ರಾಜ್‌ಕೋಟ್(ನ.05): ಟೀಂ ಇಂಡಿಯಾ ನಾಯಕ  ವಿರಾಟ್ ಕೊಹ್ಲಿ31ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟು ಹಬ್ಬ ಆಚರಿಸಿಕೊಂಡಿರುವ ಕೊಹ್ಲಿಗೆ  ಟೀಂ ಇಂಡಿಯಾದ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಶುಭಕೋರಿದ್ದಾರೆ. ತಂಡದ ಉಪನಾಯಕ ರೋಹಿತ್ ಶರ್ಮಾ ಕೂಡ ಕೊಹ್ಲಿಗೆ ಶುಭಕೋರಿದ್ದಾರೆ. ರೋಹಿತ್ ಬರ್ತ್ ಡೇ ವಿಶ್ ನೋಡಿದ ಅಭಿಮಾನಿಗಳು ಗೆಳೆತನ ಹೀಗೆ ಇರಲಿ ಎಂದು ಆಶಿಸಿದ್ದಾರೆ.

ಇದನ್ನೂ ಓದಿ: ಕೊಹ್ಲಿ ಹುಟ್ಟು ಹಬ್ಬ; ಶುಭಕೋರಿದ ಟೀಂ ಇಂಡಿಯಾ ಕ್ರಿಕೆಟರ್ಸ್

2019ರ ವಿಶ್ವಕಪ್ ಟೂರ್ನಿ ಬಳಿಕ ರೋಹಿತ್ ಹಾಗೂ ಕೊಹ್ಲಿ ನಡುವೆ ಮನಸ್ತಾಪವಾಗಿದೆ ಅನ್ನೋ ಮಾತುಗಳು ಕೇಳಬಂದಿತ್ತು. ಹೀಗಾಗಿ ಇದೀಗ ರೋಹಿತ್ ಶರ್ಮಾ ಬರ್ತ್ ಡೇ ವಿಶ್ ಮಹತ್ವ ಪಡೆದುಕೊಂಡಿದೆ. ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಪಂದ್ಯದ ಸೋಲಿನಿಂದ ನಿರಾಸೆಗೊಂಡಿರುವ ರೋಹಿತ್ ಶರ್ಮಾ, ಕೊಹ್ಲಿಗೆ ಶುಭಕೋರಲು ಮರೆಯಲಿಲ್ಲ.

 

ಇದನ್ನೂ ಓದಿ: ಕೊಹ್ಲಿಗೆ ಕೋಚ್ ರವಿ ಶಾಸ್ತ್ರಿ ವಿಶ್; ಮತ್ತೆ ಟ್ರೋಲ್ ಮಾಡಿದ ಫ್ಯಾನ್ಸ್!

ರೋಹಿತ್ ಶುಭಕೋರಿದ ಬೆನ್ನಲ್ಲೇ ಅಭಿಮಾನಿಗಳು ಪ್ರತಿಕ್ರಿಯೆಸಿದ್ದಾರೆ. ಇಬ್ಬರು ದಿಗ್ಗಜ ಕ್ರಿಕೆಟಿಗರು. ರೋಹಿತ್ ಹಾಗೂ ಕೊಹ್ಲಿ ನಡುವೆ ಯಾವುದೇ ಮನಸ್ತಾಪವಿಲ್ಲ ಅನ್ನೋದಕ್ಕೆ ಈ ಟ್ವೀಟ್ ಸಾಕ್ಷಿ ಎಂದು ಪ್ರತಿಕ್ರಿಯಿಸಿದ್ದಾರೆ.