* ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ* ಜುಲೈ 01ರಂದು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯ*ಲೀಸೆಸ್ಟರ್‌ಶೈರ್ ಎದುರಿನ ಅಭ್ಯಾಸ ಪಂದ್ಯದ ವಿರಾಟ್ ಕೊಹ್ಲಿ ಫೋಟೋ ವೈರಲ್

ಲಂಡನ್(ಜೂ.29): ವಿರಾಟ್ ಕೊಹ್ಲಿ. ಮಾಡ್ರನ್ ಕ್ರಿಕೆಟ್ ಕಿಂಗ್. ಕೇವಲ ಕ್ರಿಕೆಟ್ ಲೋಕದಲ್ಲಿ ಮಾತ್ರ ಕಿಂಗ್ ಅಲ್ಲ, ಫ್ಯಾನ್ಸ್ ಪಾಲಿಗೂ ಕಿಂಗೇ. ಜಾಹೀರಾತುದಾರರ ಪಾಲಿಗೆ ಆರಾಧ್ಯ ದೈವ. ವಿರಾಟ್ ಕೊಹ್ಲಿ ಸದ್ಯ ಕಳಪೆ ಫಾರ್ಮ್​ನಲ್ಲಿರಬಹುದು. ಎರಡೂವರೆ ವರ್ಷದಿಂದ ಶತಕ ಬಾರಿಸದೆ ಇರಬಹುದು. ನಾಯಕತ್ವ ಕಳೆದುಕೊಂಡಿರಬಹುದು. ಆದ್ರೆ ಈಗಲೂ ಕ್ರಿಕೆಟ್ ಜಗತ್ತಿನಲ್ಲಿ ವಿರಾಟ್ ಕೊಹ್ಲಿಯೇ ನಂಬರ್ ಒನ್ ಕ್ರಿಕೆಟರ್.

ವಿರಾಟ್ ಕೊಹ್ಲಿ (Virat Kohli) ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕಿದ್ರೆ ಮಿಲಿಯನ್ ಗಟ್ಟಲೆ ಲೈಕ್ಸ್​, ಕಾಮೆಂಟ್ಸ್​ ಬರುತ್ತವೆ. ಕೊಹ್ಲಿ ಜಸ್ಟ್ ಒಂದೇ ಒಂದು ಟ್ವೀಟ್​ಗೆ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಾರೆ. ಆದರೆ ಮೊನ್ನೆ ಕೊಹ್ಲಿ ಒಂದು ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್​ಗೆ ಇಂಗ್ಲೆಂಡ್​ನ ಫೋಟೋ ಜರ್ಸಲಿಸ್ಟ್​ ಒಬ್ಬರು ಥ್ಯಾಕ್ಸ್ ಹೇಳಿದ್ದಾರೆ. ಅದರಲ್ಲಿ ಅಂತದ್ದೇನಿದೆ ಅನ್ನೋದೇ ವಿಶೇಷ.

ಆ ಮೂರು ಫೋಟೋ. ಫೋಟೋ ಜರ್ನಲಿಸ್ಟ್ ಫಿದಾ: 

ಜೂನ್ 1ರಿಂದ ಭಾರತ-ಇಂಗ್ಲೆಂಡ್​ 5ನೇ ಹಾಗೂ ಕೊನೆಯ ಟೆಸ್ಟ್​ ಆಡುತ್ತಿವೆ. ಆ ಟೆಸ್ಟ್​ಗೂ ಮುನ್ನ ಲೀಸೆಸ್ಟರ್​​ಶೈರ್ ವಿರುದ್ಧ ಟೀಂ ಇಂಡಿಯಾ 4 ದಿನಗಳ ಅಭ್ಯಾಸ ಪಂದ್ಯವಾಡಿತು. ಈ ಮ್ಯಾಚ್​ನಲ್ಲಿ ಕೊಹ್ಲಿ 33 ಮತ್ತು 67 ರನ್ ಬಾರಿಸಿದ್ರು. ಪಂದ್ಯ ಮುಗಿದ ನಂತರ ಈ ಮ್ಯಾಚ್​ನ ಮೂರು ಫೋಟೋಗಳನ್ನ ಹಾಕಿ, ಥ್ಯಾಕ್ಯೂ ಲೀಸೆಸ್ಟರ್​​ಶೈರ್​. ಬರ್ಮಿಂಗ್​​ಹ್ಯಾಮ್ ವೈಟಿಂಗ್​ ಎಂದು ಟ್ವೀಟ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಮಾಡಿರುವ ಈ ಟ್ವೀಟ್‌ಗೆ ಸಾವಿರಾರು ಲೈಕ್ಸ್, ಕಾಮೆಂಟ್ಸ್​ ಮತ್ತು ರೀ ಟ್ವೀಟ್​ಗಳು ಆಗಿವೆ.

