Asianet Suvarna News Asianet Suvarna News

Eng vs NZ ಫಾಲೋ-ಆನ್‌ಗೆ ತುತ್ತಾದರೂ 1 ರನ್‌ನಿಂದ ಗೆದ್ದ ನ್ಯೂಜಿಲೆಂಡ್..!

ಇಂಗ್ಲೆಂಡ್ ಎದುರು ಎರಡನೇ ಟೆಸ್ಟ್‌ನಲ್ಲಿ ರೋಚಕ ಜಯ ಸಾಧಿಸಿದ ನ್ಯೂಜಿಲೆಂಡ್ ತಂಡ
ಕೇವಲ ಒಂದು ರನ್ ಅಂತರದ ರೋಚಕ ಜಯ ಸಾಧಿಸಿದ ಟಿಮ್ ಸೌಥಿ ಪಡೆ
ಫಾಲೋ-ಆನ್‌ ಮೆಟ್ಟಿನಿಂತು ಗೆಲುವಿನ ಕೇಕೆ ಹಾಕಿದ ಆತಿಥೇಯರು

Eng vs NZ New Zealand Beat England By 1 Run Level Test Series kvn
Author
First Published Mar 1, 2023, 10:28 AM IST

ವೆಲ್ಲಿಂಗ್ಟ​ನ್‌(ಮಾ.01): ಇಂಗ್ಲೆಂಡ್‌ ವಿರು​ದ್ಧದ 2ನೇ ಟೆಸ್ಟ್‌​ನಲ್ಲಿ ಫಾಲೋ-ಆನ್‌ಗೆ ತುತ್ತಾಗಿ ಸೋಲಿನ ಭೀತಿ​ಗೊ​ಳ​ಗಾ​ಗಿ​ದ್ದರೂ ನ್ಯೂಜಿ​ಲೆಂಡ್‌ ಅಧ್ಬುತ ರೀತಿ​ಯಲ್ಲಿ ಕಮ್‌​ಬ್ಯಾಕ್‌ ಮಾಡಿ 1 ರನ್‌​ ರೋಚ​ಕ ಗೆಲುವು ಸಾಧಿ​ಸಿದೆ. ಇದ​ರೊಂದಿಗೆ 2 ಪಂದ್ಯ​ಗಳ ಸರ​ಣಿ​ 1-1ರಿಂದ ಸಮ​ಬ​ಲ​ಗೊಂಡಿತು.

ಗೆಲು​ವಿಗೆ 258 ರನ್‌ ಗುರಿ ಪಡೆ​ದಿದ್ದ ಇಂಗ್ಲೆಂಡ್‌ 4ನೇ ದಿನ 1ಕ್ಕೆ 48 ರನ್‌ ಗಳಿ​ಸಿತ್ತು. ಕೊನೆ ದಿನ ಕೊನೆ​ವ​ರೆಗೆ ಹೋರಾ​ಡಿ​ದರೂ ವೀರೋ​ಚಿತ ಸೋಲು ಕಂಡಿತು. 80ಕ್ಕೆ 5 ವಿಕೆಟ್‌ ಕಳೆ​ದು​ಕೊಂಡರೂ ರೂಟ್‌(95)-ಬೆನ್‌ ಸ್ಟೋಕ್ಸ್‌(33) 6ನೇ ವಿಕೆ​ಟ್‌ಗೆ 121 ರನ್‌ ಜೊತೆ​ಯಾ​ಟ​ವಾಡಿ ತಂಡ​ವನ್ನು ಗೆಲು​ವಿ​ನತ್ತ ಕೊಂಡೊ​ಯ್ದರು. ಕೊನೆ​ಯಲ್ಲಿ ಬೆನ್‌ ಫೋಕ್ಸ್‌ 35 ರನ್‌ ಸಿಡಿ​ಸಿ​ದರೂ ತಂಡಕ್ಕೆ ಜಯ ದಕ್ಕ​ಲಿ​ಲ್ಲ. 2 ರನ್‌ ಬೇಕಿ​ದ್ದಾಗ ವ್ಯಾಗ್ನರ್‌ ಎಸೆ​ತ​ದಲ್ಲಿ ಆ್ಯಂಡ​ರ್‌​ಸನ್‌ ವಿಕೆ​ಟ್‌​ಕೀ​ಪರ್‌ ಬ್ಲಂಡೆ​ಲ್‌ಗೆ ಕ್ಯಾಚ್‌ ನೀಡು​ವು​ದ​ರೊಂದಿಗೆ ಕಿವೀಸ್‌ ಜಯ​ಸಾ​ಧಿ​ಸಿ​ತು ವ್ಯಾಗ್ನರ್‌ 4 ವಿಕೆಟ್‌ ಕಿತ್ತ​ರು. ಇಂಗ್ಲೆಂಡ್‌ ಮೊದಲ ಇನ್ನಿಂಗ್‌್ಸ​ನಲ್ಲಿ 8ಕ್ಕೆ 435 ರನ್‌ ಗಳಿಸಿ ಡಿಕ್ಲೇರ್‌ ಮಾಡಿ​ಕೊಂಡಿತ್ತು. ಬಳಿಕ ಕಿವೀಸ್‌ ಕೇವಲ 209ಕ್ಕೆ ಆಲೌ​ಟಾಗಿ ಫಾಲೋ-ಆನ್‌ಗೆ ತುತ್ತಾಗಿ, 2ನೇ ಇನ್ನಿಂಗ್‌್ಸ​ನಲ್ಲಿ 483ಕ್ಕೆ ಆಲೌ​ಟಾ​ಯಿತು.

