T20 World cup ಜಿಂಬಾಬ್ವೆ ವಿರುದ್ಧ ಗೆಲುವು, ಮೊದಲ ಸ್ಥಾನಕ್ಕೇರಿದ ಭಾರತ!

ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಎಲ್ಲಾ ಪಂದ್ಯಗಳು ಅಂತ್ಯಗೊಂಡಿದೆ. ಕೊನೆಯ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. 

T20 World cup 2022 all rounder performance help team India to beat Zimbabwe by 71 runs retain top spot in Table ckm

ಮೆಲ್ಬೊರ್ನ್(ನ.06):  ಜಿಂಬಾಬ್ವೆ ವಿರುದ್ಧದ ಟಿ20 ವಿಶ್ವಕಪ್ ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಭಾರತ 71 ರನ್ ಗೆಲುವು ದಾಖಲಿಸಿದೆ.  ಬೃಹತ್ ಗುರಿ ಬೆನ್ನಟ್ಟಿದ ಜಿಂಬಾಬ್ವೆ 115 ರನ್‌ಗೆ ಆಲೌಟ್ ಆಯಿತು. ಇದರೊಂದಿಗೆ ಟೀಂ ಇಂಡಿಯಾ ಎರಡನೇ ಗುಂಪಿನ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಇದೀಗ ನವೆಂಬರ್ 10 ರಂದು ನಡಯೆಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಹೋರಾಟ ನಡಸೆಲಿದೆ. ಇನ್ನು ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿದೆ. 

ಜಿಂಬಾಬ್ವೆ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ ದಿಟ್ಟ ಹೋರಾಟ ನೀಡಿದೆ. ಈ ಮೂಲಕ ಸೆಮಿಫೈಲ್ ಹೋರಾಟಕ್ಕೂ ಮುನ್ನ ಆತ್ಮಿವಿಶ್ವಾಸ ಹೆಚ್ಚಿಸಿಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 186 ರನ್ ಸಿಡಿಸಿತ್ತು. ಈ ಗುರಿ ಬೆನ್ನಟ್ಟಲು ಕಣಕ್ಕಿಳಿದ ಜಿಂಬಾಬ್ವೆ ಮೊದಲ ಎಸೆತದಲ್ಲೇ ಆಘಾತ ಅನುಭವಿಸಿತು. ಭುವನೇಶ್ವರ್ ಕುಮಾರ್ ಓವರ್‌ನ ಮೊದಲ ಎಸೆತದಲ್ಲಿ ವೆಸ್ಲೆ ಮಧಿವೆರೆ ವಿಕೆಟ್ ಪತನಗೊಂಡಿತು. ರೆಗಿಸ್ ಚೆಕಬ್ವಾ ಕೂಡ ಡಕೌಟ್ ಆದರು. ಜಿಂಬಾಬ್ವೆ 2 ರನ್‌ಗಳಿಸುವಷ್ಟರಲ್ಲೇ 2 ವಿಕೆಟ್ ಕಳೆದುಕೊಂಡಿತು. 

ಬಾಂಗ್ಲಾದೇಶಕ್ಕೆ ಸೋಲುಣಿಸಿ ಸೆಮೀಸ್‌ಗೆ ಲಗ್ಗೆಯಿಟ್ಟ ಪಾಕಿಸ್ತಾನ..!

