ಸಿಎಸ್‌ಕೆ ಪರ ನಿಷ್ಠೆ, ಆರ್‌ಸಿಬಿ ವಿರುದ್ಧ ಕೆಂಡಕಾರುವ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಶುಭ ಹಾರೈಕ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆರ್‌ಸಿಬಿ ಟ್ರೋಫಿ ಗೆಲ್ಲಲಿ ಎಂದು ರಾಯುಡು ವಿಶ್ ಮಾಡಿದ ಬೆನ್ನಲ್ಲೇ ಅಭಿಮಾನಿಗಳು ಈ ಆಟ ಇಲ್ಲಿ ಬೇಡ ಎಂದಿದ್ದಾರೆ.
ಅಹಮ್ಮದಾಬಾದ್(ಜೂ.03) ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಫೈನಲ್ ಪಂದ್ಯ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಇನ್ನೇನಿದ್ದರು ಹೋರಾಟ. ಇದರ ನಡುವೆ ಚೆನ್ನೈ ಸೂಪರ್ ಕಿಂಗ್ಸ್ , ಎಂಎಸ್ ಧೋನಿಗೆ ಅತ್ಯಂತ ನಿಷ್ಠೆ ಹೊಂದಿರುವ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು, ಆರ್‌ಸಿಬಿ ವಿರುದ್ಧ ಸಿಕ್ಕ ಅವಕಾಶವನ್ನೆಲ್ಲಾ ಬಳಸಿಕೊಂಡು ಕೆಂಡಕಾರಿದ್ದಾರೆ. ಹಲವು ಬಾರಿ ಆರ್‌ಸಿಬಿ, ಬೆಂಗಳೂರು ಅಭಿಮಾನಿಗಳನ್ನು ವ್ಯಂಗ್ಯವಾಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಅಂಬಾಟಿ ರಾಯುಡು ಆರ್‌ಸಿಬಿ ಟ್ರೋಫಿ ಗೆಲ್ಲಲಿ ಎಂದು ಶುಭಹಾರೈಸಿದ್ದಾರೆ. ಆದರೆ ಅಭಿಮಾನಿಗಳು ಅಂಬಾಟಿ ರಾಯುಡುಗೆ ಮಂಗಳಾರತಿ ಮಾಡಿದ್ದಾರೆ.
ಅಂಬಾಟಿ ರಾಯುಡು ಟ್ವೀಟ್, ಅಭಿಮಾನಿಗಳು ಗರಂ
ಟ್ವೀಟ್ ಮಾಡಿರುವ ಅಂಬಾಟಿ ರಾಯುಡು, ದಕ್ಷಿಣ ಭಾರತದ ಮೂರು ನಗರಗಳ ಕ್ರಿಕೆಟ್ ವೈರತ್ವ ಉತ್ತಮ ಕ್ರಿಕೆಟ್‌ಗೆ ಸಾಕ್ಷಿಯಾಗಿದೆ. ಆಧರೆ ಈ ಬಾರಿ ಗ್ರೇಟ್ ಸಿಟಿ ಬೆಂಗಳೂರು ಮೊದಲ ಐಪಿಎಲ್ ಟ್ರೋಫಿ ಗೆಲ್ಲಬೇಕು. ಬೆಂಗಳೂರು ಈ ಪ್ರಶಸ್ತಿಗೆ ಅರ್ಹವಾಗಿದೆ. ಗೋ ಆರ್‌ಸಿಬಿ, ಮನೆಗೆ ತನ್ನಿ ಎಂದು ಅಂಬಾಟಿ ರಾಯುಡು ಟ್ವೀಟ್ ಮಾಡಿದ್ದಾರೆ. ಆದರೆ ಅಂಬಾಟಿ ರಾಯುಡು ಟ್ವೀಟ್ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಪ್ರಮುಖವಾಗಿ ಅಂಬಾಟಿ ರಾಯುಡು ತಮ್ಮ ನಿಲುವು ಬದಲಿಸಿ ಟ್ವೀಟ್ ಮಾಡಿರುವುದು ಅನುಮಾನಕ್ಕೂ ಕಾರಣಾಗಿದೆ. ರಾಯುಡು ಇದೀಗ ಆರ್‌ಸಿಬಿಗೆ ವಿಶ್ ಮಾಡಲು ಕಾರಣ ಒಂದಿದೆ. ಈ ಆಟ ನಮ್ಮ ಬಳಿ ಬೇಡ ಎಂದು ಅಭಿಮಾನಿಗಳು ಎಚ್ಚರಿಸಿದ್ದಾರೆ.
