ದುಲೀಪ್ ಟ್ರೋಫಿ ಫೈನಲ್‌ನಲ್ಲಿ ದಕ್ಷಿಣ ವಲಯ ದಿಟ್ಟ ಆರಂಭಪಶ್ವಿಮ ವಲಯ ಎದುರು ಭರ್ಜರಿ ಪ್ರದರ್ಶನ ತೋರುತ್ತಿರುವ ದಕ್ಷಿಣ ವಲಯಮೊದಲ ದಿನದಾಟದಂತ್ಯಕ್ಕೆ ಪಶ್ಚಿಮ ವಲಯ 8 ವಿಕೆಟ್ ನಷ್ಟಕ್ಕೆ 250

ಕೊಯಮತ್ತೂರು(ಸೆ.22): ತಾರಾ ಬ್ಯಾಟರ್‌ಗಳ ದಂಡನ್ನೇ ಹೊಂದಿದ್ದರೂ ಪಶ್ಚಿಮ ವಲಯ ದುಲೀಪ್‌ ಟ್ರೋಫಿ ಫೈನಲ್‌ನ ಮೊದಲ ಇನ್ನಿಂಗ್‌್ಸನಲ್ಲಿ ಸಾಧಾರಣ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿದೆ. ಬುಧವಾರ ಇಲ್ಲಿ ಆರಂಭಗೊಂಡ ದಕ್ಷಿಣ ವಲಯ ವಿರುದ್ಧದ ಪಂದ್ಯದ ಮೊದಲ ದಿನದಂತ್ಯಕ್ಕೆ ಪಶ್ಚಿಮ ವಲಯ 8 ವಿಕೆಟ್‌ ನಷ್ಟಕ್ಕೆ 250 ರನ್‌ ಗಳಿಸಿತು.

ಗುಜರಾತ್‌ನ ಯುವ ವಿಕೆಟ್‌ ಕೀಪರ್‌ ಹೆಟ್‌ ಪಟೇಲ್‌(ಔಟಾಗದೆ 96), ಸೌರಾಷ್ಟ್ರದ ಅನುಭವಿ ಜಯ್‌ದೇವ್‌ ಉನಾದ್ಕತ್‌(ಔಟಾಗದೆ 39) ಜೊತೆ ಮುರಿಯದ 9ನೇ ವಿಕೆಟ್‌ಗೆ 83 ರನ್‌ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದ್ದರೆ. ಅಜಿಂಕ್ಯ ರಹಾನೆ(08), ಶ್ರೇಯಸ್‌ ಅಯ್ಯರ್‌(37), ಸರ್ಫರಾಜ್‌ ಖಾನ್‌(34), ಯಶಸ್ವಿ ಜೈಸ್ವಾಲ್‌(01), ಪ್ರಿಯಾಂಕ್‌ ಪಾಂಚಲ್‌(07) ವೈಫಲ್ಯ ಕಂಡರು. ಇದರಿಂದಾಗಿ ಪಶ್ಚಿಮ ವಲಯ 167 ರನ್‌ಗೆ 8 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಗುರಿಯಾಯಿತು.

ದಕ್ಷಿಣ ವಲಯ ಪರ ವೇಗಿಗಳಾದ ಬಸಿಲ್‌ ಥಂಪಿ 42 ರನ್‌ಗೆ 2 ವಿಕೆಟ್‌ ಕಿತ್ತರೆ, ಸಿ.ವಿ.ಸ್ಟೀಫನ್‌ 39 ರನ್‌ಗೆ 2 ವಿಕೆಟ್‌ ಕಬಳಿಸಿದರು. ಮತ್ತೊಮ್ಮೆ ಎಡಗೈ ಸ್ಪಿನ್ನರ್‌ ಆರ್‌.ಸಾಯಿಕಿಶೋರ್‌ ಎದುರಾಳಿಗೆ ಕಂಟಕರಾದರು. ಪ್ರಮುಖ ಬ್ಯಾಟರ್‌ಗಳಾದ ಶ್ರೇಯಸ್‌ ಅಯ್ಯರ್‌ ಹಾಗೂ ಸರ್ಫರಾಜ್‌ ಖಾನ್‌ರನ್ನು ಔಟ್‌ ಮಾಡಿದ ತಮಿಳುನಾಡಿನ ಸಾಯಿಕಿಶೋರ್‌ ದಕ್ಷಿಣ ವಲಯ ಮೇಲುಗೈ ಸಾಧಿಸಲು ನೆರವಾದರು.

