* ಭಾರತ ವಿರುದ್ದದ ಸರಣಿಗೆ 17 ಆಟಗಾರ ಇಂಗ್ಲೆಂಡ್ ತಂಡ ಪ್ರಕಟ* ಭಾರತ ಹಾಗೂ ಇಂಗ್ಲೆಂಡ್ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ* ಟೆಸ್ಟ್ ತಂಡ ಕೂಡಿಕೊಂಡ ಬಟ್ಲರ್, ಬೆನ್‌ ಸ್ಟೋಕ್ಸ್

ಲಂಡನ್(ಜು.21): ಭಾರತ ವಿರುದ್ದ ಆಗಸ್ಟ್ 04ರಿಂದ ಆರಂಭವಾಗಲಿರುವ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಕಟವಾಗಿದ್ದು, ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಹಾಗೂ ವೇಗಿ ಓಲಿ ರಾಬಿನ್ಸನ್‌ ತಂಡ ಕೂಡಿಕೊಂಡಿದ್ದಾರೆ. ಆದರೆ ಮತ್ತೋರ್ವ ಮಾರಕ ವೇಗಿ ಜೋಫ್ರಾ ಆರ್ಚರ್ ಮತ್ತೊಮ್ಮೆ ತಂಡದಿಂದ ಹೊರಗುಳಿದಿದ್ದಾರೆ.

ಜೋಫ್ರಾ ಆರ್ಚರ್‌ ಭಾರತ ವಿರುದ್ದದ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಳ್ಳುವಷ್ಟು ಸಂಪೂರ್ಣವಾಗಿ ಫಿಟ್‌ ಆಗಿಲ್ಲ. ಇನ್ನು ಮತ್ತೋರ್ವ ವೇಗಿ ಕ್ರಿಸ್ ವೋಕ್ಸ್‌ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ತಂಡದಲ್ಲಿ ಸ್ಥಾನ ಪಡೆದಿಲ್ಲವಾದರೂ ಇನ್ನುಳಿದ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡ ಕೂಡಿಕೊಳ್ಳುವ ಸುಳಿವನ್ನು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್ ಮಂಡಳಿ ನೀಡಿದೆ.

ಅಭ್ಯಾಸ ಪಂದ್ಯ: ಕೆ.ಎಲ್‌. ರಾಹುಲ್ ಆಕರ್ಷಕ ಶತಕ

ಇನ್ನು ಇಂಗ್ಲೆಂಡ್ ಪ್ರಕಟಿಸಿದ 17 ಆಟಗಾರರ ತಂಡದಲ್ಲಿ ವೇಗಿ ಓಲಿ ರಾಬಿನ್ಸನ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 2012ರಲ್ಲಿ ಮಾಡಿದ ಜನಾಂಗೀಯ ಟ್ವೀಟ್‌ಗಾಗಿ 8 ಪಂದ್ಯಗಳ ಮಟ್ಟಿಗೆ ನಿಷೇಧಕ್ಕೆ ಗುರಿಯಾಗಿದ್ದ ಬಲಗೈ ಇದೀಗ ಭಾರತ ವಿರುದ್ದ ಸರಣಿಯಲ್ಲಿ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜೋಸ್‌ ಬಟ್ಲರ್, ಜಾನಿ ಬೇರ್‌ಸ್ಟೋವ್‌ ಹಾಗೂ ಸ್ಯಾಮ್‌ ಕರ್ರನ್‌ ಕೂಡಾ ಟೆಸ್ಟ್‌ ತಂಡಕ್ಕೆ ಕಮ್‌ಬ್ಯಾಕ್‌ ಮಾಡುವಲ್ಲಿ ಯಶಸ್ವಿಯಾಗಿದ್ದರು. 

Scroll to load tweet…

ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಆಗಸ್ಟ್ 04ರಿಂದ ಟ್ರೆಂಟ್‌ ಬ್ರಿಡ್ಜ್‌ನಲ್ಲಿ ಆರಂಭವಾಗಲಿದೆ. ಇದಾದ ಬಳಿಕ ಆಗಸ್ಟ್ 12ರಿಂದ ಲಾರ್ಡ್ಸ್‌ ಮೈದಾನದಲ್ಲಿ ಎರಡನೇ ಟೆಸ್ಟ್ ಪಂದ್ಯವು ಆರಂಭವಾಗಲಿದೆ.

ಭಾರತ ವಿರುದ್ದದ ಮೊದಲೆರಡು ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಹೀಗಿದೆ ನೋಡಿ:

ಜೋ ರೂಟ್(ನಾಯಕ), ಜೇಮ್ಸ್ ಆಂಡರ್‌ಸನ್, ಜಾನಿ ಬೇರ್‌ಸ್ಟೋವ್, ಡಾಮ್ ಬೆಸ್‌, ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್‌, ಜೋಸ್ ಬಟ್ಲರ್, ಜಾಕ್ ಕ್ರಾವ್ಲೆ, ಸ್ಯಾಮ್ ಕರ್ರನ್‌, ಹಸೀಬ್‌ ಹಮ್ಮೀದ್, ಡೇನಿಯಲ್ ಲಾರೆನ್ಸ್, ಜಾಕ್ ಲೀಚ್, ಓಲಿ ಪೋಪ್‌, ಓಲಿ ರಾಬಿನ್ಸನ್‌, ಡಾಮ್ ಸಿಬ್ಲೆ, ಬೆನ್ ಸ್ಟೋಕ್ಸ್, ಮಾರ್ಕ್‌ ವುಡ್.