ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವೈಟ್‌ಬಾಲ್ ಸರಣಿಯಿಂದ ಬ್ರೇಕ್ ಬಯಸಿದ್ದೇಕೆ?
ಆಸ್ಟ್ರೇಲಿಯಾ ವಿರುದ್ಧದ T20 ಸರಣಿ ನಂತರ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ರೆಡಿಯಾಗಬೇಕಿದೆ. ಹರಿಣಗಳ ನಾಡಲ್ಲಿ ಟಿ20, ಒನ್ಡೇ ಮತ್ತು ಟೆಸ್ಟ್ ಸರಣಿಯನ್ನಾಡಲಿದೆ. ಡಿಸೆಂಬರ್ 10 ರಿಂದ ಟಿ20 ಸರಣಿ ಆರಂಭವಾಗಲಿದೆ.
ಬೆಂಗಳೂರು(ನ.30): ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ರನ್‌ಮಷಿನ್ ವಿರಾಟ್ ಕೊಹ್ಲಿ, ಶಾಕಿಂಗ್ ನಿರ್ಧಾರ ಕೈಗೊಂಡಿದ್ದಾರೆ. ಇದ್ರಿಂದ ಅಭಿಮಾನಿಗಳಿಗೆ ಭಾರಿ ನಿರಾಸೆ ಯಾಗಿದೆ.ಅಷ್ಟಕ್ಕೂ ಕೊಹ್ಲಿ ಕೈಗೊಂಡಿರೋ ನಿರ್ಧಾರ ಏನು..? ಇದ್ರಿಂದ ಹಿಂದಿನ ಕಾರಣಗಳೇನು..? ಅಂತ ಡಿಟೇಲ್ ಆಗಿ ಹೇಳ್ತೀವಿ, ಈ ಸ್ಟೋರಿ ನೋಡಿ..!
ಆಸ್ಟ್ರೇಲಿಯಾ ವಿರುದ್ಧದ T20 ಸರಣಿ ನಂತರ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ರೆಡಿಯಾಗಬೇಕಿದೆ. ಹರಿಣಗಳ ನಾಡಲ್ಲಿ ಟಿ20, ಒನ್ಡೇ ಮತ್ತು ಟೆಸ್ಟ್ ಸರಣಿಯನ್ನಾಡಲಿದೆ. ಡಿಸೆಂಬರ್ 10 ರಿಂದ ಟಿ20 ಸರಣಿ ಆರಂಭವಾಗಲಿದೆ. ಈ ಸರಣಿಗಳಿಗಾಗಿ ಸೆಲೆಕ್ಷನ್ ಕಮಿಟಿ ತಂಡವನ್ನ ಆಯ್ಕೆ ಮಾಡಲಿದೆ. ಆದ್ರೆ, ಸೀನಿಯರ್ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಫ್ರಿಕಾ ಫ್ಲೈಟ್ ಹತ್ತಲ್ಲ ಅನ್ನೋ ಮಾತುಗಳು ಕೇಳಿಬರ್ತಿವೆ. ಅದರಲ್ಲೂ ಕೊಹ್ಲಿ ವೈಟ್ ಬಾಲ್ ಕ್ರಿಕೆಟ್ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಯೆಸ್, ದಕ್ಷಿಣ ಆಫ್ರಿಕಾದಲ್ಲಿ ನಡೆಯೋ ವೈಟ್ಬಾಲ್ ಸರಣಿಗಳಿಂದ ಹೊರಗುಳಿಯೋ ನಿರ್ಧಾರವನ್ನ ಕೊಹ್ಲಿ ಮಾಡಿದ್ದಾರೆ. ಈಗಾಗ್ಲೇ ತಮ್ಮ ನಿರ್ಧಾರವನ್ನ BCCI ಮತ್ತು ಆಯ್ಕೆ ಸಮಿತಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಇದ್ರಿಂದ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ಯಾಕಂದ್ರೆ, ಕೊಹ್ಲಿ ಬ್ಯಾಟಿಂಗ್ ಕಣ್ತುಂ ಬಿಕೊಳ್ಳಲು ಟೆಸ್ಟ್ ಸರಣಿವರೆಗೂ ಕಾಯಬೇಕಿದೆ.
Vijay Hazare Trophy: ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್, ಕರ್ನಾಟಕಕ್ಕೆ ಸತತ 4ನೇ ಜಯ
ಕೊಹ್ಲಿಯ ಈ ನಿರ್ಧಾರದ ಹಿಂದಿನ ಕಾರಣವೇನು ಗೊತ್ತಾ..?
