ಹ್ಯಾಮಿಲ್ಟನ್(ಫೆ.06): ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದೆ. 347 ರನ್ ಸಿಡಿಸಿ ಡಿಫೆಂಡ್ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಕಳಪೆ ಬೌಲಿಂಗ್ ಕೂಡ ಸೋಲಿಗೆ ಪ್ರಮುಖ ಕಾರಣವಾಯಿತು. ಅದರಲ್ಲೂ ಪರಿಣಾಮಕಾರಿ ನವದೀಪ್ ಸೈನಿ ತಂಡದಲ್ಲಿದ್ದರೂ, ದುಬಾರಿ ಶಾರ್ದೂಲ್ ಠಾಕೂರ್‌ಗೆ ಸ್ಥಾನ ನೀಡಿರುವುದು ಇದೀಗ ವಿವಾದಕ್ಕೆ ಗುರಿಯಾಗಿದೆ.

ಇದನ್ನೂ ಓದಿ: ಒಂದು ಸೋಲು, ಹಲವು ಅಪಖ್ಯಾತಿಗೆ ಗುರಿಯಾದ ಟೀಂ ಇಂಡಿಯಾ!

ಶಾರ್ದೂಲ್ ಠಾಕೂರ್ 1ನೇ ಏಕದಿನ ಪಂದ್ಯದಲ್ಲಿ 9 ಓವರ್ ಬೌಲಿಂಗ್ ಮಾಡಿದ ಶಾರ್ದೂಲ್ ಠಾಕೂರ್ ಬರೋಬ್ಬರಿ 80 ರನ್ ನೀಡಿದ್ದಾರೆ. 40ನೇ ಓವರ್‌ನಲ್ಲಿ 22 ರನ್ ನೀಡೋ ಮೂಲಕ ನ್ಯೂಜಿಲೆಂಡ್ ಚೇಸಿಂಗ್ ಸುಲಭ ಮಾಡಿಕೊಟ್ಟರು. 

ಇದನ್ನೂ ಓದಿ: ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾಗೆ ಬಿಗ್ ಶಾಕ್; ಶೇ.80 ರಷ್ಟು ಸಂಭಾವನೆ ಕಟ್!

ವಿಶ್ವದ ಅತ್ಯುತ್ತಮ ಬೌಲಿಂಗ್ ಆಟಾಕ್ ಹೊಂದಿರುವ ಟೀಂ ಇಂಡಿಯಾ 347 ರನ್ ಡಿಫೆಂಡ್ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಅನ್ನೋದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ತಂಡದಲ್ಲಿ ನವದೀರ್ ಸೈನಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದರೂ, ಅವಕಾಶ ನೀಡುತ್ತಿಲ್ಲ. ಪ್ರತಿ ಪಂದ್ಯದಲ್ಲಿ ದುಬಾರಿಯಾಗುತ್ತಿರುವ ಠಾಕೂರ್‌ಗೆ ಸ್ಥಾನ ನೀಡುತ್ತಿರುವುದು ಯಾಕೆ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.