* ಕ್ಯಾಪ್ಟನ್ ಕೂಲ್ ಧೋನಿಯನ್ನು ಭೇಟಿ ಮಾಡಿದ ಮೊಹಮ್ಮದ್ ಕೈಫ್* ಮುಂಬೈ ಏರ್‌ಪೋರ್ಟ್‌ನಲ್ಲಿ ತಾರಾ ಕ್ರಿಕೆಟಿಗರ ಮುಖಾಮುಖಿ* ಬೇಗ ಗುಣಮುಖರಾಗಿ ಎಂದು ಧೋನಿಗೆ ಶುಭ ಹಾರೈಸಿದ ಕೈಫ್

ಮುಂಬೈ(ಜೂ.07): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್‌, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಾಲಿ ನಾಯಕ ಎಂ ಎಸ್ ಧೋನಿಯನ್ನು ಮುಂಬೈನ ಏರ್‌ಪೋರ್ಟ್‌ನಲ್ಲಿ ಭೇಟಿಯಾಗಿದ್ದಾರೆ. ಈ ಕುರಿತಂತೆ ಮೊಹಮ್ಮದ್ ಕೈಪ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಫೋಟೋವನ್ನು ಹಂಚಿಕೊಂಡಿದ್ದು, ಧೋನಿ ಭೇಟಿಯಾಗಿದ್ದು ತಮ್ಮ ಮಗನಿಗೆ ಸಾಕಷ್ಟು ಖುಷಿ ಕೊಟ್ಟಿದೆ ಎಂದು ಕೈಫ್ ಹೇಳಿದ್ದಾರೆ.

ಹೌದು, ಮೊಹಮ್ಮದ್ ಕೈಫ್ ಕುಟುಂಬ, ಮುಂಬೈ ಏರ್‌ಪೋರ್ಟ್‌ನಲ್ಲಿ ಎಂ ಎಸ್ ಧೋನಿ ಕುಟುಂಬವನ್ನು ಭೇಟಿ ಮಾಡಿರುವ ಕೆಲವು ಫೋಟೋಗಳನ್ನು ಕೈಫ್ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಧೋನಿ, ಪತ್ನಿ ಸಾಕ್ಷಿ ಹಾಗೂ ಝಿವಾ ಜತೆ ಮೊಹಮ್ಮದ್ ಕೈಫ್, ಕೈಫ್ ಪತ್ನಿ ಪೂಜಾ ಹಾಗೂ ಪುತ್ರ ಕಬೀರ್‌ ಮಾತುಕತೆ ನಡೆಸಿದ್ದು, ಖುಷಿಯಾಗಿ ನಗುನಗುತ್ತಲೇ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ಇತ್ತೀಚೆಗಷ್ಟೇ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮಹೇಂದ್ರ ಸಿಂಗ್ ಧೋನಿ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಮೊಹಮ್ಮದ್ ಕೈಫ್ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ.

ನಾವಿಂದು ಗ್ರೇಟ್‌ ವ್ಯಕ್ತಿ ಹಾಗೂ ಅವರ ಕುಟುಂಬವನ್ನು ಏರ್‌ಪೋರ್ಟ್‌ನಲ್ಲಿ ಭೇಟಿ ಮಾಡಿದೆವು. ಸರ್ಜರಿ ಬಳಿಕ ಅವರು ಮನಗೆ ವಾಪಾಸ್ಸಾಗುತ್ತಿದ್ದರು. ತಮ್ಮ ಮಗ ಕಬಿರ್‌ನಂತೆ ತಾವು ಕೂಡಾ ಚಿಕ್ಕವರಿದ್ದಾಗ ಫುಟ್ಬಾಲ್ ಆಡುತ್ತಿದ್ದರಂತೆ. ಇದನ್ನು ಕೇಳಿ ನನ್ನ ಮಗನಿಗೆ ಮತ್ತಷ್ಟು ಖುಷಿಯಾಯಿತು. ಆದಷ್ಟು ಬೇಗ ಗುಣಮುಖರಾಗಿ. ಮುಂದಿನ ಆವೃತ್ತಿಯಲ್ಲಿ ಸಿಗೋಣ ಚಾಂಪಿಯನ್ ಎಂದು ಮೊಹಮ್ಮದ್ ಕೈಫ್ ಫೋಟೋದೊಂದಿಗೆ ಟ್ವೀಟ್ ಮಾಡಿದ್ದಾರೆ.

