ಮುಂಬೈ(ಡಿ.12): ಟೀಂ ಇಂಡಿಯಾ ವಿಕೆಟ್ ಕೀಪರ್ ಎಂ.ಎಸ್.ಧೋನಿ ವಿದಾಯದ ಅಂಚಿನಲ್ಲಿದ್ದಾರೆ. ಹೀಗಾಗಿ ಧೋನಿ ಬಳಿಕ ಟೀಂ ಇಂಡಿಯಾಗೆ ಸಮರ್ಥ ವಿಕೆಟ್ ಕೀಪರ್ ಅವಶ್ಯಕತೆ ಇದೆ. ಇದಕ್ಕಾಗಿ ಆಯ್ಕೆ ಸಮಿತಿ, ನಾಯಕ ವಿರಾಟ್ ಕೊಹ್ಲಿ, ಕೋಚ್ ರವಿ ಶಾಸ್ತ್ರಿ ಸೇರಿದಂತೆ ಟೀಂ ಇಂಡಿಯಾ ದಿಗ್ಗಜರು ರಿಷಬ್ ಪಂತ್‌ಗಿಂತ ಉತ್ತಮ ಆಯ್ಕೆ ಇನ್ನೊಬ್ಬರಿಲ್ಲ ಎನ್ನತ್ತಿದ್ದಾರೆ. ಆದರೆ ಪಂತ್ ಮಾತ್ರ ಸುಧಾರಣೆಯಾಗುತ್ತಿಲ್ಲ. ಮುಂಬೈ ಪಂದ್ಯದಲ್ಲಿ ಪಂತ್ ಕಳಪೆಯಾಟ ಮುಂದುವರಿದಿದ್ದು, ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸಂಜು, ಸಂಜು ಎಂದು ಕೂಗಿದ ಫ್ಯಾನ್ಸ್; ಗರಂ ಆದ ವಿರಾಟ್ ಕೊಹ್ಲಿ!

ಪಂತ್ ಬದಲು ತಂಡಕ್ಕೆ ಆಯ್ಕೆಯಾಗಿರುವ ಪಂತ್‌ಗಿಂತ ಪ್ರತಿಭಾನ್ವಿತ ಸಂಜು ಸಾಮ್ಸನ್‌ಗೆ ಅವಕಾಶ ನೀಡಿ ಅನ್ನೋ ಕೂಗು ಕೇಳಿ ಬಂದಿತ್ತು. ಆದರೆ ಅವಕಾಶಕ್ಕಾಗಿ ಕಾದು ಕುಳಿತ ಸಂಜು ಸ್ಯಾಮ್ಸನ್‌ಗೆ ಒಂದು ಪಂದ್ಯದಲ್ಲೂ ಚಾನ್ಸ್ ಕೊಡಲೇ ಇಲ್ಲ. ಪಂತ್ ಇಂದಲ್ಲ ನಾಳೆ ಅಬ್ಬರಿಸುತ್ತಾರೆ. ಭವಿಷ್ಯದಲ್ಲಿ ಪಂತ್ ಬಿಟ್ಟರೆ ಇನ್ಯಾರೂ ಸ್ಟಾರ್‌ಗಳಿಲ್ಲ ಅನ್ನೋ ಮಟ್ಟಿಗೆ ಕ್ರಿಕೆಟ್ ದಿಗ್ಗಜರು ಪ್ರತಿಕ್ರಿಯೆ ನೀಡಿದರು. ಆದರೆ ವಿಂಡೀಸ್ ವಿರುದ್ದದ 3ನೇ ಟಿ20ಯಲ್ಲಿ ಪಂತ್ ಶೂನ್ಯ ಸುತ್ತಿದರು.

ಇದನ್ನೂ ಓದಿ: ಸ್ಯಾಮ್ಸನ್ ಬದಲು ಪಂತ್‌ಗೆ ಸ್ಥಾನ; ಟೀಂ ಆಯ್ಕೆಗೆ ಫ್ಯಾನ್ಸ್ ಗರಂ!

ವಿಂಡೀಸ್ ವಿರುದ್ದದ ಟಿ20 ಸರಣಿಯಲ್ಲಿ ಪಂತ್ ಕಳಪೆಯಾಟ ಮುಂದುವರಿದಿದೆ. ಇಷ್ಟಾದರೂ ಹಲವರಿಗೆ ಪಂತ್ ಸೂಪರ್ ಸ್ಟಾರ್. ಇದೀಗ ಪಂತ್ ವಿರುದ್ದ ಅಭಿಮಾನಿಗಳು ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 2035 ಆದರೂ ಪಂತ್ ಕಳಪೆಯಾಟ ಹೀಗೆ ಇರಲಿದೆ. ಇಷ್ಟೇ ಅಲ್ಲ ದಿಗ್ಗಜರೂ ಮಾತ್ರ ಪಂತ್ ಯುವ ಆಟಗಾರ, ಹೀಗಾಗಿ ಫಾರ್ಮ್‌ಗೆ ಬರಲು ಕೆಲ ಪಂದ್ಯಗಳು ಬೇಕಿದೆ ಎಂದು ಅಭಿಪ್ರಾಯ ಪಡಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಪಂತ್ ವಿರುದ್ಧ ಫ್ಯಾನ್ಸ್ ಆಕ್ರೋಶ ಇಲ್ಲಿದೆ.