Scroll to load tweet…
Scroll to load tweet…

ಆ ಮೂರು ಫೋಟೋ ತೆಗೆದ ಫೋಟೋಗ್ರಾಫರ್ ಜಾನ್​ ಮಾಲೆಟ್​​, ಕೊಹ್ಲಿ ಪೋಸ್ಟ್​​​ಗೆ ಪ್ರತಿಕ್ರಿಯೆ ನೀಡಿದ್ದು, ಧನ್ಯವಾದ ಹೇಳಿದ್ದಾರೆ. ವಿಶ್ವಶ್ರೇಷ್ಠ ಆಟಗಾರ ವಿರಾಟ್ ಕೊಹ್ಲಿ ನಾನು ತೆಗೆದ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರೋದಕ್ಕೆ ಪುನೀತನಾಗಿದ್ದೇನೆ. ಅವರ ಆಟದ ಭಂಗಿಗಳನ್ನ ಸೆರೆಹಿಡಿಯಲು ಸಾಧ್ಯವಾಗಿರುವುದು ನನಗೆ ಸಿಕ್ಕ ಒಂದು ಅದ್ಭುತ ಅವಕಾಶ. ಬೆಂಬಲ ನೀಡಿದ ಕೊಹ್ಲಿ, ಬಿಸಿಸಿಐ ಮತ್ತು ಎಲ್ಲರಿಗೂ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಸಹ ಸಾಕಷ್ಟು ವೈರಲ್ ಆಗಿದೆ. ಒಟ್ನಲ್ಲಿ ಕೊಹ್ಲಿ ಆಡಿದ್ರೂ ಕಿಂಗೇ, ಆಡದಿದ್ದರೂ ಕಿಂಗೇ ಅನ್ನೋದು ಪದೇ ಪದೇ ಪ್ರೂವ್ ಆಗ್ತಲೇ ಇದೆ.

Ind vs Eng ರೋಹಿತ್ ಶರ್ಮಾ ಹೊರಬಿದ್ದರೇ ಟೀಂ ಇಂಡಿಯಾ ಮುನ್ನಡೆಸುವವರು ಯಾರು..?

ಬರ್ಮಿಂಗ್‌ಹ್ಯಾಮ್ ಟೆಸ್ಟ್‌ನಲ್ಲಿ ಶತಕದ ಬರ ನೀಗಿಸಿಕೊಳ್ಳುತ್ತಾರಾ ವಿರಾಟ್ ಕೊಹ್ಲಿ..?

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಸುಮಾರು ಮೂರು ವರ್ಷಗಳಿಂದ ಶತಕ ಸಿಡಿಸಲು ವಿಫಲಾವಾಗುತ್ತಲೇ ಬಂದಿದ್ದಾರೆ. ಒಂದು ಕಾಲದಲ್ಲಿ ರನ್‌ ಮಷೀನ್ ಎನಿಸಿಕೊಂಡಿದ್ದ ವಿರಾಟ್ ಕೊಹ್ಲಿ ಬ್ಯಾಟಿಂದ ಮೂರಂಕಿ ಮೊತ್ತ ದಾಖಲಾಗುತ್ತಿಲ್ಲ. 2019ರಲ್ಲಿ ಬಾಂಗ್ಲಾದೇಶ ಎದುರು ಕೋಲ್ಕತಾದ ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದರು. ಇದಾದ ಬಳಿಕ ವಿರಾಟ್ ಕೊಹ್ಲಿ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಸಾಕಷ್ಟು ಪಂದ್ಯಗಳನ್ನಾಡಿದ್ದರೂ ಸಹಾ ಶತಕ ಸಿಡಿಸಲು ವಿಫಲವಾಗಿದ್ದಾರೆ. ಇದೀಗ ನಾಯಕತ್ವದ ಒತ್ತಡವಿಲ್ಲದೇ ಇಂಗ್ಲೆಂಡ್‌ ನೆಲಕ್ಕೆ ಕಾಲಿಟ್ಟಿರುವ ಕಿಂಗ್ ಕೊಹ್ಲಿ, ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದಲ್ಲಾದರೂ ಶತಕ ಬಾರಿಸಲಿ ಎನ್ನುವುದು ಅವರ ಕೋಟ್ಯಾಂತರ ಅಭಿಮಾನಿಗಳ ಹಾರೈಕೆಯಾಗಿದೆ.