ಒನ್ಡೇ ಮತ್ತು T20ಯಲ್ಲಿ ಕೊಹ್ಲಿ ತಮ್ಮ ಹಳೆಯ ಖದರ್ಗೆ ಮರಳಿದ್ದಾರೆ. ಕಳೆದೆರೆಡು ವರ್ಷಗಳಿಂದ ಅದ್ಭುತ ಪ್ರದರ್ಶನ ನೀಡ್ತಿದ್ದಾರೆ. ಎರಡೂ ಫಾರ್ಮ್ಯಾಟ್ ಸೇರಿ ಒಟ್ಟು 7 ಶತಕ ಸಿಡಿಸಿದ್ದಾರೆ. T20 ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರಿಸಿದ್ದ ವಿರಾಟ್, ಏಕದಿನ ವಿಶ್ವಕಪ್ ಸಮರದಲ್ಲೂ ವಿರಾಟರೂಪ ತೋರಿದ್ರು. 11 ಪಂದ್ಯಗಳಿಂದ 6 ಅರ್ಧಶತಕ 3 ಶತಕ ಸಹಿತ 765 ರನ್ ಕಲೆಹಾಕಿದ್ರು. ಆ ಮೂಲಕ ಪ್ಲೇಯರ್ ಆಫ್ ದಿ ಟೂರ್ನ ಮೆಂಟ್ ಪ್ರಶಸ್ತಿ ಮುಡಿಗೇರಿಸಿಕೊಂಡ್ರು.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡ ಆಯ್ಕೆ ಇಂದು; ರೋಹಿತ್ ಶರ್ಮಾ ಲಭ್ಯತೆ ಅನುಮಾನ?
ಟೆಸ್ಟ್ನಲ್ಲೂ ಹಳೆಯ ಖದರ್ಗೆ ಮರಳೋ ಪ್ಲಾನ್..!
ವೈಟ್ಬಾಲ್ ಕ್ರಿಕೆಟ್ನಲ್ಲಿ ಕೊಹ್ಲಿ ಅಬ್ಬರಿಸಿ ಬೊಬ್ಬರಿಯುತ್ತಿದ್ದಾರೆ. ಆದ್ರೆ, ಟೆಸ್ಟ್ ಕ್ರಿಕೆಟ್ನಲ್ಲಿ ಮಾತ್ರ ಅವ್ರ ಪ್ರದರ್ಶನ ಹೇಳಿಕೊಳ್ಳುವಂತಿಲ್ಲ. ವರ್ಷದಿಂದ ವರ್ಷಕ್ಕೆ ಅವ್ರ ಬ್ಯಾಟಿಂಗ್ ಸರಾಸರಿ ಕುಸಿಯುತ್ತಿದೆ. ಈಗಾಗ್ಲೇ 50ರ ಸರಾಸರಿ ಹೊಂದಿರೋ ಬ್ಯಾಟ್ಸ್ಮನ್ಗಳ ಕ್ಲಬ್ನಿಂದ ಹೊರಬಿದ್ದಿದ್ದಾರೆ. ವರ್ಲ್ಡ್ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಮಿಂಚಲು ಕೊಹ್ಲಿ ಒಂದೇ ಒಂದು ಶತಕ ಸಿಡಿಸಿಲ್ಲ. ಈ ಎಲ್ಲಾ ಕಾರಣಗಳಿಂದ ತಮ್ಮ ನೆಚ್ಚಿನ ಫಾಮ್ಯಾಟ್ ಮೇಲೆ ಹೆಚ್ಚು ಫೋಕಸ್ ಮಾಡಲು ಡಿಸೈಡ್ ಮಾಡಿದ್ದಾರೆ.
ಅದೇನೆ ಇರಲಿ, ವೈಟ್ಬಾಲ್ ಕ್ರಿಕೆಟ್ನಲ್ಲೂ ಕೊಹ್ಲಿ ಮೊದಲಿನಂತೆ ಅಬ್ಬರಿಸಲಿ. 50+ ಸರಾಸರಿ ಬ್ಯಾಟ್ಸ್ಮನ್ಗಳ ಪಟ್ಟಿಗೆ ಎಂಟ್ರಿ ನೀಡಲಿ. ಭಾರತಕ್ಕೆ WTC ಗೆದ್ದುಕೊಡಲಿ ಅನ್ನೋದೆ ಅಭಿಮಾನಿಗಳ ಆಶಯ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್