ನಾಯಕ ಕ್ರೈಕ್ ಎರ್ವಿನ್ ಹಾಗೂ ಸೀನ್ ವಿಲಿಯಮ್ಸನ್ ಜೊತೆಯಾಟ ನೀಡುವ ಸೂಚನೆ ನೀಡಿದರು. ಆದರೆ ಸಾಧ್ಯವಾಗಲಿಲ್ಲ. ಸೀನ್ ವಿಲಿಯಮ್ಸನ್ 11 ರ್ ಸಿಡಿಸಿ ಔಟಾದರೆ, ಕ್ರೈವ್ ಎರ್ವಿನ್ 13 ರನ್ ಸಿಡಿಸಿ ಔಟಾದರು. ಟೋನಿ ಮುನ್ಯೋಂಗಾ 5 ರನ್ ಸಿಡಿಸಿ ನಿರ್ಗಮಿಸಿದರು. ಸಿಕಂದರ್ ರಾಜಾ ಹಾಗೂ ರ್ಯಾನ್ ಬರ್ಲ್ ಹೋರಾಟದಿಂದ ಜಿಂಬಾಬ್ವೆ ಚೇತರಿಸಿಕೊಂಡಿತು. ರ್ಯಾನ್ ಬರ್ಲ್ ಸ್ಫೋಟಕ ಬ್ಯಾಟಿಂಗ್ ಮೂಲಕ 22 ಎಸೆತದಲ್ಲಿ 35 ರನ್ ಕಾಣಿಕೆ ನೀಡಿದರು.

ವೆಲ್ಲಿಂಗ್ಟನ್ ಮಸಕಜ್ಡ, ರಿಚರ್ಡ್ ಎನ್‌ಗರವ ಅಬ್ಬರಿಸಲಿಲ್ಲ. ಹೋರಾಟ ನೀಡಿದ ಸಿಕಂದರ್ ರಾಜಾ 24 ಎಸೆತದಲ್ಲಿ 34 ರನ್ ಸಿಡಿಸಿ ಔಟಾದರು. ಇತ್ತ ಟೆಂಡಾಯಿ ಚತಾರ ವಿಕೆಟ್ ಪತನದೊಂದಿದೆ ಜಿಂಬಾಬ್ವೆ 17.2 ಓವರ್‌ಗಳಲ್ಲಿ 115 ರನ್‌ ಸಿಡಿಸಿ ಆಲೌಟ್ ಆಯಿತು. ಈ ಮೂಲಕ ಟೀಂ ಇಂಡಿಯಾ 71 ರನ್ ಗೆಲುವು ದಾಖಲಿಸಿತು. ಎರಡನೇ ಗುಂಪಿನ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು. ಪಾಕಿಸ್ತಾನ 2ನೇ ಸ್ಥಾನ ಅಲಂಕರಿಸಿತು. ಇದೀಗ ನವೆಂಬರ್ 9 ಹಾಗೂ 10 ರಂದು ಸೆಮಿಫೈನಲ್ ಪಂದ್ಯ ನಡಯಲಿದೆ. ಬಳಿಕ ನವೆಂಬರ್ 13 ರಂದು ಫೈನಲ್ ಪಂದ್ಯ ನಡೆಯಲಿದೆ. 

ಹರಿಣಗಳು ಸೋಲುಂಡ ಬೆನ್ನಲ್ಲೇ ಪಾಕಿಸ್ತಾನ ತಂಡಕ್ಕೆ ಅಭಿನಂದನೆಗಳ ಮಹಾಪೂರ..!

ಭಾರತದ ಇನ್ನಿಂಗ್ಸ್
ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಕೆಎಲ್ ರಾಹುಲ್ 51 ರನ್ ಕಾಣಿಕೆ ನೀಡಿದರು. ನಾಯಕ ರೋಹಿತ್ ಶರ್ಮಾ 15 ರನ್ ಸಿಡಿಸಿದರೆ, ವಿರಾಟ್ ಕೊಹ್ಲಿ 26 ರನ್ ಸಿಡಿಸಿದರು. ಸೂರ್ಯಕುಮಾರ್ ಯಾದವ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. 25 ಎಸೆತದಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ ಅಜೇಯ 61 ರನ್ ಸಿಡಿಸಿದರು. ರಿಷಬ್ ಪಂತ್ 3, ಹಾರ್ದಿಕ್ ಪಾಂಡ್ಯ 18 ರನ್ ಸಿಡಿಸಿದರು. ಈ ಮೂಲಕ 5 ವಿಕೆಟ್ ನಷ್ಟಕ್ಕೆ 186 ರನ್ ಸಿಡಿಸಿತು. 

Latest Videos
Follow Us:
Download App:
  • android
  • ios