ಪಂದ್ಯದ ನಂತರ ಸಾಮಾಜಿಕ ತಾಣಗಳಲ್ಲಿ ವಿಡಿಯೋವೊಂದನ್ನು ಹಾಕಿರುವ ಶ್ರೀಶಾಂತ್, ‘ಗಂಭೀರ್ ನನ್ನ ವಿರುದ್ಧ ಅವಾಚ್ಯ ಶಬ್ಧಗಳನ್ನು ಬಳಕೆ ಮಾಡಿದರು. ನನ್ನನ್ನು ಪದೇ ಪದೇ ಫಿಕ್ಸರ್ ಎಂದು ಹೀಯಾಳಿಸಿದರು. ನನ್ನ ಮೇಲೆ ಅನಗತ್ಯವಾಗಿ ಹೊರಿಸಿದ್ದ ಆರೋಪದ ವಿರುದ್ಧ ಏಕಾಂಗಿಯಾಗಿ ಹೋರಾಡಿ ಅದರಿಂದ ಹೊರಬಂದಿದ್ದೇನೆ. ಆದರೂ ಗಂಭೀರ್ ಈ ರೀತಿ ಮಾಡಿದ್ದು ಬಹಳ ತಪ್ಪು’ ಎಂದಿದ್ದಾರೆ.
ಸೂರತ್(ಡಿ.08): ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ತಮ್ಮನ್ನು ಫಿಕ್ಸರ್ ಎಂದು ಕರೆದಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಶ್ರೀಶಾಂತ್ ಗುರುವಾರ ಆರೋಪಿಸಿದ್ದಾರೆ. ಸದ್ಯ ನಡೆಯುತ್ತಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಇಂಡಿಯನ್ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜೆಂಟ್ಸ್ ನಡುವಿನ ಎಲಿಮಿನೇಟರ್ ಪಂದ್ಯದ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿತ್ತು.
ಪಂದ್ಯದ ನಂತರ ಸಾಮಾಜಿಕ ತಾಣಗಳಲ್ಲಿ ವಿಡಿಯೋವೊಂದನ್ನು ಹಾಕಿರುವ ಶ್ರೀಶಾಂತ್, ‘ಗಂಭೀರ್ ನನ್ನ ವಿರುದ್ಧ ಅವಾಚ್ಯ ಶಬ್ಧಗಳನ್ನು ಬಳಕೆ ಮಾಡಿದರು. ನನ್ನನ್ನು ಪದೇ ಪದೇ ಫಿಕ್ಸರ್ ಎಂದು ಹೀಯಾಳಿಸಿದರು. ನನ್ನ ಮೇಲೆ ಅನಗತ್ಯವಾಗಿ ಹೊರಿಸಿದ್ದ ಆರೋಪದ ವಿರುದ್ಧ ಏಕಾಂಗಿಯಾಗಿ ಹೋರಾಡಿ ಅದರಿಂದ ಹೊರಬಂದಿದ್ದೇನೆ. ಆದರೂ ಗಂಭೀರ್ ಈ ರೀತಿ ಮಾಡಿದ್ದು ಬಹಳ ತಪ್ಪು’ ಎಂದಿದ್ದಾರೆ.
2024ರ ಟಿ20 ವಿಶ್ವಕಪ್ ಲೋಗೋ ಅನಾವರಣ
ದುಬೈ: 2024ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನ ಲಾಂಛನವನ್ನು ಐಸಿಸಿ ಗುರುವಾರ ಅನಾವರಣಗೊಳಿಸಿದೆ. ಬ್ಯಾಟ್, ಬಾಲ್ ಹಾಗೂ ಟಿ20 ವಿಶ್ವಕಪ್‌ನ ಕುರಿತಾದ ಸಂಕ್ಷಿಪ್ತ ಮಾಹಿತಿಯೊಂದಿಗೆ ವಿಶೇಷ ರೀತಿಯಲ್ಲಿ ಲೋಗೋ ವಿನ್ಯಾಸಗೊಳಿಸಲಾಗಿದೆ.
ಪುರುಷರ ಜೊತೆಗೆ ಮಹಿಳೆಯರ ಟಿ20 ವಿಶ್ವಕಪ್ ಲೋಗೋವನ್ನು ಕೂಡಾ ಐಸಿಸಿ ಸಾಮಾಜಿಕ ತಾಣಗಳಲ್ಲಿ ಪ್ರಕಟಿಸಿದೆ. ಪುರುಷರ ಟಿ20 ವಿಶ್ವಕಪ್ ವೆಸ್ಟ್‌ಇಂಡೀಸ್, ಅಮೆರಿಕದಲ್ಲಿ 2024ರ ಜೂ.4ರಿಂದ 30ರ ವರೆಗೆ, ಮಹಿಳೆಯರ ಟಿ20 ವಿಶ್ವಕಪ್ ಬಾಂಗ್ಲಾದೇಶದಲ್ಲಿ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಯಲಿದೆ.
ಇಂದಿನಿಂದ ಅಂಡರ್-19 ಏಷ್ಯಾಕಪ್ ಕ್ರಿಕೆಟ್ ಟೂರ್ನಿ
ದುಬೈ: 10ನೇ ಆವೃತ್ತಿಯ ಅಂಡರ್-19 ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಗೆ ಶುಕ್ರವಾರ ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ 8 ಬಾರಿ ಚಾಂಪಿಯನ್ ಭಾರತಕ್ಕೆ 2017ರ ಚಾಂಪಿಯನ್ ಅಫ್ಘಾನಿಸ್ತಾನ ಸವಾಲು ಎದುರಾಗಲಿದೆ.
