ಚಕ್ರವರ್ತಿ ದಾಳಿ ಹಿಮ್ಮೆಟ್ಟಿಸಿ ಗೆದ್ದ ಹರಿಣಗಳ ಪಡೆ: ಭಾರತಕ್ಕೆ 3 ವಿಕೆಟ್‌ ವೀರೋಚಿತ ಸೋಲು!

ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ವಿರೋಚಿತ ಸೋಲು ಅನುಭವಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

Tristan Stubbs guides South Africa to 3 wicket win as Varun Chakaravarthy 5 wickets goes in vain kvn

ಗೆಬೆರ್ಹಾ(ದಕ್ಷಿಣ ಆಫ್ರಿಕಾ): ಭಾರತ ಹಾಗೂ ದಕ್ಷಿಣ ಆಫ್ರಿಕಾ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಬ್ಯಾಟರ್‌ಗಳ ಅಬ್ಬರವನ್ನು ಕಣ್ತುಂಬಿಕೊಂಡಿದ್ದ ಅಭಿಮಾನಿಗಳು, 2ನೇ ಪಂದ್ಯದಲ್ಲಿ ಬೌಲರ್‌ಗಳ ಪರಾಕ್ರಮಕ್ಕೆ ಸಾಕ್ಷಿಯಾದರು. ಬೌಲರ್‌ಗಳ ಕರಾರುವಕ್‌ ದಾಳಿ, ಬ್ಯಾಟರ್‌ಗಳ ವೈಫಲ್ಯವೇ ಹೈಲೈಟ್ಸ್‌ ಎಂಬಂತಿದ್ದ ಭಾನುವಾರದ ಲೋ ಸ್ಕೋರ್‌ ಥ್ರಿಲ್ಲರ್‌ ಪಂದ್ಯದಲ್ಲಿ ಟೀಂ ಇಂಡಿಯಾ 3 ವಿಕೆಟ್‌ ವೀರೋಚಿತ ಸೋಲನುಭವಿಸಿತು.

ವರುಣ್‌ ಚಕ್ರವರ್ತಿ ಮಾರಕ ದಾಳಿ ನಡೆಸಿ ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳನ್ನು ಕಟ್ಟಿಹಾಕಿದರೂ, ಟ್ರಿಸ್ಟನ್‌ ಸ್ಟಬ್ಸ್‌ ಹೋರಾಟ ಆತಿಥೇಯರನ್ನು ಗೆಲ್ಲಿಸಿತು. ಈ ಮೂಲಕ 4 ಪಂದ್ಯಗಳ ಸರಣಿಯ ಸದ್ಯ 1-1ರಿಂದ ಸಮಬಲಗೊಂಡಿದೆ.

ಗೆಬೆರ್ಹಾ ಪಿಚ್‌ನಲ್ಲಿ ರನ್‌ ಗಳಿಸುವುದು ಕಷ್ಟ ಹಾಗೂ ಮಳೆ ಸಾಧ್ಯತೆ ಮನಗಂಡಿದ್ದ ದ.ಆಫ್ರಿಕಾ ನಾಯಕ ಏಡನ್‌ ಮಾರ್ಕ್‌ರಮ್‌ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡರು. ಅವರ ಆಯ್ಕೆ ಸರಿ ಇತ್ತು ಎಂಬುದು ಗೊತ್ತಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಭಾರತದ ಬ್ಯಾಟರ್‌ಗಳು ಒಂದೊಂದು ರನ್‌ ಗಳಿಸಲೂ ಪರದಾಟ ನಡೆಸಿದರು. ಹಾರ್ದಿಕ್‌ ಪಾಂಡ್ಯ ಹೋರಾಟದಿಂದಾಗಿ ತಂಡ 20 ಓವರಲ್ಲಿ 6 ವಿಕೆಟ್‌ ಕಳೆದುಕೊಂಡು 124 ರನ್‌ ಗಳಿಸಿತು.

ಪಾಕಿಸ್ತಾನ ಆಯೋಜಿಸಲಿರುವ ಚಾಂಪಿಯನ್ಸ್ ಟ್ರೋಫಿಗೆ ವಿಘ್ನ,ಐಸಿಸಿ ನಿರ್ಧಾರಕ್ಕೆ ಪಿಸಿಬಿ ಕಂಗಾಲು!

