ಹಿಸಾರ್(ಫೆ.16)‌: ಭಾರತ ತಂಡದ ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಬಗ್ಗೆ ಮಾತನಾಡುವಾಗ ಜಾತಿ ನಿಂದನೆ ಮಾಡಿದ್ದ ಆರೋಪದಡಿ ಭಾರತದ ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್‌ ವಿರುದ್ಧ ಹರಾರ‍ಯಣದ ಹನ್ಸಿನಲ್ಲಿ ಪ್ರಕರಣ ದಾಖಲಾಗಿದೆ. 

ಕಳೆದ ವರ್ಷ ಇನ್‌ಸ್ಟಾಗ್ರಾಂನಲ್ಲಿ ಕ್ರಿಕೆಟಿಗ ರೋಹಿತ್‌ ಶರ್ಮಾ ಜೊತೆ ಮಾತನಾಡುವ ವೇಳೆ ಚಹಲ್‌ ಬಗ್ಗೆ ಯುವರಾಜ್‌ ಲಘುವಾಗಿ ಮಾತನಾಡಿದ್ದರು. ಇದು ದಲಿತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದ್ದು, ವಕೀಲ ರಜತ್‌ ಕಲ್ಸನ್‌ ಎಂಬುವವರು ಹನ್ಸಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು ಎಫ್‌ಐಆರ್‌ ದಾಖಲಾಗಿದೆ.

ಯುವರಾಜ್ ಸಿಂಗ್ ಹೆಂಡತಿ ಹೇಗಾಗಿದ್ದಾರೆ ನೋಡಿ, ಗುರುತೇ ಸಿಗೋಲ್ಲ!

ರಜತ್‌ ಕಲ್ಸನ್‌ ಎಂಬಾತ ಕಳೆದ ವರ್ಷದ ಜೂನ್‌ 02ರಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್‌ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಾಗಿ ಬರೋಬ್ಬರಿ 8 ತಿಂಗಳ ಬಳಿಕ ಯುವಿ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

IPL 2021: ಕಿಂಗ್ಸ್‌ ಇಲೆವನ್ ಪಂಜಾಬ್‌ ತಂಡದ ಹೆಸರು ಬದಲು..!

ಇದೀಗ ಪೊಲೀಸರು ಐಪಿಸಿ ಸೆಕ್ಷನ್‌ 153, 153A, 295, 505 ಹಾಗೂ 3(1)(U) ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಯುವಿ ಮೇಲೆ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಕುರಿತಂತೆ ಯುವರಾಜ್‌ ಸಿಂಗ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.