ಐಪಿಎಲ್ ಹರಾಜಿಗೆ ಕ್ಷಣಗಣನೆ ಬೆನ್ನಲ್ಲೇ ಸ್ಪೋಟಕ ಟಿ20 ಶತಕ ಸಿಡಿಸಿ ದಾಖಲೆ ಬರೆದ ಫಿಲ್ ಸಾಲ್ಟ್
ಇಂಗ್ಲೆಂಡ್ ಅಗ್ರಕ್ರಮಾಂಕದ ಬ್ಯಾಟರ್ ಫಿಲ್ ಸಾಲ್ಟ್, ವೆಸ್ಟ್ ಇಂಡೀಸ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಸ್ಪೋಟಕ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ.
ಬಾರ್ಬಡೊಸ್: ಬಹುನಿರೀಕ್ಷಿತ 2025ರ ಐಪಿಎಲ್ ಮೆಗಾ ಹರಾಜಿಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಕೆಕೆಆರ್ ಮಾಜಿ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ ವಿಸ್ಪೋಟಕ ಶತಕ ಸಿಡಿಸುವ ಮೂಲಕ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು, ವೆಸ್ಟ್‌ಇಂಡೀಸ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ ಇಂಗ್ಲೆಂಡ್ ಬ್ಯಾಟರ್ ಫಿಲ್ ಸಾಲ್ಟ್ ಕೆಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಅವರು 54 ಎಸೆತಗಳಲ್ಲಿ ಔಟಾಗದೆ 103 ರನ್ ಸಿಡಿಸಿದರು. ಇದು ಅಂತಾರಾಷ್ಟ್ರೀಯ ಟಿ20ಯಲ್ಲಿ ಸಾಲ್ಟ್ ಬಾರಿಸಿದ 3ನೇ ಶತಕ. ಎಲ್ಲಾ ಶತಕಗಳೂ ವಿಂಡೀಸ್ ವಿರುದ್ಧ ಹಾಗೂ ತವರಿನಾಚೆ ಕ್ರೀಡಾಂಗಣದಲ್ಲಿ ದಾಖಲಾಗಿರುವುದು ವಿಶೇಷ.
ಈ ಮೂಲಕ ಟಿ20ಯಲ್ಲಿ ತಂಡವೊಂದರ ವಿರುದ್ಧ ಗರಿಷ್ಠ ಶತಕ ಬಾರಿಸಿದ ದಾಖಲೆ ಬರೆದರು. ಅಲ್ಲದೆ, ವಿದೇಶಿ ನೆಲದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಸಾಲ್ಟ್ ಕಳೆದ ವರ್ಷ ವಿಂಡೀಸ್ ವಿರುದ್ಧ ಸತತ 2 ಪಂದ್ಯಗಳಲ್ಲಿ ಶತಕ ಗಳಿಸಿದ್ದರು.
ಸಾಲ್ಟ್ ಶತಕ: ವಿಂಡೀಸ್ ಟಿ20 ಪಂದ್ಯ ಗೆದ್ದ ಇಂಗ್ಲೆಂಡ್
ಬಾರ್ಬಡೊಸ್: ಫಿಲ್ ಆತಿಥೇಯ ವೆಸ್ಟ್‌ಇಂಡೀಸ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ 8 ವಿಕೆಟ್ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಪಡೆದಿದೆ. ಮೊದಲು ಬ್ಯಾಟ್ ಮಾಡಿದ ವಿಂಡೀಸ್ 9 ವಿಕೆಟ್‌ಗೆ 182 ರನ್ ಕಲೆಹಾಕಿತು. ಪೂರನ್ 38, ಶೆಫರ್ಡ್ 35, ಗುಡಾಕೆಶ್ ಮೋಟಿ 14 ಎಸೆತಗಳಲ್ಲಿ ಔಟಾಗದೆ 33 ರನ್ ಸಿಡಿಸಿದರು. ಸಾಕಿಬ್ ಮಹ್ಮೂದ್ 4, ಆದಿಲ್ ರಶೀದ್ 3 ವಿಕೆಟ್ ಕಿತ್ತರು.
