ಟಿ20: ಪಾಕ್ ವಿರುದ್ಧ ಇಂಗ್ಲೆಂಡ್ಗೆ ಸರಣಿ ಜಯ
* ಪಾಕಿಸ್ತಾನ ಎದುರು ಟಿ20 ಸರಣಿ ಜಯಿಸಿದ ಇಂಗ್ಲೆಂಡ್
* ನಿರ್ಣಾಯಕ ಪಂದ್ಯದಲ್ಲಿ ಇಂಗ್ಲೆಂಡ್ಗೆ 3 ವಿಕೆಟ್ಗಳ ರೋಚಕ ಜಯ
* 2-1 ಅಂತರದಲ್ಲಿ ಟಿ20 ಸರಣಿ ಇಂಗ್ಲೆಂಡ್ ಪಾಲು
ಮ್ಯಾಂಚೆಸ್ಟರ್(ಜು.22): ಪಾಕಿಸ್ತಾನ ವಿರುದ್ಧ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ 3 ವಿಕೆಟ್ ಗೆಲುವು ಸಾಧಿಸಿದ ಇಂಗ್ಲೆಂಡ್ ಕ್ರಿಕೆಟ್ ತಂಡವು 3 ಪಂದ್ಯಗಳ ಸರಣಿಯನ್ನು 2-1ರಲ್ಲಿ ತನ್ನದಾಗಿಸಿಕೊಂಡಿತು.
ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 20 ಓವರಲ್ಲಿ 6 ವಿಕೆಟ್ಗೆ 154 ರನ್ ಗಳಿಸಿತು. ಮೊಹಮದ್ ರಿಜ್ವಾನ್ 76 ರನ್ ಗಳಿಸಿದರು. ಜೇಸನ್ ರಾಯ್(61)ರ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ 2 ಎಸೆತ ಬಾಕಿ ಇರುವಂತೆ 7 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.
ಸ್ಕೋರ್: ಪಾಕಿಸ್ತಾನ 154/6, ಇಂಗ್ಲೆಂಡ್ 155/7
ಏಕದಿನ: ವಿಂಡೀಸ್ ವಿರುದ್ಧ ಗೆದ್ದ ಆಸೀಸ್
ಬ್ರಿಡ್ಜ್ಟೌನ್: ಮಿಚೆಲ್ ಸ್ಟಾರ್ಕ್(5-48) ಹಾಗೂ ಜೋಶ್ ಹೇಜಲ್ವುಡ್(3-11) ಮಾರಕ ದಾಳಿಗೆ ತತ್ತರಿಸಿದ ವೆಸ್ಟ್ಇಂಡೀಸ್ 123 ರನ್ಗಳಿಗೆ ಆಲೌಟ್ ಆದ ಕಾರಣ, ಆಸ್ಪ್ರೇಲಿಯಾ ಮೊದಲ ಏಕದಿನ ಪಂದ್ಯದಲ್ಲಿ 133 ರನ್ಗಳ ಗೆಲುವು ಸಾಧಿಸಿತು.
ಅಭ್ಯಾಸ ಪಂದ್ಯ: ಉಮೇಶ್-ಸಿರಾಜ್ ಬೌಲಿಂಗ್ ಝಲಕ್ ಭಾರತ ಮೇಲುಗೈ
257 ರನ್ ಗುರಿ ಬೆನ್ನತ್ತಿದ್ದ ವಿಂಡೀಸ್ 8ನೇ ಓವರಲ್ಲಿ 27 ರನ್ಗೆ 6 ವಿಕೆಟ್ ಕಳೆದುಕೊಂಡಿತ್ತು. ನಾಯಕ ಪೊಲ್ಲಾರ್ಡ್(56) ಹೋರಾಟದಿಂದ ತಂಡ 120 ರನ್ ದಾಟಿತು. ಮಳೆಯಿಂದಾಗಿ ಪಂದ್ಯವನ್ನು 49 ಓವರ್ಗೆ ಇಳಿಸಲಾಗಿತ್ತು. ಆಸ್ಪ್ರೇಲಿಯಾ 9 ವಿಕೆಟ್ಗೆ 252 ರನ್ ಗಳಿಸಿತು. ಡಕ್ವರ್ತ್ ಲೂಯಿಸ್ ನಿಯಮದನ್ವಯ ವಿಂಡೀಸ್ಗೆ 49 ಓವರಲ್ಲಿ 257 ರನ್ ಗುರಿ ನೀಡಲಾಗಿತ್ತು.