ಸಿಡ್ನಿ(ನ.28): ಮಾಜಿ ನಾಯಕ ಜಾರ್ಜ್ ಬೈಲಿ, ಆಸ್ಟೇಲಿಯಾ ಕ್ರಿಕೆಟ್‌ ತಂಡದ ಆಯ್ಕೆಗಾರನಾಗಿ ಬುಧವಾರ ನೇಮಕಗೊಂಡಿದ್ದಾರೆ. ಇತ್ತೀಚೆಗಷ್ಟೇ ಗ್ರೇಗ್‌ ಚಾಪೆಲ್‌ ನಿವೃತ್ತಿಯಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ಬೈಲಿ ನೇಮಕವಾಗಿದ್ದಾರೆ. 

ಸಂಜು ಸ್ಯಾಮ್ಸನ್‌ಗೆ ಸ್ಥಾನ: ಕೊನೆಗೂ ಖುಷಿಯಾದ ಫ್ಯಾನ್ಸ್..!

ಬೈಲಿ ಅವರನ್ನು ಆಯ್ಕೆ ಸಮಿತಿಗೆ ಸೇರಿಸಲು ಆಸ್ಪ್ರೇಲಿಯಾ ಕ್ರಿಕೆಟ್‌ ಮುಖ್ಯಸ್ಥ ಟ್ರೆವರ್‌ ಹಾನ್ಸ್‌ ಮತ್ತು ಕೋಚ್‌ ಜಸ್ಟಿನ್‌ ಲ್ಯಾಂಗರ್‌ ಹೆಚ್ಚಿನ ಆಸಕ್ತಿ ಹೊಂದಿದ್ದರು. 37 ವರ್ಷ ವಯಸ್ಸಿನ ಬೈಲಿ, ಆಸ್ಪ್ರೇಲಿಯಾ ಪರ 5 ಟೆಸ್ಟ್‌, 90 ಏಕದಿನ ಹಾಗೂ 30 ಟಿ20 ಪಂದ್ಯಗಳನ್ನಾಡಿದ್ದಾರೆ. ಕಳೆದ ತಿಂಗ​ಳು ಸಹ ಅವರು ಪ್ರಥಮ ದರ್ಜೆ ಟೂರ್ನಿ​ಯಲ್ಲಿ ಆಡಿ​ದ್ದರು.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗಂಭೀರ್ ಸ್ಟ್ಯಾಂಡ್ ಅನಾವರಣ!

ಜಾರ್ಜ್ ಬೈಲಿ ಒಬ್ಬ ಪ್ರತಿಭಾನ್ವಿತ ನಾಯಕನಾಗಿದ್ದು, ಎಲ್ಲರಿಗೂ ಅವರ ಮೇಲೆ ಗೌರವವಿದೆ. ಹೊಸ ಪ್ರತಿಭೆಗಳನ್ನು ಹುಡುಕಿಕೊಡುವ ವಿಶ್ವಾಸವಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮುಖ್ಯಸ್ಥ ಬೆನ್ ಓಲಿವರ್ ತಿಳಿಸಿದ್ದಾರೆ.