ಚಕ್ರವರ್ತಿ ದಾಳಿ ಹಿಮ್ಮೆಟ್ಟಿಸಿ ಗೆದ್ದ ಹರಿಣಗಳ ಪಡೆ: ಭಾರತಕ್ಕೆ 3 ವಿಕೆಟ್ ವೀರೋಚಿತ ಸೋಲು!
ದೊಡ್ಡ ಗುರಿ ಬೆನ್ನತ್ತಿದ ಇಂಗ್ಲೆಂಡ್ ಕೇವಲ 16.5 ಓವರ್‌ಗಳಲ್ಲೇ ಗೆಲುವು ತನ್ನದಾಗಿಸಿಕೊಂಡಿತು. ಫಿಲ್ ಸಾಲ್ಟ್ 54 ಎಸೆತಗಳಲ್ಲಿ ಔಟಾಗದೆ 103 ರನ್ ಸಿಡಿಸಿ ಗೆಲುವಿನ ರೂವಾರಿಯಾದರು. ಜೇಕಬ್ ಬೆಥೆಲ್ ಔಟಾಗದೆ 58 ರನ್ ಗಳಿಸಿದರು.
ಆಸೀಸ್‌ಗೆ ತವರಲ್ಲೇ ಶಾಕ್: ಪಾಕ್‌ಗೆ ಐತಿಹಾಸಿಕ ಸರಣಿ
ಪರ್ಥ್: ಪಾಕಿಸ್ತಾನ ವಿರುದ್ಧ ತವರಿನ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ಆಘಾತಕಾರಿ ಸೋಲನುಭವಿಸಿದೆ. ಹಾಲಿ ವಿಶ್ವ ಚಾಂಪಿಯನ್ ಆಸೀಸ್ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ 8 ವಿಕೆಟ್ ಗೆಲುವು ಸಾಧಿಸಿತು. ಈ ಮೂಲಕ 3 ಪಂದ್ಯಗಳ ಸರಣಿಯನ್ನು 2-1 ಕೈವಶ ಪಡಿಸಿಕೊಂಡಿತು.
ಪಾಕಿಸ್ತಾನ ಆಯೋಜಿಸಲಿರುವ ಚಾಂಪಿಯನ್ಸ್ ಟ್ರೋಫಿಗೆ ವಿಘ್ನ,ಐಸಿಸಿ ನಿರ್ಧಾರಕ್ಕೆ ಪಿಸಿಬಿ ಕಂಗಾಲು!
ಮೊದಲು ಬ್ಯಾಟ್ ಮಾಡಿದ ಆಸೀಸ್ 31.5 ಓವರ್‌ಗಳಲ್ಲಿ 130 ರನ್‌ಗೆ ಆಲೌಟಾಯಿತು. 8ನೇ ಕ್ರಮಾಂಕದಲ್ಲಿ ಆಡಿದ ಶೀನ್ ಅಬಾಟ್(30) ತಂಡದ ಪರ ಗರಿಷ್ಠ ವೈಯಕ್ತಿಕ ಮೊತ್ತ ದಾಖಲಿಸಿದರು. ಶಾಹೀನ್ ಅಫ್ರಿದಿ, ನಸೀಂ ಶಾ ತಲಾ 3 ವಿಕೆಟ್ ಕಿತ್ತರು. ಸುಲಭ ಗುರಿ ಪಡೆದ ಪಾಕಿಸ್ತಾನ 26.5 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ ಜಯಗಳಿಸಿತು. ಸೈಮ್ ಅಯೂಬ್ 42, ಅಬ್ದುಲ್ಲಾ ಶಫೀಖ್ 37 ರನ್ ಸಿಡಿಸಿದರು. 3 ಪಂದ್ಯಗಳಲ್ಲಿ 10 ವಿಕೆಟ್ ಕಿತ್ತ ರೌಫ್ ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇತ್ತಂಡಗಳ ನಡುವಿನ 3 ಪಂದ್ಯಗಳ ಟಿ20 ಸರಣಿ ನ.14ರಿಂದ ಆರಂಭಗೊಳ್ಳಲಿದೆ.