ತಂಡದ ಹೊರಗಿದ್ದರೂ ಕಮಿಟ್‌ಮೆಂಟ್‌ಗೆ ಸಲಾಂ, ಬ್ರೇಕ್ ವೇಳೆ ಆಟಗಾರರಿಗೆ ನೀರು ತಂದುಕೊಟ್ಟ ಕೊಹ್ಲಿ!
ವೆಸ್ಟ್ ಇಂಡೀಸ್ ವಿರುದ್ಧದ 2ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ವಿಶ್ವದ ಶ್ರೇಷ್ಠ ಆಟಗಾರ ಕೊಹ್ಲಿ ತಂಡದಿಂದ ಹೊರಗಿದ್ದರೂ ಕ್ರಿಕೆಟ್ ಮೇಲಿರುವ ಪ್ರೀತಿ, ಕಮಿಟ್‌ಮೆಂಟ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಪಂದ್ಯದ ನಡುವೆ ಆಟಗಾರರಿಗೆ ಖುದ್ದು ಕೊಹ್ಲಿ ನೀರು ತಂದುಕೊಟ್ಟ ವಿಡಿಯೋ ವೈರಲ್ ಆಗಿದೆ. ಇಷ್ಟೇ ಅಲ್ಲ ದುಬಾರಿ ವಾಟರ್‌ಬಾಯ್ ಎಂದು ಫ್ಯಾನ್ಸ್ ಕರೆದಿದ್ದಾರೆ.
ಬಾರ್ಬಡೋಸ್(ಜು.30) ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಕೆಲ ಬದಲಾವಣೆ ಮಾಡಿ ಕಣಕ್ಕಿಳಿದಿತ್ತು. ಆದರೆ ಬದಲಾವಣೆ, ಕಳಪೆ ಬ್ಯಾಟಿಂಗ್ ಟೀಂ ಇಂಡಿಯಾಗೆ ತೀವ್ರ ಹಿನ್ನಡೆಯಾಗಿದೆ. ಎರಡನೇ ಪಂದ್ಯದಲ್ಲಿ ಭಾರತ ಮುಗ್ಗರಿಸಿದೆ. ಈ ಪಂದ್ಯದಿಂದ ವಿರಾಟ್ ಕೊಹ್ಲಿ, ನಾಯಕ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿತ್ತು. ಕೊಹ್ಲಿ ತಂಡದಿಂದ ಹೊರಗಿದ್ದರೂ ಕ್ರಿಕೆಟ್ ಕಮಿಟ್‌ಮೆಂಟ್ ಬಗ್ಗೆ ಎರಡು ಮಾತಿಲ್ಲ. ಪಂದ್ಯದ ಬ್ರೇಕ್ ವೇಳೆ ವಿರಾಟ್ ಕೊಹ್ಲಿ ಖುದ್ದು ಆಟಗಾರರಿಗೆ ನೀರು ತಂದುಕೊಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಕ್ರಿಕೆಟ್ ಜಗತ್ತಿನ ಅತ್ಯಂದ ದುಬಾರಿ ವಾಟರ್ ಬಾಯ್ ಎಂದು ಹಲವು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
ದ್ವಿತೀಯ ಏಕದಿನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾಗಿತ್ತು. 37 ಓವರ್ ವೇಳೆ ಭಾರತ 7 ವಿಕೆಟ್ ನಷ್ಟಕ್ಕೆ 167 ರನ್ ಸಿಡಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಪಂದ್ಯದ ನಡುವಿನ ಡ್ರಿಂಕ್ಸ್ ಬ್ರೇಕ್ ವೇಳೆ ವಿರಾಟ್ ಕೊಹ್ಲಿ ಹಾಗೂ ಯಜುವೇಂದ್ರ ಚಹಾಲ್ ಕ್ರೀಸ್‌ನಲ್ಲಿದ್ದ ಶಾರ್ದೂಲ್ ಠಾಕೂರ್ ಹಾಗೂ ಕುಲ್ದೀಪ್ ಯಾದವ್‌ಗೆ ನೀರು ತಂದುಕೊಟ್ಟಿದ್ದಾರೆ.
ವೆಸ್ಟ್ ಇಂಡೀಸ್ ಗೆದ್ರೆ ಫ್ರೀ ರಮ್ ಆಫರ್..! ಬರ್ಬೇಕಾದ್ರೆ ರಮ್ ತನ್ನಿ ಎಂದ ವಿಂಡೀಸ್..!
