ಉಗಾಂಡ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದಿದೆ. ಅರ್ಹತೆ ಪಡೆದ ಬೆನ್ನಲ್ಲೇ ಆಟಗಾರರು ತಮ್ಮ ಸಾಂಪ್ರದಾಯಿಕ ಡ್ಯಾನ್ಸ್ ಮೂಲಕ ಸಂಭ್ರಮ ಆಚರಿಸಿದ ವಿಡಿಯೋ ವೈರಲ್ ಆಗಿದೆ. 

ನ್ಯೂಯಾರ್ಕ್(ನ.30) ಐಸಿಸಿ ವಿಶ್ವಕಪ್ ಟೂರ್ನಿ ಅಂತ್ಯಗೊಂಡ ಬೆನ್ನಲ್ಲೇ ಇದೀಗ ಟಿ20 ವಿಶ್ವಕಪ್ ಮೇಲೆ ಪ್ರಮುಖ ತಂಡಗಳು ಕಣ್ಣಿಟ್ಟಿದೆ. ಈ ಪ್ರತಿಷ್ಠಿತ ಟೂರ್ನಿಗೆ ಇದೇ ಮೊದಲ ಬಾರಿಗೆ ಉಗಾಂಡ ಅರ್ಹತೆ ಪಡೆಯುವ ಮೂಲಕ ಇತಿಹಾಸ ನಿರ್ಮಾಣವಾಗಿದೆ. ರ್ವಾಂಡ ತಂಡದ ವಿರುದ್ದ 9 ವಿಕೆಟ್ ಭರ್ಜರಿ ಗೆಲುವು ದಾಖಲಿಸುವ ಮೂಲಕ ಉಗಾಂಡ 2024ರ ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದಿದೆ. ಗೆಲುವಿನ ದಡ ಸೇರುತ್ತಿದ್ದಂತೆ ಉಗಾಂಡ ತಂಡ ಸಂಭ್ರಮ ಆಚರಿಸಿದೆ. ತಮ್ಮ ಸಾಂಪ್ರದಾಯಿಕ ಡ್ಯಾನ್ಸ್ ಮೂಲಕ ಗೆಲವಿನ ಸಂಭ್ರಮ ಆಚರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ರ್ವಾಂಡ ತಂಡವನ್ನು 18.5 ಓವರ್‌ಗಳಲ್ಲಿ 65 ರನ್‌ಗೆ ಆಲೌಟ್ ಮಾಡಿದ ಉಗಾಂಡ ದಿಟ್ಟ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿತು. 8.1 ಓವರ್‌ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ಭರ್ಜರಿ 9 ವಿಕೆಟ್ ಗೆಲುವಿನೊಂದಿಗೆ ಉಗಾಂಡ ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದುಕೊಂಡಿದೆ. ಈ ಮೂಲಕ ಟಿ20 ವಿಶ್ವಕಪ್ ಆಡುತ್ತಿರುವ 5ನೇ ಆಫ್ರಿಕನ್ ತಂಡ ಅನ್ನೋ ಹೆಗ್ಗಳಿಕೆಗೆ ಉಗಾಂಡ ಪಾತ್ರವಾಗಿದೆ.

ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವೈಟ್‌ಬಾಲ್ ಸರಣಿಯಿಂದ ಬ್ರೇಕ್ ಬಯಸಿದ್ದೇಕೆ?

ಉಗಾಂಡ ಟಿ20 ವಿಶ್ವಕಪ್ 2024ರ ಟೂರ್ನಿಗೆ ಅರ್ಹತೆ ಪಡೆದರೆ, ಇತ್ತ ಮತ್ತೊಂದು ಆಫ್ರಿಕಾ ತಂಡ ಜಿಂಬಾಬ್ವೆ ಅರ್ಹತೆ ಪಡೆಯಲು ವಿಫಲವಾಗಿದೆ. 2024ರ ಜೂನ್ ತಿಂಗಳಲ್ಲಿ ಐಸಿಸಿಟಿ20 ವಿಶ್ವಕಪ್ ಆರಂಭಗೊಳ್ಳುತ್ತಿದೆ. ಈಗಿನಿಂದಲೇ ತಯಾರಿಗಳು ಆರಂಭಗೊಂಡಿದೆ. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮುಗ್ಗರಿಸಿದ ಭಾರತ, ಇದೀಗ ಟಿ20 ವಿಶ್ವಕಪ್ ಗೆಲುವಿಗೆ ತಯಾರಿ ಆರಂಭಿಸಿದೆ.

Uganda

2024 ಜೂನ್ 4 ರಿಂದ 30ರ ವರೆಗೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಸೂಪರ್ 8 ಸ್ಟೇಜ್, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯದೊಂದಿಗೆ ಟೂರ್ನಿ ಅಂತ್ಯಗೊಳ್ಳಲಿದೆ. 

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡ ಆಯ್ಕೆ ಇಂದು; ರೋಹಿತ್ ಶರ್ಮಾ ಲಭ್ಯತೆ ಅನುಮಾನ?

2024ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ ತಂಡಗಳು
ಭಾರತ, ಇಂಗ್ಲೆಂಡ್, ನ್ಯೂಜಿಲೆಂಡ್, ಸೌತ್ ಆಫ್ರಿಕಾ, ಶ್ರೀಲಂಕಾ, ಆಸ್ಟ್ರೇಲಿಯಾ, ಆಫ್ಘಾನಿಸ್ತಾನ, ವೆಸ್ಟ್ ಇಂಡೀಸ್, ಪಾಕಿಸ್ತಾನ, ಬಾಂಗ್ಲಾದೇಶ, ಐರ್ಲೆಂಡ್, ಸ್ಕಾಟ್‌ಲೆಂಡ್, ಪಾಪುವಾ ನ್ಯೂಗಿನಿ, ಕೆನಡಾ, ನೇಪಾಳ, ನಮಿಬಿಯಾ, ಯುಎಸ್‌ಎ, ಉಗಾಂಡ 

Scroll to load tweet…