ಪುಣೆ(ಅ.11): ಸೌತ್ ಆಫ್ರಿಕಾ ವಿರುದ್ದದ ದ್ವಿತೀಯ ಟೆಸ್ಟ್ ಪಂದ್ಯದ 2ನೇ ದಿನ ನಾಯಕ ವಿರಾಟ್ ಕೊಹ್ಲಿ ದ್ವಿಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಕೊಹ್ಲಿ ಡಬಲ್ ಸೆಂಚುರಿ ಸಿಡಿಸೋ ಮೂಲಕ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ವಿರೇಂದ್ರ ಸೆಹ್ವಾಗ್ ಮಾತ್ರವಲ್ಲ, ಆಸ್ಟ್ರೇಲಿಯಾ ದಿಗ್ಗಜ ಡಾನ್ ಬ್ರಾಡ್ಮನ್ ದಾಖಲೆ ಪುಡಿ ಮಾಡಿದ್ದಾರೆ. 

ಇದನ್ನೂ ಓದಿ: ದ್ರಾವಿಡ್- ಗಂಗೂಲಿ ದಾಖಲೆ ಮುರಿದ ಕೊಹ್ಲಿ-ರಹಾನೆ!

ಪುಣೆ ಪಂದ್ಯದಲ್ಲಿ ಕೊಹ್ಲಿ 7ನೇ ದ್ವಿಶತಕ ಸಿಡಿಸಿದರು. ಈ ಮೂಲಕ ಸಚಿನ್ ತೆಂಡುಲ್ಕರ್ ಹಾಗೂ ಸೆಹ್ವಾಗ್ ಸಿಡಿಸಿದ 6 ದ್ವಿಶತಕ ಸಾಧನೆಯನ್ನು ಹಿಂದಿಕ್ಕಿದರು. ಸಚಿನ್ ಹಾಗೂ ಸೆಹ್ವಾಗ್ ತಲಾ 6 ಡಬಲ್ ಸೆಂಚುರಿ ಸಿಡಿಸಿದ್ದಾರೆ. ಇದೀಗ ಕೊಹ್ಲಿ 7ನೇ ದ್ವಿಶತಕ ಸಿಡಿಸಿದ್ದಾರೆ. ಗರಿಷ್ಠ ದ್ವಿಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಗೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

ವಿರಾಟ್ ಕೊಹ್ಲಿ 150 ರನ್ ಗಡಿ ದಾಟುತ್ತಿದ್ದಂತೆ ಆಸ್ಟ್ರೇಲಿಯಾ ದಿಗ್ಗಜ ಬ್ಯಾಟ್ಸ್‌ಮನ್ ಡಾನ್ ಬ್ರಾಡ್ಮನ್ ದಾಖಲೆ ಅಳಿಸಿಹಾಕಿದ್ದಾರೆ. 

ನಾಯಕನಾಗಿ ಗರಿಷ್ಠ 150+  ಸ್ಕೋರ್ :
9 ವಿರಾಟ್ ಕೊಹ್ಲಿ
8 ಡಾನ್ ಬ್ರಾಡ್ಮನ್
7 ಬ್ರಿಯಾನ್ ಲಾರಾ/ ಮಹೇಲಾ ಜಯವರ್ದನೆ/ ಗ್ರೇಮ್ ಸ್ಮಿತ್/ ಮೈಕಲ್ ಕ್ಲಾರ್ಕ್