Asianet Suvarna News Asianet Suvarna News

ಆಸೀಸ್‌-ಶ್ರೀಲಂಕಾ ಪಂದ್ಯದ ನಡುವೆ ಡಸ್ಟ್‌ ಸ್ಟ್ರೋಮ್‌, ಪ್ರೇಕ್ಷಕರ ಗ್ಯಾಲರಿಯಲ್ಲಿ ಬಿದ್ದ ಹೋರ್ಡಿಂಗ್‌!

ಆಸ್ಟ್ರೇಲಿಯಾದ ಸ್ಟಾರ್‌ಗಳಾದ ಸ್ಟೀವ್ ಸ್ಮಿತ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ದೂರದಿಂದಲೇ ಘಟನೆಯನ್ನು ಸಂಪೂರ್ಣ ಆಘಾತದಿಂದ ನೋಡಿದ್ದರು. ಅದೃಷ್ಟವಶಾತ್ ಯಾವುದೇ ಪ್ರೇಕ್ಷಕರಿಗೆ ಗಾಯಗಳಾಗಿಲ್ಲ.
 

Dust storm during AUS vs SL World Cup 2023 Match  hoardings fall onto stands san
Author
First Published Oct 17, 2023, 12:36 AM IST

ಲಖನೌ (ಅ.16): ವಿಶ್ವಕಪ್‌ ಹೋರಾಟದಲ್ಲಿ ಉಳಿಯಲು ಎರಡೂ ತಂಡಗಳಿಗೆ ಪ್ರಮುಖವಾಗಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಮೇಲುಗೈ ಸಾಧಿಸಿದೆ. ಆದರೆ, ಪಂದ್ಯದ ವೇಳೆ ಭಾರತ ರತ್ನ ಅಟಲ್‌ ಬಿಹಾರಿ ವಾಜಪೇಯಿ ಎಕನಾ ಸ್ಟೇಡಿಯಂನಲ್ಲಿ ಪ್ರೇಕ್ಷಕರ ಭದ್ರತೆಗೆ ಸಂಬಂಧಿಸಿದಂತೆ ಆಘಾತಕಾರಿ ಘಟನೆ ನಡೆದಿದೆ. ಸೋಮವಾರ ನಡೆದ ಪಂದ್ಯದ ವೇಳೆ ಶ್ರೀಲಂಕಾ ಇನ್ನಿಂಗ್ಸ್‌ನ ಕೊನೆಯ ಹಂತದಲ್ಲಿ ಡಸ್ಟ್‌ ಸ್ಟ್ರೋಮ್‌ಪಂದ್ಯಕ್ಕೆ ಅಡ್ಡಿಪಡಿಸಿತು. ಇದರಿಂದಾಗಿ ಪಂದ್ಯ ಕೂಡ ಕೆಲ ಕಾಲ ಸ್ಥಗಿತಗೊಂಡಿತ್ತು. ಶ್ರೀಲಂಕಾ ತಂಡದ ಇನ್ನಿಂಗ್ಸ್‌ನ 43ನೇ ಓವರ್‌ನಲ್ಲಿ ಈ ಘಟನೆ ನಡೆಯಿತು. 9 ವಿಕೆಟ್‌ಗಳ ನಷ್ಟಕ್ಕೆ ಶ್ರೀಲಂಕಾ ತಂಡ 200 ರನ್‌ಗಳ ಗಡಿ ದಾಟಿದ ಬೆನ್ನಲ್ಲಿಯೇ, ಲಕ್ನೋದಲ್ಲಿ ಡಸ್ಟ್‌ ಸ್ಟ್ರೋಮ್‌ ಆರಂಭವಾಗಿತು. ಇದು ಎಷ್ಟು ವೇಗವಾಗಿತ್ತೆಂದರೆ, ಮೈದಾನದ ಅಂಪೈರ್‌ಗಳು ಕೆಲ ಕಾಲ ಪಂದ್ಯವನ್ನು ಸ್ಥಗಿತ ಮಾಡುವ ನಿರ್ಧಾರ ಮಾಡಿದ್ದರು. ಗಾಳಿಯು ಎಷ್ಟು ಪ್ರಬಲವಾಗಿತ್ತೆಂದರೆ, ಲಕ್ನೋ ಕ್ರೀಡಾಂಗಣದ ಮೇಲ್ಛಾವಣಿಗೆ ಜೋಡಿಸಲಾದ ವಿಶ್ವಕಪ್ ಹೋರ್ಡಿಂಗ್‌ಗಳು ಇತರ ವಸ್ತುಗಳ ಜೊತೆಗೆ ಸ್ಟ್ಯಾಂಡ್‌ಗಳ ಮೇಲೆ ಬಿದ್ದವು, ಈ ಹಂತದಲ್ಲಿ ಸ್ಟ್ಯಾಂಡ್‌ನಲ್ಲಿ ಕುಳಿತಿದ್ದ ಪ್ರೇಕ್ಷಕರು ಬೀಳುತ್ತಿದ್ದ ಹೋರ್ಡಿಂಗ್‌ನಿಂದ ತಪ್ಪಿಸಿಕೊಳ್ಳಲು ಓಡಿದ್ದರು.  ಆಸ್ಟ್ರೇಲಿಯಾದ ಸ್ಟಾರ್‌ಗಳಾದ ಸ್ಟೀವ್ ಸ್ಮಿತ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಘಟನೆಯನ್ನು ದೂರದಿಂದಲೇ ನೋಡುತ್ತಿರುವುದನ್ನು ಕ್ಯಾಮೆರಾ ಸೆರೆಹಿಡಿದಿದೆ. ಅದೃಷ್ಟವಶಾತ್ ಯಾವುದೇ ಪ್ರೇಕ್ಷಕರಿಗೆ ಗಾಯಗಳಾಗಿಲ್ಲ.