ಈ ಸ್ಕೋರ್‌ ತುಂಬಾ ಕಡಿಮೆಯಾಗಿದ್ದರೂ ಭಾರತದ ಬೌಲರ್‌ಗಳು ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಒಂದು ಹಂತದಲ್ಲಿ ಗೆಲುವಿನ ನಿರೀಕ್ಷೆ ಮೂಡಿಸಿದ್ದರೂ ಕೊನೆಯಲ್ಲಿ ಎಡವಿ ಪಂದ್ಯ ಕೈಚೆಲ್ಲಿತು. ದ.ಆಫ್ರಿಕಾ 19 ಓವರ್‌ಗಳಲ್ಲಿ ಜಯಗಳಿಸಿತು.

ಆರಂಭಿಕರು ಅಬ್ಬರದ ಆಟದ ಮುನ್ಸೂಚನೆ ನೀಡಿದರೂ, ಅವರಿಗೆ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಅರ್ಶ್‌ದೀಪ್‌ ಸಿಂಗ್‌ ಬಿಡಲಿಲ್ಲ. ರಿಕೆಲ್ಟನ್‌ 13 ರನ್‌ಗೆ ಔಟಾದರು. ಬಳಿಕ ವರುಣ್‌ ಚಕ್ರವರ್ತಿ ದ.ಆಫ್ರಿಕಾದ ಬ್ಯಾಟಿಂಗ್‌ ಬೆನ್ನೆಲುಬು ಮುರಿದರು. ನಾಯಕ ಮಾರ್ಕ್‌ರಮ್‌(3) ಹಾಗೂ ರೀಜಾ ಹೆಂಡ್ರಿಕ್ಸ್‌(24) ಇಬ್ಬರನ್ನೂ ವರುಣ್‌ ಚಕ್ರವರ್ತಿ ಬೌಲ್ಡ್‌ ಮಾಡಿದರು. ಅಪಾಯಕಾರಿ ಹೈನ್ರಿಚ್‌ ಕ್ಲಾಸೆನ್‌, ಮಾರ್ಕೊ ಯಾನ್ಸನ್‌ ಹಾಗೂ ಡೇವಿಡ್‌ ಮಿಲ್ಲರ್‌ಗೂ ವರುಣ್ ಪೆವಿಲಿಯನ್‌ ಹಾದಿ ತೋರಿದರು. ಆದರೆ ಟ್ರಿಸ್ಟನ್‌ ಸ್ಟಬ್ಸ್‌(ಔಟಾಗದೆ 47) ಪಂದ್ಯ ಗೆಲ್ಲಿಸಿದರು. ವರುಣ್‌ 4 ಓವರ್‌ಗಳಲ್ಲಿ 17 ರನ್‌ಗೆ 5 ವಿಕೆಟ್‌ ಕಿತ್ತರು.

ಸೌತ್ ಆಫ್ರಿಕಾ ವಿರುದ್ಧ 2ನೇ ಟಿ20ಯಲ್ಲಿ ಭಾರತಕ್ಕೆ ಆರಂಭದಲ್ಲೇ ಶಾಕ್, ಸ್ಯಾಮ್ಸನ್ ಡಕೌಟ್!

