Asianet Suvarna News Asianet Suvarna News

ಸತತ ಟೆಸ್ಟ್‌ ಸೋಲು: ಇಂಗ್ಲೆಂಡ್‌ ನಾಯಕತ್ವ ಬಿಡ್ತಾರಾ ಜೋ ರೂಟ್‌?

* ಜೋ ರೂಟ್ ನಾಯಕತ್ವದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ನೀರಸ ಪ್ರದರ್ಶನ

* ವಿಂಡೀಸ್ ಎದುರಿನ ಸರಣಿಯಲ್ಲೂ ಸೋಲುಂಡ ಇಂಗ್ಲೆಂಡ್ ತಂಡ

* ಜೋ ರೂಟ್ ನಾಯಕತ್ವದಿಂದ ಕೆಳಗಿಳಿಯುವಂತೆ ಮಾಜಿ ಕ್ರಿಕೆಟಿಗರ ಆಗ್ರಹ

England Test Captain Joe Root likely to step down after West Indies defeat kvn
Author
Bengaluru, First Published Mar 29, 2022, 4:08 PM IST

ಲಂಡನ್(ಮಾ.29)‌: ಇಂಗ್ಲೆಂಡ್‌ ಕ್ರಿಕೆಟ್‌ ತಂಡ (England Cricket Team) ಸತತ ಟೆಸ್ಟ್‌ ಸೋಲುಗಳಿಂದ ಕಂಗೆಟ್ಟಿದ್ದು, ನಾಯಕ ಜೋ ರೂಟ್‌ (Joe Root) ತಮ್ಮ ಸ್ಥಾನ ತ್ಯಜಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ವೆಸ್ಟ್‌ಇಂಡೀಸ್‌ ವಿರುದ್ಧ ಇಂಗ್ಲೆಂಡ್‌ 10 ವಿಕೆಟ್‌ ಸೋಲನುಭವಿಸಿದ್ದು, ರೂಟ್‌ ನಾಯಕತ್ವದ ಬಗ್ಗೆ ಎದ್ದಿದ್ದ ಅಪಸ್ವರ ಹೆಚ್ಚಾಗಿದೆ. ಮೈಕಲ್‌ ವಾನ್‌ (Michael Vaughan), ನಾಸಿರ್‌ ಹುಸೈನ್‌ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಕೂಡಾ ರೂಟ್‌ ತಮ್ಮ ಸ್ಥಾನದಿಂದ ಕೆಳಗಿಳಿಯಬೇಕೆಂದು ಆಗ್ರಹಿಸಿದ್ದಾರೆ. 

ಕಳೆದ 5 ವರ್ಷಗಳ ಹಿಂದೆ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವವನ್ನು ವಹಿಸಿಕೊಂಡ ಜೋ ರೂಟ್ ಒಟ್ಟಾರೆ 64 ಪಂದ್ಯಗಳಿಗೆ ಇಂಗ್ಲೆಂಡ್ ಟೆಸ್ಟ್ ತಂಡದ (England Test Team) ನಾಯಕತ್ವ ವಹಿಸಿದ್ದು, 27 ಗೆಲುವು, 26 ಸೋಲು ಕಂಡಿದ್ದಾರೆ. ಇನ್ನು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಗ್ರೇಮ್‌ ಸ್ಮಿತ್(29) ಹಾಗೂ ಸ್ಟಿಫನ್ ಪ್ಲೆಮಿಂಗ್(27) ಬಳಿಕ ವಿದೇಶಿ ನೆಲದಲ್ಲಿ ಅತಿಹೆಚ್ಚು ಟೆಸ್ಟ್ ಸೋಲು ಕಂಡ ನಾಯಕ ಎನ್ನುವ ಕುಖ್ಯಾತಿಗೆ ಜೋ ರೂಟ್ ಪಾತ್ರರಾಗಿದ್ದಾರೆ. 