Scroll to load tweet…

ಮಹೇಂದ್ರ ಸಿಂಗ್ ಧೋನಿ ಹಾಗೂ ಮೊಹಮ್ಮದ್ ಕೈಫ್ 2006ರ ವರೆಗೂ ಭಾರತ ತಂಡದ ಪರ ಜತೆಯಾಗಿಯೇ ಆಡಿದ್ದರು. 2006ರಲ್ಲಿ ನಿರಂತರ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರ ಪರಿಣಾಮ ಕೈಫ್, ಭಾರತ ಕ್ರಿಕೆಟ್ ತಂಡದಿಂದ ಹೊರಬಿದ್ದಿದ್ದರು. ಇದಾದ ಬಳಿಕ ಹಲವು ವರ್ಷಗಳ ಕಾಲ ದೇಶಿ ಕ್ರಿಕೆಟ್‌ನಲ್ಲಿ ಮಿಂಚಿದ್ದ ಕೈಫ್‌ 2018ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು.

ಧೋನಿ-ಜಡ್ಡು ಮನಸ್ತಾಪ ವಿಚಾರ: 'ಮಗಾ ಬಾ ಇಲ್ಲಿ...' ಎನ್ನುತ್ತಾರೆಂದ ವಾಸೀಂ ಅಕ್ರಂ...!

ಮೊಹಮ್ಮದ್ ಕೈಫ್‌ ತಮ್ಮ ಬ್ಯಾಟಿಂಗ್‌ಗಿಂತ ಹೆಚ್ಚಾಗಿ ಚುರುಕಿನ ಕ್ಷೇತ್ರ ರಕ್ಷಣೆ ಮೂಲಕ ಹೆಚ್ಚು ಗಮನ ಸೆಳೆದಿದ್ದರು. 2002ರಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ 2003ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ನಾಟ್‌ವೆಸ್ಟ್ ಫೈನಲ್‌ ಐತಿಹಾಸಿಕ ಗೆಲುವಿನಲ್ಲಿ ಮೊಹಮ್ಮದ್ ಕಫ್ ಪ್ರಮುಖ ಪಾತ್ರ ವಹಿಸಿದ್ದರು. ಇದಷ್ಟೇ ಅಲ್ಲದೇ 2003ರ ಐಸಿಸಿ ಏಕದಿನ ವಿಶ್ವಕಪ್ ರನ್ನರ್ ಅಪ್ ತಂಡದ ಸದಸ್ಯರು ಆಗಿದ್ದರು. 

ಬಲಗೈ ಬ್ಯಾಟರ್ ಮೊಹಮ್ಮದ್ ಕೈಫ್‌ ಭಾರತ ಪರ 13 ಟೆಸ್ಟ್ ಹಾಗೂ 125 ಏಕದಿನ ಪಂದ್ಯಗಳನ್ನಾಡಿ ಕ್ರಮವಾಗಿ 624 ಹಾಗೂ 2,753 ರನ್ ಬಾರಿಸಿದ್ದಾರೆ. ಇನ್ನು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಉತ್ತರಪ್ರದೇಶ ಪರ 186 ಪಂದ್ಯಗಳನ್ನಾಡಿ 10,229 ರನ್ ಬಾರಿಸಿದ್ದಾರೆ.

5ನೇ ಐಪಿಎಲ್ ಟ್ರೋಫಿ ಗೆದ್ದ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌:

16ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು, ಗುಜರಾತ್ ಟೈಟಾನ್ಸ್ ಎದುರು 5 ವಿಕೆಟ್ ರೋಚಕ ಜಯ ಸಾಧಿಸುವ ಮೂಲಕ 5ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಅತಿಹೆಚ್ಚು ಐಪಿಎಲ್ ಟ್ರೋಫಿ ಗೆದ್ದ ತಂಡಗಳ ಪೈಕಿ ಮುಂಬೈ ಇಂಡಿಯನ್ಸ್ ಪರ ಜಂಟಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಐಪಿಎಲ್ ಫೈನಲ್ ಮುಗಿದ ಬೆನ್ನಲ್ಲೇ ಧೋನಿ ಮೊಣಕಾಲ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.