ಇಂಗ್ಲೆಂಡ್ ಎದುರು ಭಾರತ 3-2ರಲ್ಲಿ ಟೆಸ್ಟ್‌ ಸರಣಿ ಗೆಲ್ಲಲಿದೆ: ದ್ರಾವಿಡ್ ಭವಿಷ್ಯ

ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ಟೆಸ್ಟ್ ಸರಣಿ ಜಯಿಸಲಿದೆ.

ಬಲಿಷ್ಠ ಇಂಗ್ಲೆಂಡ್ ಎದುರು ಭಾರತ 3-2ರಲ್ಲಿ ಜಯಿಸಲಿದೆ ಎಂದ ರಾಹುಲ್ ದ್ರಾವಿಡ್

ಅನುಭವಿ ಅಶ್ವಿನ್‌ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ಕಾಟಕೊಡಲಿದ್ದಾರೆ ಎಂದು ಭವಿಷ್ಯ ನುಡಿದ '' ದ ವಾಲ್''

Former Cricketer Rahul Dravid predicts India to win Test series in England kvn

ಬೆಂಗಳೂರು(ಮೇ.10): ಮುಂಬರುವ ಇಂಗ್ಲೆಂಡ್‌ ವಿರುದ್ದದ ಟೆಸ್ಟ್‌ ಸರಣಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 3-2 ಅಂತರದಲ್ಲಿ ಟೆಸ್ಟ್‌ ಸರಣಿಯನ್ನು ಜಯಿಸಲಿದೆ ಎಂದು ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಭವಿಷ್ಯ ನುಡಿದಿದ್ದಾರೆ.

ಇಂಗ್ಲೆಂಡ್ ವಿರುದ್ದದ 5 ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯ ಆಗಸ್ಟ್ 04ರಂದು ನಾಟಿಂಗ್‌ಹ್ಯಾಮ್‌ನ ಟ್ರೆಂಟ್‌ ಬ್ರಿಡ್ಜ್‌ನಲ್ಲಿ ಆರಂಭವಾಗಲಿದೆ. ಇದಾದ ಬಳಿಕ ಲಾರ್ಡ್ಸ್‌, ಹೆಡಿಂಗ್ಲೆ, ಕೆನ್ನಿಂಗ್‌ಟನ್ ಓವಲ್‌ ಹಾಗೂ ಓಲ್ಡ್‌ ಟ್ರಾಪೋರ್ಡ್‌ನಲ್ಲಿ ಕ್ರಮವಾಗಿ ಉಳಿದ 4 ಟೆಸ್ಟ್‌ ಪಂದ್ಯಗಳು ಜರುಗಲಿವೆ. 

ಈ ಬಾರಿ ಭಾರತ ತಂಡ ಟೆಸ್ಟ್‌ ಸರಣಿ ಗೆಲ್ಲಲು ಉತ್ತಮ ಅವಕಾಶವಿದೆ ಎಂದು ನಾನು ಭಾವಿಸುತ್ತೇನೆ. ಇಂಗ್ಲೆಂಡ್‌ ತಂಡ ಬೌಲಿಂಗ್‌ನಲ್ಲಿ ಅದರಲ್ಲೂ ವೇಗದ ಬೌಲಿಂಗ್‌ ವಿಭಾಗದಲ್ಲಿ ಸಾಕಷ್ಟು ಬಲಿಷ್ಠವಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಭಾರತೀಯ ಬ್ಯಾಟ್ಸ್‌ಮನ್‌ಗಳು ತಕ್ಕ ತಿರುಗೇಟು ನೀಡುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಜೋ ರೂಟ್ ಹಾಗೂ ಬೆನ್‌ ಸ್ಟೋಕ್ಸ್‌ಗೆ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ ಸಾಕಷ್ಟು ಕಾಟ ಕೊಟ್ಟಿದ್ದರು. ಅದೇ ರೀತಿ ಈ ಬಾರಿಯು ಅನುಭವಿ ಸ್ಪಿನ್ನರ್ ಉಪಸ್ಥಿತಿ ಇಂಗ್ಲೆಂಡ್ ಬಲಿಷ್ಠ ಬ್ಯಾಟಿಂಗ್ ಎದುರು ಭಾರತ ಕೊಂಚ ಮೇಲುಗೈ ಸಾಧಿಸಲು ನೆರವಾಗಲಿದೆ ಎಂದು ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.

ಏಕಕಾಲದಲ್ಲಿ ಭಾರತದ 2 ಕ್ರಿಕೆಟ್ ತಂಡಗಳು ಕಣಕ್ಕೆ..!

ಭಾರತ ತಂಡವು ಎಲ್ಲಾ ರೀತಿಯಿಂದ ಸಿದ್ದತೆ ನಡೆಸಿ ಟೆಸ್ಟ್ ಸರಣಿಗೆ ಸಜ್ಜಾಗಲಿದೆ. ಈಗಾಗಲೇ ತಂಡದಲ್ಲಿರುವ ಕೆಲವು ಆಟಗಾರರು ಇಂಗ್ಲೆಂಡ್‌ ಪ್ರವಾಸ ಮಾಡಿದ ಅನುಭವ ಹೊಂದಿದ್ದಾರೆ. ಅವರ ಅನುಭವ ತಂಡಕ್ಕೆ ನೆರವಾಗಲಿದೆ. ನನ್ನ ಪ್ರಕಾರ ಭಾರತ ತಂಡವು ಇಂಗ್ಲೆಂಡ್‌ ವಿರುದ್ದದ 5 ಪಂದ್ಯಗಳ ಟೆಸ್ಟ್ ಸರಣಿಯನ್ನು 3-2 ಅಂತರದಲ್ಲಿ ಜಯಿಸಲಿದೆ ಎಂದು ತಿಳಿಸಿದ್ದಾರೆ.

ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಗೂ ಮುನ್ನ ಭಾರತ ತಂಡವು ಜೂನ್ 18-22ರವರೆಗೆ ಸೌಂಥಪ್ಟನ್‌ನಲ್ಲಿ ನ್ಯೂಜಿಲೆಂಡ್‌ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಕಾದಾಡಲಿದೆ.
 

Latest Videos
Follow Us:
Download App:
  • android
  • ios