ಇಂಗ್ಲೆಂಡ್‌ ಮಾಜಿ ನಾಯಕ ನಾಸಿರ್ ಹುಸೈನ್(Nasser Hussain), ಡೈಲಿ ಮೇಲ್‌ಗೆ ಬರೆದ ಲೇಖನದಲ್ಲಿ, ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಅನುಭವಿ ವೇಗಿಗಳಾದ ಜೇಮ್ಸ್‌ ಆಂಡರ್‌ಸನ್ (James Anderson) ಹಾಗೂ ಸ್ಟುವರ್ಟ್‌ ಬ್ರಾಡ್ (Stuart Broad) ಅವರನ್ನು ಕೈಬಿಟ್ಟ ನಿರ್ಧಾರ ನಿಜಕ್ಕೂ ದುರಂತ. ಜೋ ರೂಟ್ ಓರ್ವ ವಿಶ್ವದರ್ಜೆಯ ಬ್ಯಾಟರ್ ಎನ್ನುವ ವಿಚಾರದಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಇತ್ತೀಚೆಗಿನ ದಿನಗಳಲ್ಲಿ ಅವರ ನಾಯಕತ್ವ ತಂತ್ರಗಾರಿಕೆ ಯಶಸ್ವಿಯಾಗುತ್ತಿಲ್ಲ. ಮುಂಬರುವ ನ್ಯೂಜಿಲೆಂಡ್ ಎದುರಿನ ಟೆಸ್ಟ್ ಸರಣಿಗೂ ಮುನ್ನ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್‌ (Ben Stokes) ಅವರಿಗೆ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಪಟ್ಟ ಕಟ್ಟಬೇಕು ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ನಾಸಿರ್ ಹುಸೈನ್ ಹೇಳಿದ್ದಾರೆ.

IPL 2022: ಸ್ಟಾರ್ ಆಲ್ರೌಂಡರ್ ಮಿಚೆಲ್‌ ಮಾರ್ಷ್‌ಗೆ ಗಾಯ: ಡೆಲ್ಲಿ ಕ್ಯಾಪಿಟಲ್ಸ್‌ ತಂಡದಿಂದ ಔಟ್?

ಇಂಗ್ಲೆಂಡ್‌ ಕಳೆದ 17 ಪಂದ್ಯಗಳಲ್ಲಿ ಕೇವಲ 1ರಲ್ಲಿ ಮಾತ್ರ ಗೆದ್ದಿದ್ದು, 11ರಲ್ಲಿ ಸೋಲನುಭವಿಸಿದೆ. ಭಾರತ ವಿರುದ್ಧದ ಲೀಡ್ಸ್‌ ಟೆಸ್ಟ್‌ನಲ್ಲಿ ಮಾತ್ರ ಜಯ ದಾಖಲಿಸಿದೆ. ಇನ್ನು ಆ್ಯಷಸ್‌ ಸರಣಿಯಲ್ಲಿ 0-4 ಸೇರಿದಂತೆ ಕಳೆದ 5 ಸರಣಿಯಲ್ಲಿ ಇಂಗ್ಲೆಂಡ್‌ ಪರಾಭವಗೊಂಡಿದೆ. ಇದೀಗ ಇಂಗ್ಲೆಂಡ್ ತಂಡವು ತವರಿನಲ್ಲಿ ನ್ಯೂಜಿಲೆಂಡ್ ವಿರುದ್ದ ಜೂನ್ 2ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಗೂ ಮುನ್ನ ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ನೂತನ ನಾಯಕ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. 

ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿ ಗೆದ್ದ ವೆಸ್ಟ್‌ಇಂಡೀಸ್‌

ಸೇಂಟ್‌ ಜಾಜ್‌ರ್‍(ಗ್ರೆನಾಡಾ): ಇಂಗ್ಲೆಂಡ್‌ ವಿರುದ್ಧದ 3ನೇ ಹಾಗೂ ಕೊನೆ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ವೆಸ್ಟ್‌ಇಂಡೀಸ್‌ 10 ವಿಕೆಟ್‌ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಸರಣಿಯನ್ನು 1-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಗೆಲುವಿಗೆ ಕೇವಲ 28 ರನ್‌ ಗುರಿ ಪಡೆದ ವಿಂಡೀಸ್‌ 4.5 ಓವರ್‌ಗಳಲ್ಲಿ ಜಯಗಳಿಸಿತು. ಇದಕ್ಕೂ ಮೊದಲು 3ನೇ ದಿನದಂತ್ಯಕ್ಕೆ 8 ವಿಕೆಟ್‌ ಕಳೆದುಕೊಂಡು 103 ರನ್‌ ಗಳಿಸಿದ್ದ ಇಂಗ್ಲೆಂಡ್‌, ಭಾನುವಾರ 120 ರನ್‌ಗೆ ಸರ್ವಪತನ ಕಂಡಿತು. ಅಲೆಕ್ಸ್‌ ಲೀಸ್‌(31), ಬೇರ್‌ಸ್ಟೋವ್‌ (21), ಕ್ರಿಸ್‌ ವೋಕ್ಸ್‌(19) ಮಾತ್ರ ಎರಡಂಕಿ ಮೊತ್ತ ಗಳಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡನ್ನು 204ಕ್ಕೆ ನಿಯಂತ್ರಿಸಿದ್ದ ವಿಂಡೀಸ್‌, 297 ರನ್‌ ಕಲೆ ಹಾಕಿ 93 ರನ್‌ ಮುನ್ನಡೆ ಪಡೆದಿತ್ತು.


 

Follow Us:
Download App:
  • android
  • ios