Asianet Suvarna News Asianet Suvarna News

17 ವರ್ಷಗಳ ಬಳಿಕ ಮೊದಲ ಟೆಸ್ಟ್‌ ಪಂದ್ಯವನ್ನಾಡಲು ಪಾಕಿಸ್ತಾನಕ್ಕೆ ಬಂದಿಳಿದ ಇಂಗ್ಲೆಂಡ್..!

* ಪಾಕಿಸ್ತಾನ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಗೆ ಕ್ಷಣಗಣನೆ
* ಡಿಸೆಂಬರ್ 01ರಿಂದ ಮೂರು ಪಂದ್ಯಗಳ ಟೆಸ್ಟ್ ಸರಣಿ ಆರಂಭ
* 17 ವರ್ಷಗಳ ಬಳಿಕ ಪಾಕ್ ನೆಲದಲ್ಲಿ ಟೆಸ್ಟ್‌ ಸರಣಿಯನ್ನಾಡಲಿರುವ ಇಂಗ್ಲೆಂಡ್

England Cricketers Land In Pakistan For First Test Series In 17 Years kvn
Author
First Published Nov 27, 2022, 2:24 PM IST

ಇಸ್ಲಾಮಾಬಾದ್‌(ನ.27): ಇಂಗ್ಲೆಂಡ್‌ ತಂಡವು ಮೂರು ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲು ಭಾನುವಾರ ಬೆಳಗ್ಗೆ ಪಾಕಿಸ್ತಾನಕ್ಕೆ ಬಂದಿಳಿದೆ. ಬರೋಬ್ಬರಿ 2005ರ ಬಳಿಕ ಇದೇ ಮೊದಲ ಬಾರಿಗೆ ಇಂಗ್ಲೆಂಡ್‌ ತಂಡವು ಪಾಕಿಸ್ತಾನಕ್ಕೆ ಟೆಸ್ಟ್‌ ಸರಣಿಯನ್ನಾಡಲು ಬಂದಿಳಿದಿದೆ. ಕಳೆದೆರಡು ತಿಂಗಳ ಹಿಂದಷ್ಟೇ ಪಾಕಿಸ್ತಾನ ನೆಲದಲ್ಲಿ ಟಿ20 ಸರಣಿಯನ್ನಾಡಿದ್ದ, ಇದೀಗ ಬರೋಬ್ಬರಿ 17 ವರ್ಷಗಳ ಟೆಸ್ಟ್ ಸರಣಿಯನ್ನಾಡಲು ಇಂಗ್ಲೆಂಡ್‌ಗೆ ಬಂದಿಳಿದಿದೆ.

ಕಳೆದ ವರ್ಷ ಕೂಡಾ ಇಂಗ್ಲೆಂಡ್ ತಂಡವು ಪಾಕಿಸ್ತಾನ ಪ್ರವಾಸ ಕೈಗೊಳ್ಳಬೇಕಿತ್ತು. ಆದರೆ ಇದಕ್ಕೂ ಮೊದಲು ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ನ್ಯೂಜಿಲೆಂಡ್ ತಂಡವು ಭದ್ರತೆಯ ನೆಪವೊಡ್ಡಿ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿತ್ತು. ಇದರ ಬೆನ್ನಲ್ಲೇ ಇಂಗ್ಲೆಂಡ್ ತಂಡವು ಕೂಡಾ ಪಾಕಿಸ್ತಾನ ಪ್ರವಾಸ ಮಾಡುವದರಿಂದ ಹಿಂದೆ ಸರಿದಿತ್ತು.

ಇನ್ನು ಈ ತಿಂಗಳಾರಂಭದಲ್ಲೇ ವಜೀರಾಬಾದ್‌ನಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್ ಮೇಲೆ ದಾಳಿಯಾಗಿತ್ತು. ಇದರ ಬೆನ್ನಲ್ಲೇ ಮತ್ತೊಮ್ಮೆ ಇಂಗ್ಲೆಂಡ್ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆಯೇ ಎನ್ನುವ ಅನುಮಾನ ಸೃಷ್ಟಿಯಾಗಿತ್ತು. ಆದರೆ ಈ ಎಲ್ಲಾ ಗಾಳಿಸುದ್ದಿಗಳನ್ನು ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್‌ ತಳ್ಳಿ ಹಾಕಿದ್ದರು. 

Ind vs NZ: ಭಾರತ-ನ್ಯೂಜಿಲೆಂಡ್ ನಡುವಿನ ಎರಡನೇ ಒನ್‌ ಡೇ ಮಳೆಯಿಂದ ರದ್ದು..!

