ವಿರಾಟ್ ಕೊಹ್ಲಿ to ಕೆಎಲ್ ರಾಹುಲ್, ಭಾರತೀಯ ಕ್ರಿಕೆಟಿಗರಲ್ಲಿದೆ ಅತೀ ದುಬಾರಿ ಕಾರು
ವಿರಾಟ್ ಕೊಹ್ಲಿ to ಕೆಎಲ್ ರಾಹುಲ್, ಭಾರತೀಯ ಕ್ರಿಕೆಟಿಗರಲ್ಲಿದೆ ಅತೀ ದುಬಾರಿ ಕಾರು, ಕೋಟಿ ಕೋಟಿ ರೂಪಾಯಿ ಮೌಲ್ಯದ ಒಂದಲ್ಲ ಹಲವು ಕಾರುಗಳ ಮಾಲೀಕರಾಗಿದ್ದಾರೆ. ಕ್ರಿಕೆಟಿಗರ ರೋಲ್ಸ್ ರೋಯ್ಸ್, ಬೆಂಟ್ಲಿ ಕಾಂಟಿನೆಂಟಲ್ ಸೇರಿದಂತೆ ದುಬಾರಿ ಕಾರುಗಳ ಲಿಸ್ಟ್.

ಶ್ರೀಮಂತರ ಕ್ರಿಕೆಟಿಗರು
ಕ್ರಿಕೆಟ್ ಜಗತ್ತಿನಲ್ಲಿ ಬಿಸಿಸಿಐ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ. ಇಷ್ಟೇ ಅಲ್ಲ ಭಾರತೀಯ ಕ್ರಿಕೆಟಿಗರು ವಿಶ್ವದ ಶ್ರೀಮಂತ ಕ್ರಿಕೆಟಿಗರು. ಪಂದ್ಯದ ಸಂಭಾವನೆ, ಸೌಲಭ್ಯಗಳು ಇತರ ಯಾವುದೇ ದೇಶದ ಕ್ರಿಕೆಟಿಗರಿಗೆ ಹೋಲಿಸಿದರೆ ಭಾರತದಲ್ಲೇ ಹೆಚ್ಚು. ಭಾರತೀಯ ಕ್ರಿಕೆಟಿಗರು ಕೇವಲ ಕ್ರಿಕೆಟ್‌ನಿಂದ ಮಾತ್ರವಲ್ಲ ಹಲವು ಮೂಲಗಳಿಂದ ಆದಾಯಗಳಿಸುತ್ತಿದ್ದಾರೆ. ಇದರ ಜೊತೆಗೆ ಲಕ್ಷುರಿ ಲೈಫ್‌ಸ್ಟೈಲ್ ಹೊಂದಿದ್ದಾರೆ.ಇಷ್ಟೇ ಅಲ್ಲ ದುಬಾರಿ ಕಾರುಗಳು ಮಾಲೀಕರಾಗಿದ್ದಾರೆ.
ಬೆಂಟ್ಲಿ ಬೆಂಟೆಯಾಗ್ ಖರೀದಿಸಿದ ಕೊಹ್ಲಿ
ವಿರಾಟ್ ಕೊಹ್ಲಿಬಳಿ ಆಡಿಯ ಹಲವು ಸೀರಿಸ್ ಕಾರುಗಳಿವೆ. ಭಾರತದ ಆಡಿ ರಾಯಾಭಾರಿಯಾಗಿರುವ ವಿರಾಟ್ ಕೊಹ್ಲಿಇದೀಗ 4.09 ಕೋಟಿ ರೂಪಾಯಿ ಮೌಲ್ಯದ ಬೆಂಟ್ಲಿ ಬೆಂಟೆಯಾಗ್ ಜಿಟಿ ವರ್ಶನ್ ಕಾರು ಖರೀದಿಸಿದ್ದರೆ. ಮುಕೇಶ್ ಅಂಬಾನಿ ಕುಟುಂಬ ಸೇರಿದಂತೆ ಹಲವು ಶ್ರೀಮಂತರು ಈ ಕಾರು ಬಳಸುತ್ತಿದ್ದಾರೆ. ಇದೀಗ ಕೊಹ್ಲಿ ಕೂಡ ಈ ಸಾಲಿಗೆ ಸೇರಿಕೊಂಡಿದ್ದಾರೆ.
