Asianet Suvarna News Asianet Suvarna News

ಪಂದ್ಯ ಮುಗಿದ ಬಳಿಕ ಡಗೌಟ್ ಸ್ವಚ್ಚಗೊಳಿಸಿದ ಎಲೈಸಿ ಪೆರ್ರಿ..! ನೆಟ್ಟಿಗರ ಮನಗೆದ್ದ ಆರ್‌ಸಿಬಿ ಆಟಗಾರ್ತಿ

* ಡಗೌಟ್ ಸ್ವಚ್ಚಗೊಳಿಸಿ ಗಮನ ಸೆಳೆದ ಎಲೈಸಿ ಪೆರ್ರಿ
* ಎಲೈಸಿ ಪೆರ್ರಿ ಆಸ್ಟ್ರೇಲಿಯಾ ಮೂಲದ ಆರ್‌ಸಿಬಿ ಆಟಗಾರ್ತಿ
* ಯುಪಿ ವಾರಿಯರ್ಸ್‌ ಎದುರು ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಆರ್‌ಸಿಬಿ

Ellyse Perry cleans RCB dugout after conclusion of Womens Premier League match pictures go viral kvn
Author
First Published Mar 15, 2023, 3:53 PM IST

ಮುಂಬೈ(ಮಾ.15): ಚೊಚ್ಚಲ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್ ಲೀಗ್ ಟೂರ್ನಿಯು ಮುಂಬೈನಲ್ಲಿ ಭರ್ಜರಿಯಾಗಿಯೇ ಸಾಗುತ್ತಿದೆ. 5 ತಂಡಗಳು ಪ್ರಶಸ್ತಿಗಾಗಿ ಕಾದಾಡುತ್ತಿವೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್‌ ತಂಡವು ಟೂರ್ನಿಯಲ್ಲಿ ಸತತ 5 ಗೆಲುವು ದಾಖಲಿಸುವ ಮೂಲಕ ಈಗಾಗಲೇ ಪ್ಲೇ ಆಫ್‌ಗೆ ಲಗ್ಗೆಯಿಟ್ಟಿದೆ. ಮುಂಬೈ ಇಂಡಿಯನ್ಸ್‌ ತಂಡವು 5 ಪಂದ್ಯಗಳಿಂದ 10 ಅಂಕಗಳ ಸಹಿತ ಮೊದಲ ಸ್ಥಾನದಲ್ಲಿದೆ. ಇನ್ನೊಂದೆಡೆ ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಆಡಿದ 5 ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ ತೀವ್ರ ನಿರಾಸೆ ಅನುಭವಿಸಿದೆ.

ಹೌದು, ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಇನ್ನೊಂದು ಪಂದ್ಯ ಸೋತರೂ ಅಧಿಕೃತವಾಗಿ ಚೊಚ್ಚಲ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್ ಲೀಗ್ ಟೂರ್ನಿಯ ಪ್ಲೇ ಆಫ್‌ ರೇಸ್‌ನಿಂದ ಹೊರಬೀಳಲಿದೆ. ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಲ್ಲಿನ ಡಿವೈ ಪಾಟೀಲ್ ಮೈದಾನದಲ್ಲಿ ಯುಪಿ ವಾರಿಯರ್ಸ್‌ ತಂಡವನ್ನು ಎದುರಿಸಲಿದ್ದು, ಈ ಪಂದ್ಯದಲ್ಲಿನ ಸೋಲು, ಗೆಲುವು ಆರ್‌ಸಿಬಿ ಪ್ಲೇ ಆಫ್‌ ಹಾದಿಯ ಕುರಿತಂತೆ ಮಹತ್ತರ ತಿರುವು ಸಿಗಲಿದೆ