'ಲಕ್ನೋದ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಬ್ಯಾನರ್‌ಗಳು ಪ್ರೇಕ್ಷಕರ ಮೇಲೆ ಛಾವಣಿಯಿಂದ ಬಿದ್ದವು. ಅದೃಷ್ಟವಶಾತ್ ಯಾವುದೇ ಗಾಯವಾಗಿಲ್ಲ. ದೊಡ್ಡ ಕ್ರೀಡಾಂಗಣಗಳನ್ನು ನಿರ್ಮಿಸುವುದರಿಂದ ಯಾವುದೇ ಹಾನಿ ಇಲ್ಲ ಆದರೆ ಗುಣಮಟ್ಟವಿಲ್ಲದ ವಸ್ತುಗಳನ್ನು ಬಳಸದಿದ್ದರೆ ಪ್ರೇಕ್ಷಕರ ಜೀವಕ್ಕೆ ಅಪಾಯವಿದೆ ಎಂದು ಬಿಸಿಸಿಐ ಖಚಿತಪಡಿಸಿಕೊಳ್ಳಬೇಕು' ಎಂದು ಪಾಕಿಸ್ತಾನ ಮೂಲದ ಪತ್ರಕರ್ತರೊಬ್ಬರು ಬರೆದುಕೊಂಡಿದ್ದಾರೆ.

'ಲಕ್ನೋದಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವಿನ ವಿಶ್ವಕಪ್ ಪಂದ್ಯದ ವೇಳೆ ಪ್ರಬಲವಾದ ಗಾಳಿ ಬೀಸಿದ್ದರಿಂದ ಏಕನಾ ಸ್ಟೇಡಿಯಂನ ಛಾವಣಿಯಿಂದ ಕೆಳಗಿನ ಸೀಟುಗಳ ಮೇಲೆ ಹಲವಾರು ಹೋರ್ಡಿಂಗ್‌ಗಳು ಬಿದ್ದವು. ಮಳೆಯು ಸ್ವಲ್ಪಮಟ್ಟಿಗೆ ಆಟವನ್ನು ನಿಲ್ಲಿಸಿದ ನಂತರ, ಧೂಳಿನ ಬಿರುಗಾಳಿ ಮತ್ತು ಭಾರೀ ಗಾಳಿಯಿಂದಾಗಿ ಹಲವಾರು ಹೋರ್ಡಿಂಗ್‌ಗಳು ಪಂದ್ಯ ವೀಕ್ಷಣೆ ಮಾಡುತ್ತಿದ್ದ ಪ್ರೇಕ್ಷಕರ ಗ್ಯಾಲರಿ ಮೇಲೆ ಬಿದ್ದಿವೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.

WORLD CUP 2023: ಕೊನೆಗೂ ಗೆಲುವಿನ ಖಾತೆ ತೆರೆದ ಐದು ಬಾರಿಯ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾ

ವಿಶ್ವಕಪ್‌ನ ಬ್ಯಾನರ್‌ಗಳು ಮತ್ತು ಹೋರ್ಡಿಂಗ್‌ಗಳು ಬಿದ್ದಿವೆ. ಲಕ್ನೋದಲ್ಲಿ ಪ್ರೇಕ್ಷಕರು ಸುರಕ್ಷತೆಗಾಗಿ ದಿಕ್ಕಾಪಾಲಾಗಿ ಓಡಿದ್ದಾರೆ. ಇದ್ಯಾವ ರೀತಿಯ ಮೂಲ ಸೌಕರ್ಯ? ಐಸಿಸಿ ಮತ್ತು ಬಿಸಿಸಿಐ ಎಲ್ಲಿದೆ? ಜನರ ಜೀವದ ಜೊತೆ ನೀವೇಕೆ ಆಟವಾಡುತ್ತಿದ್ದೀರಿ? ಭಾರತದಲ್ಲಿರುವ ಈ ಸ್ಟೇಡಿಯಂಗಳು ಪ್ರೇಕ್ಷಕರ ಸುರಕ್ಷತೆಯ ದೃಷ್ಟಿಯಿಂದ ಉತ್ತಮವಾಗಿಲ್ಲ ಎಂದು ಪಾಕಿಸ್ತಾನದ ಪತ್ರಕರ್ತ ಫರೀದ್‌ ಖಾನ್ ಬರೆದಿದ್ದಾರೆ.

ಕೆಎಲ್‌ ರಾಹುಲ್‌ಗೆ ಗೋಲ್ಡ್‌ ಮೆಡಲ್‌, ಭರ್ಜರಿಯಾಗಿ ಕಿಚಾಯಿಸಿದ ಟೀಮ್‌!

Follow Us:
Download App:
  • android
  • ios