ಲ್ಯಾಂಬೋರ್ಗಿನಿ ಉರುಸ್ ಮಾಲೀಕ ರೋಹಿತ್ ಶರ್ಮಾ
ರೋಹಿತ್ ಶರ್ಮಾ ಬಳಿ ರೇಂಜ್ ರೋವರ್, ಲ್ಯಾಂಡ್ ರೋವರ್ ಸೇರಿದಂತೆ ಹಲವು ದುಬಾರಿ ಕಾರುಗಳಿವೆ. ಬೆಂಜ್ ಸೇರಿದಂತೆ ಇತರ ಕಾರುಗಳಲ್ಲಿ ರೋಹಿತ್ ಶರ್ಮಾ ಕಾಣಿಸಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ರೋಹಿತ್ ಶರ್ಮಾ ಹೆಚ್ಚಾಗಿ ಲ್ಯಾಂಬೋರ್ಗಿನಿ ಉರುಸ್ ಕಾರು ಬಳಸುತ್ತಿದ್ದಾರೆ. ಇದರ ಬೆಲೆ 4.86 ಕೋಟಿ ರೂಪಾಯಿ.
ರೋಲ್ಸ್ ರಾಯ್ಸ್ ರೈಥ್ ಮಾಲೀಕ ಜಡೇಜಾ
ರವೀಂದ್ರ ಜಡೇಜಾ ಶ್ರೀಮಂತ ಕ್ರಿಕೆಟಿಗ. ರಜಪೂತ ಸಮುದಾಯದ ರವೀಂದ್ರ ಜಡೇಜಾ ಕತ್ತಿವರಸೆ, ಕುದುರೆ ಸವಾರಿ ಸೇರಿದಂತೆ ಸಮರ ಕಲೆಗಳಲ್ಲೂ ಪ್ರವೀಣರಾಗಿದ್ದಾರೆ. ರವೀಂದ್ರ ಜಡೇಜಾ ಬಳಿ ಹಲವು ಐಷಾರಾಮಿ ಕಾರುಗಳಿವೆ. ಈ ಪೈಕಿ ರೋಲ್ಸ್ ರಾಯ್ಲ್ ರೈಥ್ ಕಾರು 5.74 ಕೋಟಿ ರೂಪಾಯಿ ಮೌಲ್ಯದ್ದಾಗಿದೆ.
ಶ್ರೇಯಸ್ ಅಯ್ಯರ್ ಬಳಿ ಇದೆ ಹುರಕಾನ್
ಶ್ರೇಯಸ್ ಅಯ್ಯರ್ ಇಂಜುರಿ ಸಮಸ್ಯೆಯಿಂದ ತಂಡದದಿಂದ ಹೊರಗಿದ್ದಾರೆ. ಆದರೆ ಶ್ರೇಯಸ್ ಅಯ್ಯರ್ ಬಳಿ ದುಬಾರಿ ಲ್ಯಾಂಬೋರ್ಗಿನಿ ಹುರಾಕನ್ ಇವೋ ಕಾರು ಹೊಂದಿದ್ದಾರೆ. ಇದರ ಬೆಲೆ 4.29 ಕೋಟಿ ರೂಪಾಯಿ. ಇನ್ನು ರೇಂಜ್ ರೋವರ್ ಸೇರಿದಂತೆ ಇತರ ಕಾರುಗಳನ್ನು ಅಯ್ಯರ್ ಬಳಸುತ್ತಾರೆ.
ಕೆಎಲ್ ರಾಹುಲ್ ಬಳಿ ಇದೆ ಆ್ಯಟನ್ ಮಾರ್ಟಿನ್
ಕನ್ನಡಿಗ ಕೆಎಲ್ ರಾಹುಲ್ ಟೀಂ ಇಂಡಿಯಾದ ಪ್ರಮುಖ ಆಟಗಾರ. ಕೆಎಲ್ ರಾಹುಲ್ ಬಳಿ ಇರುವ ಅತೀ ದುಬಾರಿ ಕಾರು ಎಂದರೆ ಆಸ್ಟನ್ ಮಾರ್ಟಿನ್ ಡಿ11. ಇದರ ಬೆಲೆ 3.58 ಕೋಟಿ ರೂಪಾಯಿ.
ಜಾಗ್ವಾರ್ ಎಫ್ ಟೈಮ್ ಮಾಲೀಕ ಶಮಿ
ಮೊಹಮ್ಮದ್ ಶಮಿ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಗಿಟ್ಟಿಸಿಕೊಳ್ಳಲು ಒಂದೆಡೆ ಇಂಜುರಿ, ಮತ್ತೊಂಡೆದೆ ಹಲವು ಅಡೆತಡೆಗಳು ಎದುರಾಗುತ್ತಿದೆ. ಆದರೆ ಮೊಹಮ್ಮದ್ ಶಮಿ ಬಳಸುವ ಅತೀ ದುಬಾರಿ ಕಾರು ಜಾಗ್ವಾರ್ ಎಫ್ ಟೈಪ್ ಇದರ ಬೆಲೆ 2.82 ಕೋಟಿ ರೂಪಾಯಿ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

