ಸೆಂಚುರಿಯನ್‌(ಡಿ.26): ಇಂಗ್ಲೆಂಡ್‌ನ ವೇಗದ ಬೌಲರ್‌ ಜೇಮ್ಸ್‌ ಆ್ಯಂಡರ್‌ಸನ್‌, ಗುರುವಾರದಿಂದ ಇಲ್ಲಿ ಆರಂಭಗೊಳ್ಳಲಿರುವ ದ.ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಕಣಕ್ಕಿಳಿಯುವ ಮೂಲಕ 150 ಟೆಸ್ಟ್‌ಗಳ ಮೈಲಿಗಲ್ಲು ತಲುಪಲಿದ್ದಾರೆ. 150 ಟೆಸ್ಟ್‌ ಆಡಿದ ವಿಶ್ವದ 9ನೇ ಕ್ರಿಕೆಟಿಗ ಎನ್ನುವ ಹಿರಿಮೆಗೆ ಅವರು ಪಾತ್ರರಾಗಲಿದ್ದಾರೆ.

ಎದೆ ಮುಟ್ಟಿಕೊಂಡು ಹೇಳುತ್ತೇನೆ, ನಾನು ಅಂಪೈರ್‌ಗೆ ಹಾಗೆ ಹೇಳಿಲ್ಲ: ಬೆನ್ ಸ್ಟೋಕ್ಸ್

ಈ ಮೊದಲು ಸಚಿನ್‌ ತೆಂಡುಲ್ಕರ್‌, ರಿಕಿ ಪಾಂಟಿಂಗ್‌, ಸ್ಟೀವ್‌ ವಾ, ಜಾಕ್‌ ಕಾಲಿಸ್‌, ಶಿವನಾರಾಯಣ್‌ ಚಂದ್ರಪಾಲ್‌, ರಾಹುಲ್‌ ದ್ರಾವಿಡ್‌, ಅಲಿಸ್ಟರ್‌ ಕುಕ್‌ ಹಾಗೂ ಆಲನ್‌ ಬಾರ್ಡರ್‌ 150ಕ್ಕೂ ಹೆಚ್ಚು ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. ಆ್ಯಂಡರ್‌ಸನ್‌ 149 ಪಂದ್ಯಗಳಿಂದ 575 ವಿಕೆಟ್‌ ಕಬಳಿಸಿ, ಇಂಗ್ಲೆಂಡ್‌ ಪರ ಟೆಸ್ಟ್‌ನಲ್ಲಿ ಅತಿಹೆಚ್ಚು ವಿಕೆಟ್‌ ಕಬಳಿಸಿದ ಬೌಲರ್‌ ಎನ್ನುವ ದಾಖಲೆ ಹೊಂದಿದ್ದಾರೆ.

ದ.ಆಫ್ರಿಕಾ-ಇಂಗ್ಲೆಂಡ್‌ ಮೊದಲ ಟೆಸ್ಟ್‌ ಇಂದಿನಿಂದ

ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್‌ ನಡುವಿನ ಮೊದಲ ಟೆಸ್ಟ್‌ ಗುರುವಾರ ಇಲ್ಲಿ ಆರಂಭಗೊಳ್ಳಲಿದೆ. 4 ಪಂದ್ಯಗಳ ಸರಣಿ ಇದಾಗಿದ್ದು, ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ವ್ಯಾಪ್ತಿಗೆ ಸೇರಲಿದೆ. ಈ ನಿಟ್ಟಿನಲ್ಲಿ ಎರಡೂ ತಂಡಗಳಿಗೆ ಈ ಸರಣಿ ಮಹತ್ವದೆನಿಸಿದೆ. ಪ್ರತಿ ಗೆಲುವಿಗೆ 30 ಅಂಕ ದೊರೆಯಲಿದೆ. 

ಕೇವಲ 40 ನಿಮಿಷದಲ್ಲಿ ಹೃದಯ ಗೆದ್ದ ನಾಯಕ; ಗಂಗೂಲಿ ಹೊಗಳಿದ ಪಾಕ್ ದಿಗ್ಗಜ!

5 ಪಂದ್ಯಗಳಲ್ಲಿ 2 ಗೆಲುವು, 2 ಸೋಲು, 1 ಡ್ರಾದೊಂದಿಗೆ 56 ಅಂಕ ಗಳಿಸಿರುವ ಇಂಗ್ಲೆಂಡ್‌ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ದ.ಆಫ್ರಿಕಾ ತಂಡ ಭಾರತ ವಿರುದ್ಧ ಆಡಿದ ಮೂರೂ ಪಂದ್ಯಗಳಲ್ಲಿ ಸೋಲುಂಡ ಕಾರಣ, ಇನ್ನೂ ಖಾತೆ ತೆರೆದಿಲ್ಲ. 9 ತಂಡಗಳ ಪೈಕಿ ದ.ಆಫ್ರಿಕಾ ಕೊನೆ ಸ್ಥಾನದಲ್ಲಿದ್ದು, ಮೊದಲ ಗೆಲುವಿಗಾಗಿ ಕಾತರಿಸುತ್ತಿದೆ.