ರಾಯುಡು ಬೆಂಬಲಿಸಿದ ತಂಡಗಳಿಗೆ ಸೋಲು
ಅಂಬಾಟಿ ರಾಯುಡು ಈ ಆವೃತ್ತಿಯಲ್ಲಿ ಬೆಂಬಲಿಸಿದ ತಂಡಗಳೆಲ್ಲಾ ಸೋಲು ಕಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹೊಗಳಿ ಅಟ್ಟಕ್ಕೇರಿಸಿದ್ದರು. ಆದರೆ ಸಿಎಸ್‌ಕೆ ಹೇಳ ಹೆಸರಿಲ್ಲದೆ ಟೂರ್ನಿಯಿಂದ ಹೊರಬಿದ್ದಿತ್ತು. ಇನ್ನು ಮುಂಬೈ ಇಂಡಿಯನ್ಸ್ ತಂಡವನ್ನು ಅಂಬಟಿ ರಾಯುಡು ಬೆಂಬಲಿಸಿದ್ದರು. ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ರಾಯುಡು ಬೆಂಬಲಿಸಿದ್ದರು. ಈ ಎಲ್ಲಾ ತಂಡಗಳು ಮನಗೆ ತೆರಳಿದೆ. ಹೀಗಾಗಿ ಇದೀಗ ಅಂಬಾಟಿ ರಾಯುಡು ಆರ್‌ಸಿಬಿ ಸೋಲಲಿ ಎಂದೇ ಶುಭ ಹಾರೈಸಿದ್ದಾರೆ. ಈ ಜಿಂಕ್ಸ್ ಆಟ ಇಲ್ಲಿ ಬೇಡ ಎಂದು ಎಚ್ಚರಿಸಿದ್ದಾರೆ.
ಅಂಬಾಟಿ ರಾಯುಡು ಟ್ವೀಟ್‌ಗೆ ಹಲವು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಅಂಬಾಟಿ ರಾಯುಡುಗೆ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಗೆಲ್ಲಲಬೇಕು. ಆದರೆ ನೇರವಾಗಿ ಸಪೋರ್ಟ್ ಮಾಡಿದರೆ ಎಲ್ಲಿ ಸೋಲು ಕಾಣುತ್ತೆ ಅನ್ನೋ ಭಯ. ಹೀಗಾಗಿ ಈ ರೀತಿ ನಾಟಕ ಮಾಡಿದ್ದಾರೆ. ಯಾವ ತಂಡವನ್ನು ಬೆಂಬಲಿಸಿದ್ದರೂ ಆರ್‌ಸಿಬಿಗೆ ಸಪೋರ್ಟ್ ಮಾಡದ ಅಂಬಾಟಿ ರಾಯುಡು ಇದೀಗ ನಿಲುವು ಬದಲಿಸಿದ ಹಿಂದಿನ ಕಾರಣ ಇದೆ ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ಈ ರೀತಿಯ ಶುಭ ಹಾರೈಕೆ ನೀವೆ ಇಟ್ಕೊಳ್ಳಿ ಎಂದಿದ್ದಾರೆ.
ಫೈನಲ್ ಪಂದ್ಯಕ್ಕೆ ಆರ್‌ಸಿಬಿ ಪ್ಲೇಯಿಂಗ್ 11
ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್, ರಜತ್ ಪಾಟಿದಾರ್(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ರೋಮಾರಿಯಾ ಶೆಫರ್ಡ್, ಕ್ರುನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹೇಜಲ್‌ವುಡ್
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11
ಪ್ರಿಯಾಂಶ್ ಆರ್ಯ, ಜೋಶ್ ಇಂಗ್ಲಿಸ್, ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯ್ನಿಸ್, ಅಜಮ್ಮತುಲ್ಹಾ ಒಮ್ರಝೈ, ಕೈಲ್ ಜೇಮೈಸನ್, ವಿಜಯ್ ಕುಮಾರ್ ವೈಶಾಕ್, ಅರ್ಶದೀಪ್ ಸಿಂಗ್, ಯುಜುವೇಂದ್ರ ಚಹಾಲ್
