ಶತಕವಿಲ್ಲದೆ 1,000 ದಿನ ಪೂರೈಸಿದ ವಿರಾಟ್‌ ಕೊಹ್ಲಿ..!

* ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕವಿಲ್ಲದೇ ಒಂದು ಸಾವಿರ ದಿನ ಪೂರೈಸಿದ ವಿರಾಟ್ ಕೊಹ್ಲಿ
* ಶತಕದ ಬರ ಅನುಭವಿಸುತ್ತಿರುವ ಟೀಂ ಇಂಡಿಯಾ ಮಾಜಿ ನಾಯಕ
* 2019ರ ನವೆಂಬರ್‌ 23ರಂದು ಕೊನೆಯ ಬಾರಿಗೆ ಶತಕ ಬಾರಿಸಿದ್ದ ವಿರಾಟ್ ಕೊಹ್ಲಿ

Former Captain Virat Kohli goes 1000 days without scoring international century kvn

ನವದೆಹಲಿ(ಆ.20): ಭಾರತ ತಂಡದ ‘ರನ್‌ ಮಷಿನ್‌’ ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸದೆ ಶುಕ್ರವಾರಕ್ಕೆ 1000 ದಿನಗಳಾದವು. ಲಯದ ಸಮಸ್ಯೆ ಎದುರಿಸುತ್ತಿರುವ ವಿರಾಟ್‌, ವೆಸ್ಟ್‌ಇಂಡೀಸ್‌ ಮತ್ತು ಜಿಂಬಾಬ್ವೆ ಪ್ರವಾಸದಿಂದ ವಿಶ್ರಾಂತಿ ಪಡೆದಿದ್ದರು. ಏಷ್ಯಾಕಪ್‌ ಟಿ20ಯಲ್ಲಿ ಕಣಕ್ಕಿಳಿಯಲಿರುವ ಕೊಹ್ಲಿ ಶತಕ ಬಾರಿಸುವ ನಿರೀಕ್ಷೆಯಲ್ಲಿದ್ದಾರೆ. ಕೊನೆಯ ಬಾರಿಗೆ ವಿರಾಟ್‌ರ ಬ್ಯಾಟ್‌ನಿಂದ ಶತಕ ಸಿಡಿದಿದ್ದು 2019ರ ನವೆಂಬರ್‌ 23ರಂದು. ಬಾಂಗ್ಲಾದೇಶ ವಿರುದ್ಧ ಕೋಲ್ಕತಾದ ಈಡನ್‌ ಗಾರ್ಡನ್ಸ್‌ನಲ್ಲಿ ನಡೆದಿದ್ದ ಹಗಲು-ರಾತ್ರಿ ಟೆಸ್ಟ್‌ ಪಂದ್ಯದಲ್ಲಿ ವಿರಾಟ್‌ 136 ರನ್‌ ಗಳಿಸಿದ್ದರು.

ಇದಾದ ಬಳಿಕ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂರಂಕಿ ಮೊತ್ತ ದಾಖಲಿಸಲು ಪದೇ ಪದೇ ವಿಫಲವಾಗುತ್ತಾ ಬಂದಿದ್ದಾರೆ. ವಿರಾಟ್ ಕೊಹ್ಲಿ ಫಾರ್ಮ್‌ ಟೀಂ ಇಂಡಿಯಾ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಕೌಂಟಿ: ವಾರ್ವಿಕ್‌ಶೈರ್‌ ಪರ ಆಡಲಿರುವ ವೇಗಿ ಸಿರಾಜ್‌

ಬರ್ಮಿಂಗ್‌ಹ್ಯಾಮ್‌: ಭಾರತದ ವೇಗದ ಬೌಲರ್‌ ಮೊಹಮದ್‌ ಸಿರಾಜ್‌ ಮುಂದಿನ ತಿಂಗಳು ಇಂಗ್ಲೆಂಡ್‌ ಕೌಂಟಿಯಲ್ಲಿ ವಾರ್ವಿಕ್‌ಶೈರ್‌ ಪರ 3 ಪ್ರಥಮ ದರ್ಜೆ ಪಂದ್ಯಗಳನ್ನು ಆಡಲಿದ್ದಾರೆ. ಸದ್ಯ ಜಿಂಬಾಬ್ವೆಯಲ್ಲಿ ಏಕದಿನ ಸರಣಿಯನ್ನು ಆಡುತ್ತಿರುವ ಸಿರಾಜ್‌ರನ್ನು ಭಾರತ ಟಿ20 ತಂಡಕ್ಕೆ ಆಯ್ಕೆಗೆ ಪರಿಗಣಿಸುವ ಸಾಧ್ಯತೆ ಕಡಿಮೆ. ಹೀಗಾಗಿ ಅವರು ಈ ಕೌಂಟಿ ಋುತುವಿನ ಅಂತಿಮ 3 ಪಂದ್ಯಗಳಲ್ಲಿ ಆಡಲು ನಿರ್ಧರಿಸಿದ್ದಾರೆ.

