ಕೋಲ್ಕತಾ(ನ.24): ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಕೇವಲ ಎರಡೂವರೆ ದಿನಕ್ಕೆ ಮುಕ್ತಾಯಗೊಂಡಿದೆ. ಅದ್ಬುತ ಪ್ರದರ್ಶನ ಮುಂದವರಿಸಿದ ಟೀಂ ಇಂಡಿಯಾ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 46 ರನ್ ಗೆಲುವು ಸಾಧಿಸಿತು. ಈ ಮೂಲಕ 2-0 ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ.

ಇದನ್ನೂ ಓದಿ: ಇಶಾಂತ್-ಉಮೇಶ್ ಬಿರುಗಾಳಿ, ಪಿಂಕ್ ಬಾಲ್ ಟೆಸ್ಟ್ ಟೀಂ ಇಂಡಿಯಾ ಕೈವಶ

ಇದೇ ಮೊದಲ ಬಾರಿಗೆ ಆಯೋಜಿಸಿದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸೈನ್ಯ ಆಕ್ರಮಣಕಾರಿ ಆಟವಾಡೋ ಮೂಲಕ ಗೆಲುವಿನ ನಗೆ ಬೀರಿದೆ. ಭಾರತದ ಪ್ರದರ್ಶನಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.