ಇನ್ನು ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಇಲ್ಲಿಯವರೆಗೆ ಒಂದೇ ಒಂದು ಪಂದ್ಯವನ್ನು ಗೆಲ್ಲದೇ ಹೋದರೂ, ಅವರ ಅಭಿಮಾನಿಗಳ ಸಂಖ್ಯೆ ಹಾಗೂ ಬೆಂಬಲ ಕಡಿಮೆಯಾಗಿಲ್ಲ. ಆರ್‌ಸಿಬಿ ತಂಡದಲ್ಲಿ ನಾಯಕಿ ಸ್ಮೃತಿ ಮಂಧನಾ ಮಾತ್ರವಲ್ಲದೇ, ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್, ರೇಣುಕಾ ಸಿಂಗ್ ಠಾಕೂರ್, ಶ್ರೇಯಾಂಕ ಪಾಟೀಲ್, ಇಂಗ್ಲೆಂಡ್‌ ನಾಯಕಿ ಹೀಥರ್ ನೈಟ್‌, ನ್ಯೂಜಿಲೆಂಡ್ ಬ್ಯಾಟರ್ ಸೋಫಿ ಡಿವೈನ್, ಆಸ್ಟ್ರೇಲಿಯಾದ ಆಲ್ರೌಂಡರ್ ಎಲೈಸಿ ಪೆರ್ರಿ ಅವರಂತಹ ಆಟಗಾರ್ತಿಯರನ್ನು ಆರ್‌ಸಿಬಿ ಅಭಿಮಾನಿಗಳು ಬೆಂಬಲಿಸಿಕೊಂಡೇ ಬಂದಿದ್ದಾರೆ.

ಹೀಗಿದ್ದೂ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಒಂದು ತಂಡವಾಗಿ ಗೆಲುವು ಸಾಧಿಸಲು ಸಾಧ್ಯವಾಗುತ್ತಿಲ್ಲ.ಕಳೆದ ಸೋಮವಾರ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಸತತ 5ನೇ ಸೋಲು ಕಂಡು ಮುಖಭಂಗ ಅನುಭವಿಸಿದೆ. ಸೋಮವಾರ ಆರ್‌ಸಿಬಿ ಎದುರು ಡೆಲ್ಲಿ ಕ್ಯಾಪಿಟಲ್ಸ್ ತಂಡವು 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಆರ್‌ಸಿಬಿ ಪರ ಎಲೈಸಿ ಪೆರ್ರಿ ಅಜೇಯ 67 ರನ್ ಬಾರಿಸಿದರೂ ಸಹಾ ಬೆಂಗಳೂರು ತಂಡಕ್ಕೆ ಗೆಲುವು ದೊರೆಯಲಿಲ್ಲ.

ಬಾಂಗ್ಲಾದೇಶ ಎದುರು ವೈಟ್‌ವಾಶ್‌ ಅನುಭವಿಸಿದ ಇಂಗ್ಲೆಂಡ್‌..! ಮೈಕಲ್ ವಾನ್‌ ಕಾಲೆಳೆದ ವಾಸೀಂ ಜಾಫರ್‌..!

ಆದರೆ ಡೆಲ್ಲಿ ಎದುರಿನ ಪಂದ್ಯ ಮುಕ್ತಾಯದ ಬಳಿಕ ಆರ್‌ಸಿಬಿ ಆಟಗಾರ್ತಿ ಮಾಡಿದ ಒಂದು ಕಾರ್ಯ ಕ್ರಿಕೆಟ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹೌದು, ಎಲೈಸಿ ಪೆರ್ರಿ, ಆಟಗಾರ್ತಿಯರು ಕೂರುವ ಡಗೌಟ್‌ನಲ್ಲಿ ನೀರಿನ ಬಾಟಲ್‌ಗಳು ಹಾಗೂ ಕಸವನ್ನು ಕಸದ ಬುಟ್ಟಿಗೆ ಹಾಕುವ ಮೂಲಕ ಸ್ವಚ್ಚತೆಗೆ ಒತ್ತು ನೀಡಿದ್ದಾರೆ. ಇದು ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. 
 

Follow Us:
Download App:
  • android
  • ios