ಸಾಕಷ್ಟು ದೀರ್ಘಕಾಲದ ಬಳಿಕ ಇಂಗ್ಲೆಂಡ್ ತಂಡವು ಪಾಕಿಸ್ತಾನದಲ್ಲಿ ಟೆಸ್ಟ್‌ ಆಡುತ್ತಿದೆ. ಇಮ್ರಾನ್ ಖಾನ್ ಅವರ ಮೇಲಿನ ದಾಳಿಯು ನಮ್ಮಲ್ಲೂ ಕೊಂಚ ಆತಂಕಕ್ಕೀಡಾಗುವಂತೆ ಮಾಡಿತ್ತು. ಆದರೆ ನಮ್ಮ ತಂಡದ ಜತೆ ರೆಗ್ ಡಿಕ್ಸನ್‌ ಇದ್ದಾರೆ. ಇವರು ತುಂಬಾ ವರ್ಷಗಳಿಂದ ಇಂಗ್ಲೆಂಡ್ ತಂಡದ ಭದ್ರತಾ ಪಡೆಯ ನೇತೃತ್ವ ವಹಿಸಿಕೊಂಡಿದ್ದಾರೆ, ನಾವು ಅವರ ಅಭಯ ಹಸ್ತದಲ್ಲಿದ್ದೇವೆ ಎಂದು ಬೆನ್ ಸ್ಟೋಕ್ಸ್‌ ಹೇಳಿದ್ದಾರೆ.

ಶ್ರೀಲಂಕಾ ತಂಡವು 2009ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದಾಗ ಲಾಹೋರ್‌ನ ಗಢಾಪಿ ಸ್ಟೇಡಿಯಂ ಸಮೀಪ ಲಂಕಾ ಆಟಗಾರರಿದ್ದ ಬಸ್‌ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದ್ದರು. ಇದಾದ ಬಳಿಕ ಹಲವು ರಾಷ್ಟ್ರಗಳು ಪಾಕಿಸ್ತಾನ ಪ್ರವಾಸ ಮಾಡಲು ಹಿಂದೇಟು ಹಾಕುತ್ತಿವೆ. ಹೀಗಾಗಿ 2009ರಿಂದೀಚಗೆ ಯಾವುದೇ ಬಹುರಾಷ್ಟ್ರೀಯ ಕ್ರಿಕೆಟ್ ಸರಣಿಗಳು ಪಾಕಿಸ್ತಾನದಲ್ಲಿ ಜರುಗಿಲ್ಲ.

ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯು ಟೆಸ್ಟ್‌ ಚಾಂಪಿಯನ್‌ ಭಾಗವಾಗಿದ್ದು, ಡಿಸೆಂಬರ್ 01ರಿಂದ ರಾವಲ್ಪಿಂಡಿಯಲ್ಲಿ ಆರಂಭವಾಗಲಿದೆ. ಡಿಸೆಂಬರ್ 09ರಂದು ಮುಲ್ತಾನ್‌ ಹಾಗೂ ಡಿಸೆಂಬರ್ 17ರಂದು ಕರಾಚಿಯಲ್ಲಿ ಮೂರನೇ ಟೆಸ್ಟ್‌ ಪಂದ್ಯವನ್ನಾಡಲಿದೆ.

ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡ ಹೀಗಿದೆ ನೋಡಿ:

ಬೆನ್ ಸ್ಟೋಕ್ಸ್‌(ನಾಯಕ), ಜೇಮ್ಸ್‌ ಆಂಡರ್‌ಸನ್, ಹ್ಯಾರಿ ಬ್ರೂಕ್, ಜಾಕ್‌ ಕ್ರಾವ್ಲಿ, ಬೆನ್ ಡಕೆಟ್‌, ಬೆನ್ ಫೋಕ್ಸ್, ವಿಲ್‌ ಜೇಕ್ಸ್‌, ಕೇಟನ್‌ ಜೆನ್ನಿಂಗ್ಸ್‌, ಜಾಕ್ ಲೀಚ್, ಲಿಯಾಮ್‌ ಲಿವಿಂಗ್‌ಸ್ಟೋನ್‌, ಜೆಮಿ ಓವರ್‌ಟನ್, ಓಲಿ ಪೋಪ್, ಓಲಿ ರಾಬಿನ್‌ಸನ್‌, ಜೋ ರೂಟ್‌, ಮಾರ್ಕ್‌ ವುಡ್‌, ರೆಹನ್‌ ಅಹಮನ್‌.

Follow Us:
Download App:
  • android
  • ios