ಸ್ಕೋರ್‌:
ಪಶ್ಚಿಮ ವಲಯ ಮೊದಲ ಇನ್ನಿಂಗ್‌್ಸ 250/8
(ಹೆಟ್‌ ಪಟೇಲ್‌ 96*, ಉನಾದ್ಕತ್‌ 39*, ಸಾಯಿಕಿಶೋರ್‌ 3/80)

ಟಿ20: ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್‌ಗೆ ಗೆಲುವು

ಕರಾಚಿ: 17 ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಂಡಿರುವ ಇಂಗ್ಲೆಂಡ್‌ 7 ಪಂದ್ಯಗಳ ಟಿ20 ಸರಣಿಯಲ್ಲಿ ಶುಭಾರಂಭ ಮಾಡಿದೆ. ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ 4 ವಿಕೆಟ್‌ ಗೆಲುವು ಸಾಧಿಸಿ ಇಂಗ್ಲೆಂಡ್‌ 1-0 ಮುನ್ನಡೆ ಪಡೆಯಿತು. ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ 20 ಓವರಲ್ಲಿ 7 ವಿಕೆಟ್‌ ನಷ್ಟಕ್ಕೆ 158 ರನ್‌ ಗಳಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಇಂಗ್ಲೆಂಡ್‌ 19.2 ಓವರಲ್ಲಿ 6 ವಿಕೆಟ್‌ ಕಳೆದುಕೊಂಡು ಜಯಿಸಿತು.

Duleep Trophy Final: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಶ್ಚಿಮ ವಲಯಕ್ಕೆ ಆರಂಭಿಕ ಆಘಾತ

ಸ್ಕೋರ್‌: 
ಪಾಕಿಸ್ತಾನ 20 ಓವರಲ್ಲಿ 158/7(ರಿಜ್ವಾನ್‌ 68, ವುಡ್‌ 3-24) 
ಇಂಗ್ಲೆಂಡ್‌ 19.2 ಓವರಲ್ಲಿ 160/4(ಹೇಲ್ಸ್‌ 53, ಬ್ರೂಕ್‌ 42*, ಖಾದಿರ್‌ 2-36)

ಟಿ20 ರ‍್ಯಾಂಕಿಂಗ್‌‌: 3ನೇ ಸ್ಥಾನಕ್ಕೇರಿದ ಸೂರ್ಯ

ದುಬೈ: ಆಸ್ಪ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ 46 ರನ್‌ ಗಳಿಸಿದ ಭಾರತದ ಸೂರ್ಯಕುಮಾರ್‌ ಯಾದವ್‌ ಐಸಿಸಿ ಟಿ20 ಬ್ಯಾಟರ್‌ಗಳ ರ‍್ಯಾಂಕಿಂಗ್‌‌ನಲ್ಲಿ ಒಂದು ಸ್ಥಾನ ಏರಿಕೆ ಕಂಡಿದ್ದು 3ನೇ ಸ್ಥಾನಕ್ಕೇರಿದ್ದಾರೆ. ಪಾಕಿಸ್ತಾನದ ನಾಯಕ ಬಾಬರ್‌ ಆಜಂರನ್ನು ಸೂರ್ಯ ಹಿಂದಿಕ್ಕಿದ್ದಾರೆ. ಪಾಕಿಸ್ತಾನದ ವಿಕೆಟ್‌ ಕೀಪರ್‌ ಮೊಹಮದ್‌ ರಿಜ್ವಾನ್‌ 825 ರೇಟಿಂಗ್‌ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, ದಕ್ಷಿಣ ಆಫ್ರಿಕಾದ ಏಡನ್‌ ಮಾರ್ಕ್ರಮ್‌ 792 ರೇಟಿಂಗ್‌ ಅಂಕಗಳೊಂದಿಗೆ 2ನೇ ಸ್ಥಾನ ಪಡೆದಿದ್ದಾರೆ. ಸೂರ್ಯ 780 ಅಂಕ ಹೊಂದಿದ್ದಾರೆ. ಹಾರ್ದಿಕ್‌ ಪಾಂಡ್ಯ 22 ಸ್ಥಾನ ಜಿಗಿತ ಕಂಡಿದ್ದು 65ನೇ ಸ್ಥಾನ ಪಡೆದಿದ್ದಾರೆ.