INDvBAN: ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ ಪಂದ್ಯ ವೀಕ್ಷಿಸಲು 5 ಕಾರಣ!

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯ ವೀಕ್ಷಿಸಲು ಹಲವು ಕಾರಣಗಳಿವೆ. ಅಭಿಮಾನಿಗಳು ಕೂಡ ಐತಿಹಾಸಿಕ ಪಂದ್ಯಕ್ಕೆ ಕಾತರಗೊಂಡಿದ್ದಾರೆ. ಪಿಂಕ್ ಬಾಲ್ ಟೆಸ್ಟ್ ಪಂದ್ಯ ವೀಕ್ಷಿಸಬೇಕು ಅನ್ನೋದಕ್ಕೆ 5 ಕಾರಣಗಳಿವೆ. 

Five reasons to watch the historic Pink Ball test match  at kolkata

ಕೋಲ್ಕತಾ(ನ.20): ಐತಿಹಾಸಿ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯಕ್ಕೆ ಭಾರತ ಎಲ್ಲಾ ತಯಾರಿ ಮಾಡಿಕೊಂಡಿದೆ. ಭಾರತ ಆಯೋಜಿಸುತ್ತಿರುವ ಮೊದಲ ಹಗಲು ರಾತ್ರಿ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಲು ಬಿಸಿಸಿಐ ಕೂಡ ಸಜ್ಜಾಗಿದೆ. ಭಾರತ ಹಾಗೂ ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್ ಪಂದ್ಯ ಡೇ ಅಂಡ್ ನೈಟ್ ಪಂದ್ಯವಾಗಿ ಆಯೋಜಿಸಲಾಗಿದೆ. ನವೆಂಬರ್ 22 ರಿಂದ ಈ ವಿಶೇಷ ಪಂದ್ಯ ನಡೆಯಲಿದೆ.

ಇದನ್ನೂ ಓದಿ: ಡೇ & ನೈಟ್ ಟೆಸ್ಟ್ ಪಂದ್ಯಕ್ಕೆ 72 ಪಿಂಕ್‌ ಬಾಲ್‌!

ಡೇ ಅಂಡ್ ನೈಟ್ ಟೆಸ್ಟ್ ಪಂದ್ಯಕ್ಕೆ ರೆಡ್ ಬಾಲ್ ಬದಲು ಪಿಂಕ್ ಬಾಲ್ ಬಳಕೆ ಮಾಡಲಾಗುತ್ತೆ. ಇಂಡೋ ಬಾಂಗ್ಲಾ ನಡುವಿನ ಪಿಂಕ್ ಬಾಲ್ ಟೆಸ್ಟ್ ಪಂದ್ಯ ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದಾರೆ. ಈಗಾಗಲೇ ಪಂದ್ಯದ ಟಿಕೆಟ್‌ಗಳು ಬಹುತೇಕ ಸೋಲ್ಡ್ ಔಟ್ ಆಗಿವೆ. ಐತಿಹಾಸಿಕ ಪಿಂಕ್  ಬಾಲ್ ಪಂದ್ಯ ವೀಕ್ಷಿಸಲು 5 ಪ್ರಮುಖ ಕಾರಣಗಳಿವೆ. 

ಬಿಸಿಸಿಐ ಅಧ್ಯಕ್ಷನಾಗಿ ಗಂಗೂಲಿ ಹೊಸ ಪ್ರಯೋಗ
ಮಾಜಿ ನಾಯಕ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಪಟ್ಟಕ್ಕೇರಿದ ಬೆನ್ನಲ್ಲೇ ಇಂಡೋ-ಬಾಂಗ್ಲಾ ಪಂದ್ಯವನ್ನು ಪಿಂಕ್ ಬಾಲ್ ಪಂದ್ಯವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಬಿಸಿಸಿಐ ಭಾರತದಲ್ಲಿ ಟೆಸ್ಟ್ ಕ್ರಿಕೆಟ್ ಮತ್ತಷ್ಟು ಜನಪ್ರಿಯ ಮಾಡಲು ದಿಟ್ಟ ಹೆಜ್ಜೆ ಇಟ್ಟರು. ಇದೀಗ ಈ ಪಂದ್ಯವನ್ನ ಸ್ಮರಣೀಯವಾಗಿಸಲು ಗಂಗೂಲಿ ಹಲವು ದಿಗ್ಗಜ ಕ್ರಿಕೆಟಿಗರಿಗೆ ಆಹ್ವಾನ ನೀಡಲಾಗಿದೆ. ಇಷ್ಟೇ ಅಲ್ಲ ಹಲವು ಕಾರ್ಯಕ್ರಮಗಳು ನಡೆಯಲಿದೆ. 

