ಹ್ಯಾಮಿಲ್ಟನ್(ಫೆ.05): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟಿ20 ಸರಣಿ ಟೀಂ ಇಂಡಿಯಾ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿತ್ತು. ಆದರೆ ಏಕದಿನಯ ಮೊದಲ ಪಂದ್ಯದ ಸೋಲು ತೀವ್ರ ನಿರಾಸೆಗೆ ಕಾರಣವಾಗಿದೆ. ಈ ಒಂದು ಸೋಲು ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದ ಟೀಂ ಇಂಡಿಯಾಗೆ ಆಘಾತ ನೀಡಿದೆ.

ಇದನ್ನೂ ಓದಿ:  ರಾಸ್ ಟೇಲರ್ ಶತಕ: ಟೀಂ ಇಂಡಿಯಾಗೆ ಸೋಲಿನ ಆಘಾತ..!

ಈ ಗೆಲುವಿನೊಂದಿಗೆ ನ್ಯೂಜಿಲೆಂಜ್ ಚೇಸಿಂಗ್ ದಾಖಲೆ ಉತ್ತಮ ಪಡಿಸಿಕೊಂಡಿತು. 2007ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್ 347 ರನ್ ಚೇಸ್ ಮಾಡಿ ಗೆಲುವು ಸಾಧಿಸಿತ್ತು. ಇದು ಇದುವರೆಗಿನ ನ್ಯೂಜಿಲೆಂಜ್ ಗರಿಷ್ಠ ಚೇಸಿಂಗ್ ಆಗಿತ್ತು. ಇದೀಗ ಈ ದಾಖಲೆಯನ್ನು ಹ್ಯಾಮಿಲ್ಟನ್ ಪಂದ್ಯದೊಂದಿಗೆ ಉತ್ತಮ ಪಡಿಸಿಕೊಂಡಿತು.

ಇದನ್ನೂ ಓದಿ:  'ಕಾಶ್ಮೀರ್ ಬನೇಗಾ ಪಾಕಿಸ್ತಾನ್' ಇಂಡೋ-ಪಾಕ್ ಪಂದ್ಯದ ವೇಳೆ ಏನಾಯ್ತು?

ಏಕದಿನದಲ್ಲಿ ನ್ಯೂಜಿಲೆಂಡ್ ಗರಿಷ್ಠ ಯಶಸ್ವಿ ಚೇಸ್
348 v ಭಾರತ, ಹ್ಯಾಮಿಲ್ಟನ್, 2020*
347 v ಆಸ್ಟ್ರೇಲಿಯಾ, ಹ್ಯಾಮಿಲ್ಟನ್, 2007
337 v ಆಸ್ಟ್ರೇಲಿಯಾ, ಆಕ್ಲೆಂಡ್, 2007
336 v ಇಂಗ್ಲೆಂಡ್, ಡನೆದಿನ್, 2018

348 ರನ್ ಚೇಸ್ ಮಾಡೋ ಮೂಲಕ ಭಾರತ ವಿರುದ್ಧ ಗರಿಷ್ಠ ರನ್ ಯಶಸ್ವಿಯಾಗಿ ಚೇಸ್ ಮಾಡಿದ 2ನೇ ತಂಡ ಅನ್ನೋ ಹೆಗ್ಗಳಿಕೆಗೂ ನ್ಯೂಜಿಲೆಂಡ್ ಪಾತ್ರವಾಯಿತು. ಮೊದಲ ಸ್ಥಾನ ಆಸ್ಟ್ರೇಲಿಯಾ ಪಾಲಾಗಿದೆ. ಮೊಹಾಲಿ ಪಂದ್ಯದಲ್ಲಿ ಆಸ್ಟ್ರೇಲಿಯಾ 359 ರನ್ ಚೇಸ್ ಮಾಡಿ ಗೆಲುವು ಸಾಧಿಸಿತ್ತು. 

ಭಾರತ ವಿರುದ್ಧ ಗರಿಷ್ಠ ಯಶಸ್ವಿ ಚೇಸ್; 
359 (ಆಸ್ಟ್ರೇಲಿಯಾ)ಮೊಹಾಲಿ, 2019
348 (ನ್ಯೂಜಿಲೆಂಡ್) ಹ್ಯಾಮಿಲ್ಟನ್,2020*
322 (ಪಾಕಿಸ್ತಾನ) ಮೊಹಾಲಿ, 2007
322(ಶ್ರೀಲಂಕ) ಓವಲ್, 2017

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬರೋಬ್ಬರಿ 21 ವೈಡ್ ಎಸೆತಗಳನ್ನು ಎಸೆದಿದೆ. ಇದೂ ಕೂಡ ಸೋಲಿಗೆ ಪ್ರಮುಖ ಕಾರಣವಾಯಿತು. 1999ರಲ್ಲಿ ಟೀಂ ಇಂಡಿಯಾ, ಕೀನ್ಯಾ ವಿರುದ್ಧ 31 ವೈಡ್ ಎಸೆತ ಎಸೆದು ಗರಿಷ್ಠ ಅಪಖ್ಯಾತಿಗೆ ಕಾರಣವಾಗಿದೆ.

ಭಾರತದ ಗರಿಷ್ಠ ವೈಡ್ ಎಸೆತ(ಏಕದಿನ)
31 v ಕೀನ್ಯಾ, ಬ್ರಿಸ್ಟೂಲ್, 1999
28 v ಇಂಗ್ಲೆಂಡ್, ಓವಲ್, 2004
26 v ಆಸ್ಟ್ರೇಲಿಯಾ, ಮುಂಬೈ, 2007
25 v ವಿಂಡೀಸ್, ಚೆನ್ನೈ,  2007
24 v ನ್ಯೂಜಿಲೆಂಡ್, ಹ್ಯಾಮಿಲ್ಟನ್, 2020*

ಭಾರತೀಯ ಸ್ಪಿನ್ನರ್ ಗರಿಷ್ಠ ರನ್ ನೀಡಿದ ಅಪಖ್ಯಾತಿಗೂ ಈ ಪಂದ್ಯ ಪಾತ್ರವಾಗಿದೆ. ಕುಲ್ದೀಪ್  ಯಾದವ್ 84 ರನ್ ನೀಡಿದ್ದರು. ಈ ಮೂಲಕ ಭಾರತದ 3ನೇ ದುಬಾರಿ ಸ್ಪಿನ್ನರ್ ಅನ್ನೋ ಅಪಖ್ಯಾತಿಗೆ ಗುರಿಯಾಗಿದ್ದಾರೆ.

ಭಾರತದ ದುಬಾರಿ ಸ್ಪಿನ್ನರ್
88 ಯಜುವೇಂದ್ರ ಚಹಾಲ್ v ಇಂಗ್ಲೆಂಡ್, 2019
85 ಪಿಯೂಷ್ ಚಾವ್ಲಾ v ಪಾಕಿಸ್ತಾನ, 2008
84 ಕುಲ್ದೀಪ್ ಯಾದವ್ v ನ್ಯೂಜಿಲೆಂಡ್, 2020