ಇಂಗ್ಲೆಂಡ್‌ ವಿರುದ್ಧ ಇನಿಂಗ್ಸ್‌ ಜಯ ಸಾಧಿಸಿದ ದ.ಆಫ್ರಿಕಾ!

ಲಂಡನ್‌: ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಇನಿಂಗ್ಸ್‌ ಮತ್ತು 12 ರನ್‌ ಗೆಲುವು ಸಾಧಿಸಿ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ದಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 165 ರನ್‌ ಗಳಿಸಿದ್ದ ಇಂಗ್ಲೆಂಡ್‌ 2ನೇ ಇನಿಂಗ್ಸ್‌ನಲ್ಲಿ 149 ರನ್‌ಗೆ ಆಲೌಟ್‌ ಆಯಿತು. 

ಗಂಗೂಲಿ ಟಾರ್ಗೆಟ್ ಮಾಡಿದ್ದೆ, ಭಯಾನಕ ಗುಟ್ಟು ರಟ್ಟು ಮಾಡಿದ ಅಖ್ತರ್!

ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ನಲ್ಲಿ 326 ರನ್‌ ಕಲೆಹಾಕಿ 161 ರನ್‌ಗಳ ಮುನ್ನಡೆ ಸಂಪಾದಿಸಿತ್ತು. ಕೇವಲ ಮೂರೇ ದಿನಗಳಲ್ಲಿ ಪಂದ್ಯ ಮುಕ್ತಾಯಗೊಂಡಿತು. 2003ರ ಬಳಿಕ ಇದೇ ಮೊದಲ ಬಾರಿಗೆ ಇಂಗ್ಲೆಂಡ್‌ ಲಾರ್ಡ್ಸ್ನಲ್ಲಿ ಇನಿಂಗ್ಸ್‌ ಸೋಲು ಅನುಭವಿಸಿದೆ.

ನ್ಯೂಜಿಲೆಂಡ್‌ ವಿರುದ್ಧ ವಿಂಡೀಸ್‌ಗೆ ಗೆಲುವು

ಬ್ರಿಡ್ಜ್‌ಟೌನ್‌: ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವ ನ್ಯೂಜಿಲೆಂಡ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ 5 ವಿಕೆಟ್‌ ಜಯ ಸಾಧಿಸಿ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ 45.2 ಓವರಲ್ಲಿ 190 ರನ್‌ಗೆ ಆಲೌಟ್‌ ಆಯಿತು. 2020ರ ಮಾರ್ಚ್‌ ಬಳಿಕ 50 ಓವರ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ಆಲೌಟ್‌ ಆಗಿದ್ದು ಇದೇ ಮೊದಲು. ಸುಲಭ ಗುರಿ ಬೆನ್ನತ್ತಿದ ವಿಂಡೀಸ್‌ 39 ಓವರಲ್ಲಿ 5 ವಿಕೆಟ್‌ಗೆ 193 ರನ್‌ ಗಳಿಸಿತು. ಶಮಾರ್ಹ ಬ್ರೂಕ್ಸ್‌ 79 ರನ್‌ ಬಾರಿಸಿದರು.

ಆಫ್ಘನ್‌ ವಿರುದ್ಧ ಟಿ20 ಸರಣಿ ಗೆದ್ದ ಐರ್ಲೆಂಡ್‌

ಬೆಲ್‌ಫಾಸ್ಟ್‌: ಅಷ್ಘಾನಿಸ್ತಾನ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯನ್ನು ಐರ್ಲೆಂಡ್‌ 3-2ರ ಅಂತರದಲ್ಲಿ ಗೆದ್ದುಕೊಂಡಿದೆ. ಮಳೆ ಬಾಧಿತ ಅಂತಿಮ ಪಂದ್ಯದಲ್ಲಿ ಅಷ್ಘಾನಿಸ್ತಾನ 15 ಓವರಲ್ಲಿ 5 ವಿಕೆಟ್‌ಗೆ 95 ರನ್‌ ಗಳಿಸಿತು. ಐರ್ಲೆಂಡ್‌ಗೆ 7 ಓವರಲ್ಲಿ 56 ರನ್‌ ಗುರಿ ನೀಡಲಾಗಿತ್ತು. ಆತಿಥೇಯ ತಂಡ 6.4 ಓವರಲ್ಲಿ 3 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು.

Latest Videos
Follow Us:
Download App:
  • android
  • ios