ಇದನ್ನೂ ಓದಿ: ಡೇ & ನೈಟ್ ಟೆಸ್ಟ್: ಪಿಂಕ್ ಬಾಲ್ ತಯಾರಿಕೆ ಹೇಗಿದೆ? ಇಲ್ಲಿದೆ ವಿಶೇಷತೆ!

ಪಿಂಕ್ ಬಾಲ್ ಪಂದ್ಯಕ್ಕೆ  ಈಡನ್ ಗಾರ್ಡನ್ಸ್ ಸಾಕ್ಷಿ
ಹಗಲು ರಾತ್ರಿ ಪಂದ್ಯಕ್ಕೆ ಪಿಂಕ್ ಬಾಲ್ ಬಳಸಲಾಗುತ್ತೆ. ಮೊದಲ ಪಿಂಕ್ ಬಾಲ್ ಪಂದ್ಯಕ್ಕೆ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನ ಸಾಕ್ಷಿಯಾಗಲಿದೆ. ಇಷ್ಟೇ ಭಾರತ ಭವಿಷ್ಯದಲ್ಲಿ ಹೆಚ್ಚು ಹೆಚ್ಚು ಪಿಂಕ್ ಬಾಲ್ ಪಂದ್ಯ ಆಯೋಜಿಸಲಿದೆ ಅನ್ನೋ ಸೂಚನೆಯನ್ನು ಬಿಸಿಸಿಐ ನೀಡಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಐತಿಹಾಸಿಕ ಕ್ಷಣ
ಸುಮಾರು 1800ರಲ್ಲಿ ಟೆಸ್ಟ್ ಕ್ರಿಕೆಟ್ ಆರಂಭವಾಯಿತು. ಬಳಿಕ ಹಲವು ಬದಲಾವಣೆಗಳೊಂದಿಗೆ ಟೆಸ್ಟ್ ಕ್ರಿಕೆಟ್ ಸಾಗಿ ಬಂದಿದೆ. ಆದರೆ ಏಕದಿನ ಕ್ರಿಕೆಟ್ ಹಾಗೂ ಟಿ20 ಕ್ರಿಕೆಟ್ ಕಂಡ ಬದಲಾವಣೆಗಳು ಟೆಸ್ಟ್ ಕ್ರಿಕೆಟ್ ಕಂಡಿಲ್ಲ. ಇದೀಗ ಟೆಸ್ಟ್ ಕ್ರಿಕೆಟ್ ಕೂಡ ಬದಲಾವಣೆಗೆ ತೆರೆದುಕೊಂಡಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್ ಸೇರಿದಂತೆ ಇತರ ತಂಡಗಳು ಈಗಾಗಲೇ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಆಡಿವೆ. ಆದರೆ ಭಾರತ ಇದೇ ಮೊದಲ ಬಾರಿ ಹಗಲು ರಾತ್ರಿ ಟೆಸ್ಟ್ ಪಂದ್ಯ ಆಡುತ್ತಿದೆ.

ಡೇ ಅಂಡ್ ನೈಟ್ ಪಂದ್ಯಕ್ಕೆ ಕೊಹ್ಲಿ ಸೈನ್ಯ ರೆಡಿ
ಐತಿಹಾಸಿಕ ಡೆ ಅಂಡ್ ನೈಟ್ ಟೆಸ್ಟ್ ಪಂದ್ಯಕ್ಕೆ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸಜ್ಜಾಗಿದೆ. ಸಚಿನ್ ತೆಂಡುಲ್ಕರ್ ವಿದಾಯದ ಟೆಸ್ಟ್ ಪಂದ್ಯದ ಹನ್ನೊಂದರ ಬಳಗಲ್ಲಿ ತಾನೂ ಇರಬೇಕು ಅನ್ನೋ ಹಂಬಲ ಬಹುತೇಕ ಭಾರತೀಯ ಕ್ರಿಕೆಟಿಗರಲ್ಲಿ ಇತ್ತು. ಇದೀಗ ಇದೇ ರೀತಿಯ ಹಂಬಲ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೂ ಇದೆ. 

Latest Videos
Follow Us:
Download App:
  • android
  • ios