Asianet Suvarna News Asianet Suvarna News

Duleep Trophy Final: ಬಾಬಾ ಇಂದ್ರಜಿತ್ ಶತಕ, ದಕ್ಷಿಣ ವಲಯಕ್ಕೆ ಇನಿಂಗ್ಸ್‌ ಮುನ್ನಡೆ

ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಮೊದಲ ಇನಿಂಗ್ಸ್‌ ಮುನ್ನಡೆ ಪಡೆದ ದಕ್ಷಿಣ ವಲಯ
ಪಶ್ಚಿಮ ವಲಯ ಎದುರು ಆಕರ್ಷಕ ಶತಕ ಚಚ್ಚಿದ ಬಾಬಾ ಇಂದ್ರಜಿತ್
ಎರಡನೇ ದಿನದಾಟದಂತ್ಯಕ್ಕೆ ದಕ್ಷಿಣ ವಲಯಕ್ಕೆ 43 ರನ್‌ಗಳ ಮುನ್ನಡೆ

Duleep Trophy Final Baba Indrajith Century ensures first Innings lead for South Zone against West Zone kvn
Author
First Published Sep 23, 2022, 9:21 AM IST

ಕೊಯಮತ್ತೂರು(ಸೆ.23): ಬಾಬಾ ಇಂದ್ರಜಿತ್‌ರ ಆಕರ್ಷಕ ಶತಕ, ಕೆ.ಗೌತಮ್‌ರ ಹೋರಾಟದ 43 ರನ್‌ಗಳ ನೆರವಿನಿಂದ ದುಲೀಪ್‌ ಟ್ರೋಫಿ ಫೈನಲ್‌ನಲ್ಲಿ ಪಶ್ಚಿಮ ವಲಯ ವಿರುದ್ಧ ದಕ್ಷಿಣ ವಲಯ ಮೊದಲ ಇನ್ನಿಂಗ್‌್ಸ ಮುನ್ನಡೆ ಪಡೆದಿದೆ. ಇಂದ್ರಜಿತ್‌ 125 ಎಸೆತಗಳಲ್ಲಿ 118 ರನ್‌ ಗಳಿಸಿ ತಂಡಕ್ಕೆ ನೆರವಾದರೆ, ಮನೀಶ್‌ ಪಾಂಡೆ(48) ಹಾಗೂ ಗೌತಮ್‌ (55 ಎಸೆತದಲ್ಲಿ 43 ರನ್‌) 2ನೇ ದಿನದಂತ್ಯಕ್ಕೆ ದಕ್ಷಿಣ ವಲಯ 7 ವಿಕೆಟ್‌ಗೆ 318 ರನ್‌ ಗಳಿಸಿ, 43 ರನ್‌ ಮುನ್ನಡೆ ಪಡೆಯಲು ಕಾರಣರಾದರು.

ಮೊದಲ ದಿನದಂತ್ಯಕ್ಕೆ 8 ವಿಕೆಟ್‌ಗೆ 250 ರನ್‌ ಗಳಿಸಿದ್ದ ಪಶ್ಚಿಮ ವಲಯ 2ನೇ ದಿನವಾದ ಗುರುವಾರ ಆ ಮೊತ್ತಕ್ಕೆ ಕೇವಲ 20 ರನ್‌ ಸೇರಿಸಿತು. ಹೆಟ್‌ ಪಟೇಲ್‌ 98 ರನ್‌ ಗಳಿಸಿ ಔಟಾದರು. ಎಡಗೈ ಸ್ಪಿನ್ನರ್‌ ಆರ್‌.ಸಾಯಿಕಿಶೋರ್‌ 86 ರನ್‌ಗೆ 5 ವಿಕೆಟ್‌ ಕಬಳಿಸಿದರು.

