇಲ್(ವಿಕೆಟ್ ಕೀಪರ್), ಸ್ಟುವರ್ಟ್ ಬಿನ್ನಿ, ಎಸ್ ಶ್ರೀಶಾಂತ್, ಹರ್ಭಜನ್ ಸಿಂಗ್, ನಮಾನ್ ಓಜಾ(ವಿಕೆಟ್ ಕೀಪರ್), ಅಶೋಕ್ ದಿಂಡಾ, ಅಜಯ್ ಜಡೇಜಾ, ಆರ್‌ಪಿ ಸಿಂಗ್, ಜೋಗಿಂದರ್ ಶರ್ಮಾ, ರಿತೀಂದರ್ ಸಿಂಗ್ ಸೋದಿ.

ವರ್ಲ್ಡ್‌ ಜೈಂಟ್ಸ್‌
ಇಯಾನ್ ಮಾರ್ಗನ್‌(ನಾಯಕ), ಲಿಂಡ್ಲೆ ಸಿಮೊನ್ಸ್‌, ಹರ್ಷಲ್ ಗಿಬ್ಸ್‌, ಜಾಕ್ ಕಾಲಿಸ್, ಸನತ್ ಜಯಸೂರ್ಯ, ಮ್ಯಾಟ್ ಪ್ರಿಯರ್(ವಿಕೆಟ್ ಕೀಪರ್), ನೇಥನ್ ಮೆಕ್ಕಲಂ, ಜಾಂಟಿ ರೋಡ್ಸ್‌, ಮುತ್ತಯ್ಯ ಮುರುಳೀಧರನ್, ಡೇಲ್ ಸ್ಟೇನ್, ಹ್ಯಾಮಿಲ್ಟನ್ ಮಸಕಜಾ, ಮೊಶ್ರಫೆ ಮೊರ್ತಾಜ, ಆಸ್ಗರ್ ಆಫ್ಘಾನ್, ಮಿಚೆಲ್ ಜಾನ್ಸನ್, ಬ್ರೆಟ್ ಲೀ, ಕೆವಿನ್ ಒ ಬ್ರಿಯನ್, ದಿನೇಶ್ ರಾಮ್ದಿನ್‌(ವಿಕೆಟ್ ಕೀಪರ್).