ಶ್ರೀಲಂಕಾ ವಿರುದ್ದದ ಸರಣಿಯಿಂದ ಹೊರಬಿದ್ದ ಜೋಸ್ ಬಟ್ಲರ್
* ಲಂಕಾ ಎದುರಿನ ಸೀಮಿತ ಓವರ್‌ಗಳ ಸರಣಿಯಿಂದ ಹೊರಬಿದ್ದ ಜೋಸ್ ಬಟ್ಲರ್
* ಮೀನಖಂಡ ನೋವಿನಿಂದ ಬಳಲುತ್ತಿರುವ ಜೋಸ್ ಬಟ್ಲರ್
* ಜೋಸ್ ಬಟ್ಲರ್ ಬದಲಿಗೆ ಡೇವಿಡ್ ಮಲಾನ್‌ಗೆ ಇಂಗ್ಲೆಂಡ್ ತಂಡದಲ್ಲಿ ಸ್ಥಾನ
ಲಂಡನ್(ಜೂ.26): ಶ್ರೀಲಂಕಾ ವಿರುದ್ದದ ಇನ್ನುಳಿದ ಸೀಮಿತ ಓವರ್‌ಗಳ ಪಂದ್ಯಗಳಿಗೆ ಮೀನಖಂಡ ನೋವಿಗೆ ಒಳಗಾಗಿರುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಇಂಗ್ಲೆಂಡ್ ಕ್ರಿಕೆಟ್ ತಂಡದಿಂದ ಹೊರಬಿದ್ದಿದ್ದಾರೆ.
ಇಂಗ್ಲೆಂಡ್ ತಂಡದ ಸ್ಟಾರ್ ಜೋಸ್ ಬಟ್ಲರ್, ಲಂಕಾ ವಿರುದ್ದದ ಮೊದಲ ಟಿ20 ಪಂದ್ಯದ ವೇಳೆ ಗಾಯಗೊಂಡಿದ್ದರು. ಕಾರ್ಡಿಫ್‌ನಲ್ಲಿ ಹೆಚ್ಚಿನ ಚಿಕಿತ್ಸೆ ನಡೆಸಿದಾಗ ಸಣ್ಣದಾಗಿ ಗಾಯದ ತೀವ್ರತೆ ಬೆಳಕಿಗೆ ಬಂದಿದೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇಂಗ್ಲೆಂಡ್ ಸರಣಿ ಮುನ್ನ ಭಾರತಕ್ಕೆ 2 ಅಭ್ಯಾಸ ಪಂದ್ಯ
ಸೋಫಿಯಾ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಜೋಸ್ ಬಟ್ಲರ್ ಅಜೇಯ 68 ರನ್ ಚಚ್ಚುವ ಮೂಲಕ ಲಂಕಾ ಎದುರು ಇಂಗ್ಲೆಂಡ್ ತಂಡ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಪಂದ್ಯದ ವೇಳೆ ಜೋಸ್ ಬಟ್ಲರ್ ಕೊಂಚ ಆಯಾಸಗೊಂಡಿದ್ದರು. ಮುಂಬರುವ ಏಕದಿನ ಸರಣಿಗೆ ಡೇವಿಡ್ ಮಲಾನ್ ತಂಡ ಕೂಡಿಕೊಂಡಿದ್ದಾರೆ.
ಲಂಕಾ ವಿರುದ್ಧ ಟಿ20 ಸರಣಿ ಗೆದ್ದ ಇಂಗ್ಲೆಂಡ್
ಕಾರ್ಡಿಫ್: ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಡಕ್ವರ್ತ್ ಲೂಯಿಸ್ ನಿಯಮದನ್ವಯ 5 ವಿಕೆಟ್‌ಗಳ ಗೆಲುವು ಸಾಧಿಸಿ, 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆಯೊಂದಿಗೆ ಸರಣಿ ವಶಪಡಿಸಿಕೊಂಡಿದೆ.
ಮೊದಲು ಬ್ಯಾಟ್ ಮಾಡಿದ ಲಂಕಾ, 20 ಓವರಲ್ಲಿ 7 ವಿಕೆಟ್‌ಗೆ 111 ರನ್ ಗಳಿಸಿತು. ಇಂಗ್ಲೆಂಡ್ ಇನ್ನಿಂಗ್ಸ್ ವೇಳೆ ಮಳೆ ಸುರಿದ ಕಾರಣ, ಡಕ್ವತ್‌ರ್ ನಿಯಮ ಅಳವಡಿಸಿ 18 ಓವರಲ್ಲಿ 103 ರನ್ ಗುರಿ ನೀಡಲಾಯಿತು. ಇಂಗ್ಲೆಂಡ್ 16.1 ಓವರಲ್ಲಿ ಗುರಿ ತಲುಪಿತು.
ಸ್ಕೋರ್: ಲಂಕಾ 111/7, ಇಂಗ್ಲೆಂಡ್ 108/5