ಇವರೇ ನೋಡಿ ವಿಶ್ವ ನಂ.1 ಒನ್‌ಡೇ ಬೌಲರ್ ಕೇಶವ್ ಮಹರಾಜ್ ಮುದ್ದಾದ ಪತ್ನಿ..!
ಟೂರ್ನಿಯಲ್ಲಿ 8 ತಂಡಗಳು ಪಾಲ್ಗೊಳ್ಳಲಿದ್ದು, ತಲಾ 4 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಭಾರತದ ಜೊತೆ ಪಾಕಿಸ್ತಾನ, ನೇಪಾಳ, ಅಫ್ಘಾನಿಸ್ತಾನ ‘ಎ’ ಗುಂಪಿನಲ್ಲಿವೆ. ‘ಬಿ’ ಗುಂಪಿನಲ್ಲಿ ಆತಿಥೇಯ ಯುಎಇ, ಬಾಂಗ್ಲಾದೇಶ, ಶ್ರೀಲಂಕಾ ಹಾಗೂ ಜಪಾನ್ ತಂಡಗಳಿವೆ. ಸತತ 4ನೇ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಉದಯ್ ಪ್ರತಾಪ್ ನಾಯಕತ್ವದ ಭಾರತ ಡಿ.10ರಂದು ಬದ್ಧವೈರಿ ಪಾಕಿಸ್ತಾನ, ಡಿ.12ಕ್ಕೆ ನೇಪಾಳ ವಿರುದ್ಧ ಆಡಲಿದೆ. ಗುಂಪಿನಿಂದ ಅಗ್ರ 2 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಡಿ.17ಕ್ಕೆ ಫೈನಲ್ ಪಂದ್ಯ ನಡೆಯಲಿದೆ.
ವಿಂಡೀಸ್ ವಿರುದ್ಧ 2ನೇ ಏಕದಿನ ಗೆದ್ದ ಇಂಗ್ಲೆಂಡ್
ನಾರ್ಥ್ ಸೌಂಡ್(ಆ್ಯಂಟಿಗಾ): ಸ್ಯಾಮ್ ಕರ್ರನ್‌ರ ಮಾರಕ ಬೌಲಿಂಗ್, ವಿಲ್ ಜ್ಯಾಕ್ಸ್, ಜೋಸ್ ಬಟ್ಲರ್‌ರ ಆಕರ್ಷಕ ಅರ್ಧಶತಕಗಳ ನೆರವಿನಿಂದ, ವೆಸ್ಟ್‌ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 6 ವಿಕೆಟ್ ಜಯ ಪಡೆದು, 3 ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ ವಿಂಡೀಸ್ ಶಾಯ್ ಹೋಪ್ ಹಾಗೂ ಶೆರ್ಫಾನೆ ರುಥರ್‌ಫೋರ್ಡ್‌ರ ಹೋರಾಟದ ಅರ್ಧಶತಕಗಳ ಹೊರತಾಗಿಯೂ 202 ರನ್‌ಗೆ ಆಲೌಟ್ ಆಯಿತು. ಇಂಗ್ಲೆಂಡ್ ಇನ್ನೂ 17.1 ಓವರ್ ಬಾಕಿ ಇರುವಂತೆ ಗೆಲುವು ಸಂಪಾದಿಸಿತು.
ಈ ಹಿಂದೆ ಹರಾಜಿನಲ್ಲಿ ಮಾಡಿದ ಈ 6 ತಪ್ಪು RCB ಮಾಡದಿರಲಿ..! ನಿಮಗೆ ನೆನಪಿವೆಯಾ ಆರ್‌ಸಿಬಿ ಫ್ರಾಂಚೈಸಿ ಎಡವಟ್ಟುಗಳು?
ಸ್ಕೋರ್: ವಿಂಡೀಸ್ 39. 4 ಓವರಲ್ಲಿ 202/10 (ಹೋಪ್ 68, ರುಥರ್‌ಫೋರ್ಡ್ 63, ಕರ್ರನ್ 3-33), ಇಂಗ್ಲೆಂಡ್ 32.5 ಓವರಲ್ಲಿ 206/4 (ಜ್ಯಾಕ್ಸ್ 73, ಬಟ್ಲರ್ 58*, ಮೋತಿ 2-34)
ಕಿವೀಸ್-ಬಾಂಗ್ಲಾ ಟೆಸ್ಟ್: 2ನೇ ದಿನ ಮಳೆ ಕಾಟ
ಮೀರ್‌ಪುರ್: ನ್ಯೂಜಿಲೆಂಡ್-ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್‌ನ 2ನೇ ದಿನದಾಟ ಮಳೆಗೆ ಬಲಿಯಾಗಿದೆ. ಮೊದಲ ದಿನ 15 ವಿಕೆಟ್ ಪತನಗೊಂಡು ಪಂದ್ಯ ಕುತೂಹಲ ಘಟ್ಟ ತಲುಪಿತ್ತು. ಇನ್ನಿಂಗ್ಸ್ ಮುನ್ನಡೆ ಪಡೆಯುವ ತವಕದಲ್ಲಿದ್ದ ಎರಡೂ ತಂಡಗಳಿಗೆ ಗುರುವಾರ ನಿರಾಸೆ ಉಂಟಾಯಿತು. ಮೊದಲ ಇನ್ನಿಂಗ್ಸಲ್ಲಿ ಬಾಂಗ್ಲಾ 172ಕ್ಕೆ ಆಲೌಟ್ ಆದ ಬಳಿಕ, ಮೊದಲ ದಿನದಂತ್ಯಕ್ಕೆ ಬಾಂಗ್ಲಾ 5 ವಿಕೆಟ್‌ಗೆ 55 ರನ್ ಗಳಿಸಿ ಇನ್ನೂ 117 ರನ್ ಹಿನ್ನಡೆಯಲ್ಲಿದೆ.
