ರಾವಲ್ಪಿಂಡಿ(ಡಿ.17): ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌‌ನಲ್ಲಿ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಮಾರ್ನಸ್ ಲ್ಯಾಬ್ಸ್‌ಚಾಗ್ನೆ, ಪಾಕಿಸ್ತಾನದ ಬಾಬರ್ ಅಜಮ್ ಕೂಡ ಬಡ್ತಿ ಪಡೆದಿದ್ದಾರೆ. ಕೊಹ್ಲಿ ದಾಖಲೆ ದಾಟಿ ಮುಂದೆ ಸಾಗುವುದು ಕಷ್ಟ ಅನ್ನೋ ಉತ್ತರ ಎಲ್ಲಾ ದಿಗ್ಗಜ ಕ್ರಿಕೆಟಗರದ್ದು. ಇದರ  ನಡುವೆ ಪಾಕಿಸ್ತಾನ ಬ್ಯಾಟ್ಸ್‌ಮನ್ ಬಾಬರ್ ಅಜಮ್‌ನನ್ನು ಕೊಹ್ಲಿ ಜೊತೆ ಹೋಲಿಕೆ ಮಾಡಲಾಗುತ್ತಿದೆ. ಇದೀಗ ಬಾಬರ್ ಹೋಲಿಕೆ ಕುರಿತು ಮಾತನಾಡಿದ್ದಾರೆ.

ಇದನ್ನೂ ಓದಿ: IPL ಹರಾಜಿಗೂ ಮುನ್ನ ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿದ ವಿರಾಟ್ ಕೊಹ್ಲಿ !

ವಿರಾಟ್ ಕೊಹ್ಲಿ ಈಗಾಗಲೇ ಸಾಕಷ್ಟು ಸಾಧಿಸಿದ್ದಾರೆ. ಸ್ಥಿರ ಪ್ರದರ್ಶನ, ದಾಖಲೆ ಬ್ಯಾಟಿಂಗ್, ಗೆಲುವಿನ ಸರಾಸರಿ ಸೇರಿದಂತೆ ಪ್ರತಿಯೊಂದರಲ್ಲೂ ದಾಖಲೆ ಬರೆಯುತ್ತಿದ್ದಾರೆ. ನನ್ನನ್ನು ಈಗಲೇ ಕೊಹ್ಲಿಗೆ ಹೋಲೀಕೆ ಮಾಡಬೇಡಿ. ಕೊಹ್ಲಿ ಸದ್ಯ ಸಾಧಿಸಿರುವುದನ್ನು ನಾನು ಕೂಡ ಸಾಧಿಸಲು ಬಯಸುತ್ತೇನೆ ಎಂದು ಬಾಬರ್ ಅಜಮ್ ಹೇಳಿದ್ದಾರೆ.

ಇದನ್ನೂ ಓದಿ: ICC ಟೆಸ್ಟ್ ರ‍್ಯಾಂಕಿಂಗ್ ಪ್ರಕಟ: ಸ್ಮಿತ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಕೊಹ್ಲಿ

ಕೊಹ್ಲಿ ಹಾಗೂ ಸ್ಟೀವ್ ಸ್ಮಿತ್ ಜೊತೆ ಹೋಲಿಕೆ ಮಾಡುವುದರಿಂದ ನನ್ನ ಬ್ಯಾಟಿಂಗ್ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಮಾಧ್ಯಮಗಳು ಹೆಚ್ಚು ಹೋಲಿಕೆ ಮಾಡುತ್ತಿವೆ. ನಾನು ನನ್ನ ಪ್ರದರ್ಶನದತ್ತ  ಗಮನ ಕೇಂದ್ರಿಕರಿಸಿದ್ದೇನೆ. ನನ್ನ ಬ್ಯಾಟಿಂಗ್ ವಿಡಿಯೋಗಳನ್ನು ಮತ್ತೆ ಮತ್ತೆ ನೋಡಿ ತಪ್ಪುಗಳನ್ನು ಅರಿತುಕೊಳ್ಳುತ್ತೇನೆ ಎಂದು ಬಾಬರ್ ಹೇಳಿದ್ದಾರೆ.