ಖುದ್ದು ಕೊಹ್ಲಿ ನೀರು ತಂದುಕೊಟ್ಟು ಕೆಲ ಟಿಪ್ಸ್ ನೀಡಿದ್ದಾರೆ. ಇನ್ನು ಫೀಲ್ಡಿಂಗ್ ವೇಳೆಯೂ ಭಾರತದ ಆಟಗಾರರಿಗೆ ಕೊಹ್ಲಿ ನೀರುಕೊಟ್ಟಿದ್ದಾರೆ. ಕೊಹ್ಲಿ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಕೊಹ್ಲಿ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಆಟಗಾರ, ಕೊಹ್ಲಿ ಡ್ರೆಸ್ಸಿಂಗ್ ರೂಂನಲ್ಲಿ ಕುಳಿತು ಕಿರಿಯ ಆಟಗಾರರಿಗೆ ಸೂಚನೆ ನೀಡಿದರೆ ಯಾರೂ ಏನೂ ಪ್ರಶ್ನೆ ಮಾಡುವುದಿಲ್ಲ. ಆದರೆ ಕ್ರಿಕೆಟ್ ಮೇಲಿನ ಆಸಕ್ತಿ, ಕಮಿಟ್‌ಮೆಂಟ್ ಎಲ್ಲಕ್ಕಿಂತ ಮಿಗಿಲು, ಹೀಗಾಗಿ ಖುದ್ದು ಕೊಹ್ಲಿ ಸಹ ಆಟಗಾರರಿಗೆ ನೀರು ತಂದುಕೊಟ್ಟಿದ್ದಾರೆ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.
ತನಗಿಂತ ಕ್ರಿಕೆಟ್ ದೊಡ್ಡದು ಎಂದು ಕೊಹ್ಲಿ ನಂಬಿದ್ದಾರೆ. ಇದು ಶ್ರೇಷ್ಠ ಕ್ರಿಕೆಟಿಗನ ಲಕ್ಷಣ ಎಂದು ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ. ಕೊಹ್ಲಿ ಸರಳತೆ ಎದ್ದು ಕಾಣುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಶ್ರೇಷ್ಠತೆ ಕುರಿತು ಭಾರಿ ಕಮೆಂಟ್‌ಗಳು ವ್ಯಕ್ತವಾಗಿದೆ.
Ind vs WI: ವಿಂಡೀಸ್ ಎದುರು ಮಂಡಿಯೂರಿದ ಟೀಂ ಇಂಡಿಯಾ..!
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯ ಗೆದ್ದಿದ್ದ ಭಾರತ, 2ನೇ ಪಂದ್ಯದಲ್ಲಿ ಮುಗ್ಗರಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಉತ್ತಮ ಆರಂಭ ಪಡೆಯಿತು. ಕಳಪೆ ಫಾರ್ಮ್‌ನಲ್ಲಿದ್ದ ಶುಭಮನ್ ಗಿಲ್ 34 ರನ್ ಕಾಣಿಕೆ ನೀಡಿದರೆ, ಇಶಾನ್ ಕಿಶನ್ 55 ರನ್ ಸಿಡಿಸಿದರು. ಆರಂಭಿಕರ ವಿಕೆಟ್ ಪತನದ ಬಳಿಕ ಟೀಂ ಇಂಡಿಯಾ ಕುಸಿತ ಕಂಡಿತು. ದ್ವಿತೀಯ ಪಂದ್ಯದಲ್ಲಿ ಅವಕಾಶ ಪಡೆದ ಸಂಜು ಸ್ಯಾಮ್ಸನ್ 9 ರನ್ ಸಿಡಿಸಿ ನಿರಾಸೆ ಅನುಭವಿಸಿದರು. ಅಕ್ಸರ್ ಪಟೇಲ್ 1, ನಾಯಕ ಹಾರ್ದಿಕ್ ಪಾಂಡ್ಯ ಕೇವಲ 7 ರನ್ ಸಿಡಿಸಿ ನಿರ್ಗಮಿಸಿದರು. ಸೂರ್ಯಕುಮಾರ್ 24 ರನ್ ಕಾಣಿಕೆ ನೀಡಿದರು. ಇನ್ನು ಶಾರ್ದೂಲ ಠಾಕೂರ್ 16, ಕುಲ್ದೀಪ್ ಯಾದವ್ 8, ಮುಕೇಶ್ ಕುಮಾರ್ 6 ರನ್ ಸಿಡಿಸಿದರು. ಈ ಮೂಲಕ ಭಾರತ 40.5 ಓವರ್‌ಗಳಲ್ಲಿ 181 ರನ್‌ಗೆ ಆಲೌಟ್ ಆಯಿತು.
ಸುಲಭ ಟಾರ್ಗೆಟನ್ನು ವೆಸ್ಟ್ ಇಂಡೀಸ್ 36.4 ಓವರ್‌ಗಳಲ್ಲಿ 182 ರನ್ ಸಿಡಿಸಿತು. ಈ ಮೂಲಕ 6 ವಿಕೆಟ್ ಗೆಲುವು ದಾಖಲಿಸಿ. ಸರಣಿ 1-1 ಸಮಬಲಗೊಳಿಸಿತು. ಇದೀಗ ಅಂತಿಮ ಏಕದಿನ ಪಂದ್ಯ ಫೈನಲ್ ಸ್ವರೂಪ ಪಡೆದುಕೊಂಡಿದೆ.