1 ರನ್‌ ಗೆಲು​ವು: ಕಿವೀಸ್‌ 2ನೇ ತಂಡ

ಟೆಸ್ಟ್‌​ನಲ್ಲಿ ತಂಡ​ವೊಂದು 1 ರನ್‌ನಿಂದ ಗೆಲುವು ಸಾಧಿ​ಸಿದ್ದು ಇದು 2ನೇ ಬಾರಿ. ಈ ಮೊದಲು 30 ವರ್ಷ​ಗಳ ಹಿಂದೆ ಅಂದರೆ 1993ರಲ್ಲಿ ಆಸ್ಪ್ರೇ​ಲಿ​ಯಾ​ವನ್ನು ವೆಸ್ಟ್‌​ಇಂಡೀಸ್‌ 1 ರನ್‌​ನಿಂದ ಮಣಿ​ಸಿ​ತ್ತು.

ಫಾಲೋ​ಆ​ನ್‌ ಬಳಿ​ಕ ಗೆದ್ದ 3ನೇ ತಂಡ ಕಿವೀ​ಸ್‌

ಫಾಲೋ-ಆನ್‌ಗೆ ಗುರಿ​ಯಾದರೂ ಪಂದ್ಯ ಗೆದ್ದಿದ್ದು ಇದು 4ನೇ ಬಾರಿ. ಈ ಪೈಕಿ ಇಂಗ್ಲೆಂಡ್‌ 2 ಬಾರಿ ಸಾಹಸ ಮಾಡಿ​ದೆ. 1894 ಹಾಗೂ 1981ರಲ್ಲಿ ಆಸೀಸ್‌ ವಿರುದ್ಧ ಇಂಗ್ಲೆಂಡ್‌ ಕ್ರಮ​ವಾಗಿ 10 ಹಾಗೂ 18 ರನ್‌ ಗೆಲುವು ಸಾಧಿ​ಸಿತ್ತು. 2001ರಲ್ಲಿ ಭಾರತ ತಂಡ ಆಸೀಸ್‌ ವಿರುದ್ಧ ಫಾಲೋ-ಆನ್‌ಗೆ ತುತ್ತಾ​ದರೂ 171 ರನ್‌ ಜಯ​ಗ​ಳಿ​ಸಿತ್ತು.

ಹೇಗಿತ್ತು ಎರಡನೇ ಟೆಸ್ಟ್ ಪಂದ್ಯ

ವೆಲ್ಲಿಂಗ್ಟನ್‌ನಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡವು ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತ್ತು. ಬಜ್‌ಬಾಲ್ ಶೈಲಿ ಅಳವಡಿಸಿಕೊಂಡಿರುವ ಬೆನ್ ಸ್ಟೋಕ್ಸ್‌ ನೇತೃತ್ವದ ಇಂಗ್ಲೆಂಡ್ ತಂಡವು ಹ್ಯಾರಿ ಬ್ರೂಕ್(186) ಹಾಗೂ ಮಾಜಿ ನಾಯಕ ಜೋ ರೂಟ್ 158* ಬಾರಿಸಿದ ಅಮೋಘ ಶತಕಗಳ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್ ಕಳೆದುಕೊಂಡು 435 ರನ್‌ಗಳಿಸಿ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿತು. ಇನ್ನು ಮೊದಲ ಇನಿಂಗ್ಸ್‌ ಆರಂಭಿಸಿದ ಆತಿಥೇಯ ನ್ಯೂಜಿಲೆಂಡ್ ತಂಡವು ಸ್ಟುವರ್ಟ್‌ ಬ್ರಾಡ್‌ ಹಾಗೂ ಜೇಮ್ಸ್‌ ಆಂಡರ್‌ಸನ್‌ ಮಾರಕ ದಾಳಿಗೆ ತತ್ತರಿಸಿ ಕೇವಲ 209 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ನ್ಯೂಜಿಲೆಂಡ್‌ ತಂಡವು 226 ರನ್‌ಗಳ ಬೃಹತ್ ಹಿನ್ನಡೆ ಅನುಭವಿಸಿದ್ದರಿಂದ ಇಂಗ್ಲೆಂಡ್ ತಂಡವು ಆತಿಥೇಯರ ಮೇಲೆ ಫಾಲೋ ಆನ್ ಹೇರಿತು.

Eng vs NZ: ಕಿವೀಸ್‌ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಕೇನ್‌ ವಿಲಿಯಮ್ಸನ್‌..!

ಭಾರೀ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್‌ಗೆ ಮಾಜಿ ನಾಯಕ ಕೇನ್ ವಿಲಿಯಮ್ಸನ್‌ ಆಕರ್ಷಕ ಶತಕ(132), ಆರಂಭಿಕರಾದ ಟಾಮ್ ಲೇಥಮ್(83), ಡೆವೊನ್ ಕಾನ್‌ವೇ(61), ಡೇರಲ್ ಮಿಚೆಲ್(54) ಹಾಗೂ ಟಾಮ್ ಬ್ಲಂಡೆಲ್(90) ಅವರ ಕೆಚ್ಚೆದೆಯ ಅರ್ಧಶತಕಗಳ ನೆರವಿನಿಂದ 483 ರನ್‌ ಬಾರಿಸಿ ಸರ್ವಪತನ ಕಂಡಿತು. ಈ ಮೂಲಕ ಇಂಗ್ಲೆಂಡ್‌ಗೆ ಎರಡನೇ ಟೆಸ್ಟ್ ಗೆಲ್ಲಲು 258 ರನ್‌ಗಳ ಗುರಿ ನೀಡಿತು. ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ಜೋ ರೂಟ್(95) ಶತಕ ವಂಚಿತ ಬ್ಯಾಟಿಂಗ್ ಹೊರತಾಗಿಯೂ 256 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ರೋಚಕ ಸೋಲು ಅನುಭವಿಸಿತು.

Follow Us:
Download App:
  • android
  • ios