ಬ್ಯಾಟಿಂಗ್‌ ವೈಫಲ್ಯ: ಕಳೆದ ಪಂದ್ಯದಲ್ಲಿ 200+ ರನ್‌ ಕಲೆಹಾಕಿದ್ದ ಭಾರತ ಈ ಪಂದ್ಯದಲ್ಲಿ ರನ್‌ ಗಳಿಸಲು ತಿಣುಕಾಡಿದು. ಮೊದಲ ಪಂದ್ಯದ ಶತಕವೀರ ಸಂಜು ಸ್ಯಾಮ್ಸನ್‌ ಸೊನ್ನೆಗೆ ಔಟಾದರೆ, ಅಭಿಷೇಕ್‌ ಶರ್ಮಾ(04) ಮತ್ತೆ ವಿಫಲರಾದರು. ಸೂರ್ಯಕುಮಾರ್‌ ಯಾದವ್‌ ಗಳಿಕೆ ಕೇವಲ 4 ರನ್‌. ಈ ಹಂತದಲ್ಲಿ ತಿಲಕ್‌ ವರ್ಮಾ 20, ಅಕ್ಷರ್‌ ಪಟೇಲ್‌ 27 ಹಾಗೂ ಹಾರ್ದಿಕ್‌ ಪಾಂಡ್ಯ ಔಟಾಗದೆ 39(45 ಎಸೆತ) ತಂಡಕ್ಕೆ ಅಲ್ಪ ಆಸರೆಯಾದರು. ಹಾರ್ದಿಕ್‌ ತಂಡದ ಮೊತ್ತ 120ರ ಗಡಿ ದಾಟಲು ನೆರವಾದರು.

ಸ್ಕೋರ್‌: ಭಾರತ 20 ಓವರಲ್ಲಿ 124/6 (ಹಾರ್ದಿಕ್‌ 39, ಅಕ್ಷರ್‌ 27, ತಿಲಕ್‌ ವರ್ಮಾ 20, ಮಾರ್ಕ್‌ರಮ್‌ 1-4, ಪೀಟಲ್‌ 1-20), ದ.ಆಫ್ರಿಕಾ 19 ಓವರಲ್ಲಿ 128/7 (ಸ್ಟಬ್ಸ್‌ 47, ಹೆಂಡ್ರಿಕ್ಸ್‌ 24, ವರುಣ್‌ 5-17)

01ನೇ ಬ್ಯಾಟರ್‌: ಕ್ಯಾಲೆಂಡರ್‌ ವರ್ಷದಲ್ಲಿ ಅಂತಾರಾಷ್ಟ್ರೀಯ ಟಿ20ಯಲ್ಲಿ 4 ಬಾರಿ ಸೊನ್ನೆಗೆ ಔಟಾದ ಭಾರತದ ಮೊದಲ ಬ್ಯಾಟರ್‌ ಸಂಜು ಸ್ಯಾಮ್ಸನ್‌.

ಭಾರತದ ಸತತ 11 ಜಯದ ಓಟಕ್ಕೆ ಬ್ರೇಕ್‌

ಭಾರತ ಸತತ 11 ಪಂದ್ಯಗಳ ಗೆಲುವಿನ ಓಟಕ್ಕೆ ದಕ್ಷಿಣ ಆಫ್ರಿಕಾ ಕಡಿವಾಣ ಹಾಕಿತು. ಜುಲೈನಲ್ಲಿ ಜಿಂಬಾಬ್ವೆ ವಿರುದ್ಧ ಸರಣಿಯ ಮೊದಲ ಪಂದ್ಯ ಸೋತ ಬಳಿಕ ಭಾರತ ಕಳೆದ 11 ಪಂದ್ಯಗಳಲ್ಲೂ ಗೆದ್ದಿತ್ತು. ಭಾನುವಾರ ಭಾರತ ಗೆದ್ದಿದ್ದರೆ ತನ್ನ ಹಿಂದಿನ ದಾಖಲೆಯನ್ನು ಸರಿಗಟ್ಟುತ್ತಿತ್ತು. 2021-22ರಲ್ಲಿ ಭಾರತ ಸತತವಾಗಿ 12 ಪಂದ್ಯಗಳಲ್ಲಿ ಗೆದ್ದಿತ್ತು. ಸತತವಾಗಿ ಗರಿಷ್ಠ ಪಂದ್ಯ ಗೆದ್ದ ದಾಖಲೆ ಸದ್ಯ ಸ್ಪೇನ್‌ ಹೆಸರಲ್ಲಿದೆ. ತಂಡ 2023ರ ಫೆಬ್ರವರಿಯಿಂದ ಈ ವರೆಗೂ ಸತತ 15 ಪಂದ್ಯಗಳಲ್ಲಿ ಜಯಗಳಿಸಿದೆ.
 

Latest Videos
Follow Us:
Download App:
  • android
  • ios