T20 World Cup 1992ರಲ್ಲೂ ಆಗಿತ್ತು ಹೀಗೆ, ಈ ಬಾರಿ ಕಪ್ ಪಾಕಿಸ್ತಾನ ಕೈಗೆ ಎಂದ ಅಭಿಮಾನಿ!
1992ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಚಾಂಪಿಯನ್. 1992ರಲ್ಲಿ ಟೂರ್ನಿಯಲ್ಲಿ ಹೊರಬಂದ ಕೆಲ ಪಂದ್ಯಗಳ ಫಲಿತಾಂಶಕ್ಕೂ 2022ರ ಟಿ20 ವಿಶ್ವಕಪ್ ಟೂರ್ನಿಯಲ್ಲಿನ ಘಟನೆಗೆ ಹೋಲಿಕೆ ಇದೆ. ಹೀಗಾಗಿ ಈ ಬಾರಿ ಪಾಕಿಸ್ತಾನ ಟಿ20 ವಿಶ್ವಕಪ್ ಟೂರ್ನಿ ಗೆಲ್ಲಲಿದೆ ಎಂದಿದ್ದಾನೆ. ಪಾಕ್ ಅಭಿಮಾನಿ ನೀಡಿರುವ ಕಾರಣಗಳು ಇಲ್ಲಿವೆ.
ಸಿಡ್ನಿ(ನ.06): ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಪಂದ್ಯಗಳು ಅಂತ್ಯಗೊಂಡಿದೆ. ಇದೀಗ ಸೆಮಿಫೈನಲ್ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ನವೆಂಬರ್ 9 ರಂದು ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ಹೋರಾಟ ನಡೆಸಿದರೆ, ನವೆಂಬರ್ 10 ರಂದು ಭಾರತ ಹಾಗೂ ಇಂಗ್ಲೆಂಡ್ ಹೋರಾಟ ನಡೆಸಲಿದೆ. ಈಗಲೇ ಯಾರು ಚಾಂಪಿಯನ್ ಆಗ್ತಾರೆ ಅನ್ನೋ ಲೆಕ್ಕಾಚಾರಗಳು ಶುರುವಾಗಿದೆ. ಟೂರ್ನಿಯ ಆರಂಭದಿಂದ ಆಘಾತ ಅನುಭವಿಸುತ್ತಲೇ ಬಂದ ಪಾಕಿಸ್ತಾನ ಟೂರ್ನಿಯಿಂದ ಇನ್ನೇನು ಹೊರಬೀಳಬೇಕು ಅನ್ನುವಷ್ಟರಲ್ಲಿ ಅಚ್ಚರಿ ಎಂಬಂತೆ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಇದರ ನಡುವೆ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿ ಮೊಮಿನ್ ಸಾಕಿಬ್ ಹೊಸ ವಾದ ಮುಂದಿಟ್ಟಿದ್ದಾನೆ. ಈ ಬಾರಿ ಪಾಕಿಸ್ತಾನ ಚಾಂಪಿಯನ್ ಆಗಲಿದೆ ಎಂದಿದ್ದಾನೆ. ಇದಕ್ಕೆ ಕೆಲ ಕಾರಣಗಳನ್ನು ನೀಡಿದ್ದಾನೆ. ಈ ಕಾರಣಗಳು ಅಚ್ಚರಿ ತರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.
1992ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಟೂರ್ನಿಯನ್ನು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಆಯೋಜಿಸಿತ್ತು. 2022ರ ಟಿ20 ವಿಶ್ವಕಪ್ ಟೂರ್ನಿಯನ್ನು ಆಸ್ಟೇಲಿಯಾ ಆಯೋಜಿಸಿದೆ. ಇನ್ನು 1992ರ ವಿಶ್ವಕಪ್ ಟೂರ್ನಿಯಲ್ಲಿ ಆತಿಥ್ಯ ತಂಡ ಆಸ್ಟ್ರೇಲಿಯಾ ಲೀಗ್ ಹಂತದಿಂದಲೇ ಟೂರ್ನಿಯಿಂದ ಹೊರಬಿದ್ದಿತ್ತು. ಇದೀಗ 2022ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಆಸ್ಟ್ರೇಲಿಯಾ ಸೂಪರ್ 12 ಹಂತದಿಂದಲೇ ಹೊರಬಿದಿದ್ದೆ. 1992ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ, ಜಿಂಬಾಬ್ವೆ ವಿರುದ್ಧ ಮುಗ್ಗರಿಸಿತ್ತು. ಇದೀಗ ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ತಂಡ ಜಿಂಬಾಬ್ವೆ ವಿರುದ್ಧ ಮುಗ್ಗರಿಸಿದೆ. 1992ರಲ್ಲಿ ನಡೆದ ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಮುಗ್ಗರಿಸಿತ್ತು. ಇದೀಗ ಭಾರತ ವಿರುದ್ಧ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಸೋಲು ಕಂಡಿದೆ. ಹೀಗಾಗಿ 1992ರ ಇತಿಹಾಸ ಈ ಬಾರಿ ಮರುಕಳಿಸಲಿದೆ ಎಂದು ಮೊಮಿನ್ ಸಾಕಿಬ್ ಹೇಳಿದ್ದಾನೆ.