Duleep Trophy Final ದಕ್ಷಿಣ ವಲಯ ವಿರುದ್ದ ಪಶ್ಚಿಮ ವಲಯಕ್ಕೆ ಸಂಕಷ್ಟ

ಬ್ಯಾಟಿಂಗ್‌ ಆರಂಭಿಸಿದ ದಕ್ಷಿಣ ವಲಯ ಮಯಾಂಕ್‌ ಅಗರ್‌ವಾಲ್‌(09)ರ ವಿಕೆಟನ್ನು ಬೇಗನೆ ಕಳೆದುಕೊಂಡಿತು. ರೋಹನ್‌ ಕುನ್ನುಂಮಾಲ್‌ 31, ನಾಯಕ ಹನುಮ ವಿಹಾರಿ 25 ರನ್‌ ಗಳಿಸಿ ಔಟಾದರು. ಒಂದು ಹಂತದಲ್ಲಿ ದಕ್ಷಿಣ ವಲಯ 243 ರನ್‌ಗೆ 6 ವಿಕೆಟ್‌ ಕಳೆದುಕೊಂಡು ಹಿನ್ನಡೆ ಅನುಭವಿಸುವ ಆತಂಕದಲ್ಲಿತ್ತು. ಈ ಹಂತದಲ್ಲಿ ಆಲ್ರೌಂಡರ್‌ಗಳಾದ ರವಿ ತೇಜಾ(26) ಹಾಗೂ ಗೌತಮ್‌ 7ನೇ ವಿಕೆಟ್‌ಗೆ ಕೇವಲ 16.2 ಓವರಲ್ಲಿ 63 ರನ್‌ ಜೊತೆಯಾಟವಾಡಿ ತಂಡಕ್ಕೆ ಇನ್ನಿಂಗ್‌್ಸ ಮುನ್ನಡೆ ತಂದುಕೊಟ್ಟರು.

ರವಿ ತೇಜಾ ಹಾಗೂ ಸಾಯಿಕಿಶೋರ್‌(06) 3ನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇದು 5 ದಿನಗಳ ಪಂದ್ಯವಾಗಿರುವ ಕಾರಣ ದಕ್ಷಿಣ ವಲಯ ಮೊದಲ ಇನ್ನಿಂಗ್ಸಲ್ಲಿ 100ಕ್ಕಿಂತ ಹೆಚ್ಚು ರನ್‌ ಮುನ್ನಡೆ ಪಡೆದರೆ, ಗೆಲುವಿನ ನಿರೀಕ್ಷೆ ಮಾಡಬಹುದು.

ಸ್ಕೋರ್‌:

ಪಶ್ಚಿಮ ವಲಯ 96.3 ಓವರಲ್ಲಿ 270/10(ಹೆಟ್‌ ಪಟೇಲ್‌ 98, ಉನಾದ್ಕತ್‌ 47*, ಸಾಯಿಕಿಶೋರ್‌ 5-86),

ದಕ್ಷಿಣ ವಲಯ 2ನೇ ದಿನದಂತ್ಯಕ್ಕೆ 318/7(ಇಂದ್ರಜಿತ್‌ 118, ಪಾಂಡೆ 48, ಉನಾದ್ಕತ್‌ 3-52)

‘ಎ’ ಏಕದಿನ: ಕಿವೀಸ್‌ ವಿರುದ್ಧ ಭಾರತಕ್ಕೆ ಜಯ

ಚೆನ್ನೈ: ಮಧ್ಯಮ ವೇಗಿಗಳಾದ ಶಾರ್ದೂಲ್‌ ಠಾಕೂರ್‌(4/32) ಹಾಗೂ ಕುಲ್ದೀಪ್‌ ಸೇನ್‌(3/30)ರ ಆಕರ್ಷಕ ಬೌಲಿಂಗ್‌ ಪ್ರದರ್ಶನದ ನೆರವಿನಿಂದ ನ್ಯೂಜಿಲೆಂಡ್‌ ‘ಎ’ ವಿರುದ್ಧದ ಮೊದಲ ಅನಧಿಕೃತ ಪಂದ್ಯದಲ್ಲಿ ಭಾರತ ‘ಎ’ 7 ವಿಕೆಟ್‌ ಗೆಲುವು ಸಾಧಿಸಿದೆ. 

100 ರನ್‌ಗೂ ಕಡಿಮೆ ಮೊತ್ತಕ್ಕೆ ಆಲೌಟ್‌ ಆಗುವ ಭೀತಿಯಲ್ಲಿದ್ದ ನ್ಯೂಜಿಲೆಂಡ್‌ ‘ಎ’ಗೆ ಮೈಕಲ್‌ ರಿಪ್ಪೊನ್‌(61) ಹಾಗೂ ಜೋ ವಾಕರ್‌(36)ರ ಹೋರಾಟ ನೆರವಾಯಿತು. 40.2 ಓವರಲ್ಲಿ 167 ರನ್‌ಗೆ ಆಲೌಟ್‌ ಆಯಿತು. ಭಾರತ 31.5 ಓವರಲ್ಲಿ ಗುರಿ ತಲುಪಿತು. ರಜತ್‌ ಪಾಟೀದಾರ್‌ 45, ಋುತುರಾಜ್‌ 41 ರನ್‌ ಗಳಿಸಿದರು.

Follow Us:
Download App:
  • android
  • ios