ಮುಂಬೈ(ನ.13): ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್‌ಗೆ ಹಲವು ಬಾರಿ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದರೂ ಖಾಯಂ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ದೇಸಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ದಿನೇಶ್ ಕಾರ್ತಿಕ್‌ಗೆ ಮತ್ತೊಂದು ಅವಕಾಶ ನೀಡಬೇಕು ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಕಾರಣ ಟಿ20ಯಲ್ಲಿ ರಿಷಭ್ ಪಂತ್ ಕಳಪೆ ಪ್ರದರ್ಶನ.

ಇದನ್ನೂ ಓದಿ: ನಿರ್ಣಾಯಕ ಟಿ20: ಪಂತ್ ಆಯ್ಕೆಗೆ ಫ್ಯಾನ್ಸ್ ಗರಂ!

ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾದಿಂದ ಅವಕಾಶ ವಂಚಿತರಾದ  ದಿನೇಶ್ ಕಾರ್ತಿಕ್, ವಿಜಯ್ ಹಜಾರೆ ಟೂರ್ನಿಯಲ್ಲಿ ಅಬ್ಬರಿಸಿದ್ದಾರೆ. ವಿಜಯ್ ಹಜಾರೆ ಟೂರ್ನಿಯಲ್ಲಿ ಕಾರ್ತಿಕ್  59.71 ಸರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ. ಇನ್ನು ಕಾರ್ತಿಕ್ ಸ್ಟ್ರೈಕ್ ರೇಟ್ 121.15. ಕಾರ್ತಿಕ್ ಅದ್ಬುತ ಪ್ರದರ್ಶನದಿಂದ ತಮಿಳುನಾಡು ವಿಜಯ್ ಹಜಾರೆ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತು. ಆದರೆ ಕರ್ನಾಟಕ ವಿರುದ್ದ ಮುಗ್ಗರಿಸಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತು. ದೇಸಿ ಟಿ20 ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ಹಾಗೂ ಕೀಪಿಂಗ್‌ನಲ್ಲೂ ಅನುಭವಿಯಾಗಿರವು ಕಾರ್ತಿಕ್‌ ಟೀಂ ಇಂಡಿಯಾ ಟಿ20 ತಂಡದಲ್ಲಿ ಸ್ಥಾನ ಪಡೆಯಲು ಅರ್ಹ ಅನ್ನೋ ಅಭ್ರಿಪ್ರಾಯಗಳು ಕೇಳಿ ಬರುತ್ತಿದೆ.

ಇದನ್ನೂ ಓದಿ: ಸ್ಟಂಪಿಂಗ್ ವೇಳೆ ಪಂತ್ ಎಡವಟ್ಟು; ವಿಡಿಯೋ ವೈರಲ್

ರಿಷಬ್ ಪಂತ್‌ಗೆ ಸಾಕಷ್ಟು ಅವಾಕಾಶಗಳು ಸಿಕ್ಕದರೂ ಸರಿಯಾಗಿ ಉಪಯೋಗಿಸಿಕೊಂಡಿಲ್ಲ. ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲೂ ಪಂತ್ ಆಟ ಅಷ್ಟಕಷ್ಟೆ. ಯಾವ ಹಂತದಲ್ಲೂ ತಂಡಕ್ಕೆ ನೆರವಾಗಲಿಲ್ಲ. ಎಂ.ಎಸ್.ಧೋನಿ ಸ್ಥಾನ ತುಂಬಬಲಲ್ಲ ಆಟಗಾರ ಅನ್ನೋ ಹಣೆ ಪಟ್ಟಿಯೊಂದಿಗೆ  ಪಂತ್ ತಂಡಕ್ಕೆ ಆಗಮಿಸಿದರೂ ಇದೀಗ ಟೈಟಲ್ ಬದಲಾಗಿದೆ. 

ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ಪಂದ್ಯವನ್ನು ಫಿನೀಶ್ ಮಾಡೋ ಜವಾಬ್ದಾರಿ ಹಾಗೂ ವಿಕೆಟ್ ಕೀಪಿಂಗ್‌ನಲ್ಲಿ ಹೆಚ್ಚು ತಪ್ಪುಗಳನ್ನು ಮಾಡದ ಕ್ರಿಕೆಟಿಗನ ಅವಶ್ಯಕತೆ ಟೀಂ ಇಂಡಿಯಾಗಿದೆ. ಟಿ20 ಮಾದರಿಯಲ್ಲಿ ದಿನೇಶ್ ಕಾರ್ತಿಕ್ ಈ ಜವಾಬ್ದಾರಿ ನಿಭಾಯಿಸಲಿದ್ದಾರೆ ಅನ್ನೋದು ಕ್ರಿಕೆಟ್ ಪಂಡಿತರ ಮಾತು.

ಬಾಂಗ್ಲಾದೇಶ ವಿರುದ್ಧದ ನಿಧಾಸ್ ಟ್ರೋಫಿಯಲ್ಲಿ ದಿನೇಶ್ ಕಾರ್ತಿಕ್ ಅಂತಿಮ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಭಾರತಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟಿದ್ದರು. ಪಂತ್ ಇದುವರೆಗೆ ಚುಟುಕು ಮಾದರಿಯಲ್ಲಿ ಹೇಳಿಕೊಳ್ಳೋ ಪ್ರದರ್ಶನ ನೀಡಿಲ್ಲ. ಇತ್ತ ಸಯ್ಯದ್ ಮುಷ್ತಾಕ್ ಆಲಿ ಟಿ20 ಟೂರ್ನಿ ಆಡುತ್ತಿರುವ ಕಾರ್ತಿಕ್, ಕಳೆದ ಮೂರು ಪಂದ್ಯಗಳಲ್ಲಿ  61, 48 ಹಾಗೂ 33  ರನ್ ಸಿಡಿಸಿ ಗಮನಸೆಳೆದಿದ್ದಾರೆ. 

ದೇಸಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ದಿನೇಶ್ ಕಾರ್ತಿಕ್ ಮತ್ತೆ ಟೀಂ ಇಂಡಿಯಾ ಕದ ತಟ್ಟಿದ್ದಾರೆ. ರಿಷಬ್ ಪಂತ್ ತಂಡದಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ಹೀಗಾಗಿ 2020ರ ಟಿ20 ವಿಶ್ವಕಪ್ ಟೂರ್ನಿ ವೇಳೆ ಸೂಕ್ತ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಯ್ಕೆ ಮಾಡಬೇಕಾದ ಜವಾಬ್ದಾರಿ ಆಯ್ಕೆ ಸಮಿತಿಗಿದೆ.