ಭಾರತ-ಪಾಕಿಸ್ತಾನ ಫೈನಲ್ ಮುಖಾಮುಖಿಗೆ ಇದೆ ಅವಕಾಶ, ಮರುಕಳಿಸುತ್ತಾ 2007ರ ಇತಿಹಾಸ!
ಭಾರತೀಯ ಅಭಿಮಾನಿಗಳು ಈ ಬಾರಿ ಟೀಂ ಇಂಡಿಯಾ ಗೆಲುವು ಸಾಧಿಸಲಿದೆ. 2007ರ ಟಿ20 ವಿಶ್ವಕಪ್ ಟೂರ್ನಿ ಇತಿಹಾಸ ಮರುಕಳಿಸಲಿದೆ ಎಂದಿದ್ದಾರೆ. 2007ರಲ್ಲಿ ಲೀಗ್ ಹಂತದಲ್ಲಿ ಭಾರತ ಹಾಗೂ ಪಾಕಿಸ್ತಾನ ಪಂದ್ಯ ಟೈನಲ್ಲಿ ಅಂತ್ಯಗೊಂಡಿತ್ತು. ಬಳಿಕ ನಡೆದ ಬಾಲ್ ಔಟ್‌ನಲ್ಲಿ ಭಾರತ ರೋಚಕ ಗೆಲುವು ದಾಖಲಿಸಿತ್ತು. ಈ ಬಾರಿ ಲೀಗ್ ಹಂತದಲ್ಲಿ ಭಾರತ ಕೊನೆಯ ಎಸೆತದಲ್ಲಿ ಗೆಲುವು ದಾಖಸಿದೆ. ಇದೀಗ ಭಾರತ ಹಾಗೂ ಪಾಕಿಸ್ತಾನ ಫೈನಲ್‌ನಲ್ಲಿ ಮುಖಾಮುಖಿಯಾಗುವ ಅವಕಾಶ ಪಡೆದಿದೆ. ಹೀಗಾಗಿ 2007ರಂತೆ ಭಾರತ ಟ್ರೋಫಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
T20 World cup ಜಿಂಬಾಬ್ವೆ ವಿರುದ್ಧ ಗೆಲುವು, ಮೊದಲ ಸ್ಥಾನಕ್ಕೇರಿದ ಭಾರತ!
ಬಾಂಗ್ಲಾ ಹೊರದಬ್ಬಿ ಪಾಕ್ ನಾಕೌಟ್‌ಗೆ
ಬದ್ಧವೈರಿ ಭಾರತ ಹಾಗೂ ಬಳಿಕ ಜಿಂಬಾಬ್ವೆ ವಿರುದ್ಧ ಆಘಾತಕಾರಿ ಸೋಲುಂಡರೂ ಬಳಿಕ ಪುಟಿದೆದ್ದ ಮಾಜಿ ಚಾಂಪಿಯನ್ ಪಾಕಿಸ್ತಾನ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಲು ಯಶಸ್ವಿಯಾಗಿದೆ. ಭಾನುವಾರ ನಿರ್ಣಾಯಕ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಪಾಕ್ 5 ವಿಕೆಟ್ ಜಯಗಳಿಸಿತು. ಇದರೊಂದಿಗೆ ಪಾಕ್ 6 ಅಂಕದೊಂದಿಗೆ ಗುಂಪು 2ರಲ್ಲಿ 2ನೇ ಸ್ಥಾನಕ್ಕೇರಿದರೆ, ಬಾಂಗ್ಲಾ 4 ಅಂಕದೊಂದಿಗೆ ಹೊರಬಿತ್ತು.